ಅಪ್ಪು ಪುಣ್ಯಸ್ಮರಣೆ ದಿನವೇ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಡೆದಿದೆ.
ಅಪ್ಪು ಇಲ್ಲದ ಜೀವನ ಬೇಡವೆಂದು ಹೊಸ ಆನಂದೂರು ಗ್ರಾಮದ ಕಿರಣ್ ನೇಣಿಗೆ ಶರಣಾಗಿದ್ದಾನೆ. ನಿನ್ನೆ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡು ಅಪ್ಪುಗೆ ಪೂಜೆ ಸಲ್ಲಿಸಿದ್ದ ಅಭಿಮಾನಿ ಕಿರಣ್ ಅನ್ನಸಂತರ್ಪಣೆ ಕೂಡ ನಡೆಸಿದ್ದ.
ಕಾರ್ಯಕ್ರಮದ ಬಳಿಕ ಕಿರಣ್ ಮನೆಗೆ ಬಂದು ಅಪ್ಪುಗಾಗಿ ಕಣ್ಣೀರಿಟ್ಟು ಗೋಳಾಡಿದ್ದು, ಬಳಿಕ ಮನನೊಂದು ನೇಣಿಗೆ ಶರಣಾಗಿದ್ದಾನೆ.