ರಾಜ್ಯದಲ್ಲಿ ಬಸ್ ನಿಲ್ದಾಣದ ಗುಂಬಜ್ ವಿವಾದ ದಿನಕ್ಕೊಂದು ಹೊಸ ರೂಪ ಪಡೆಯುತ್ತಿದೆ. ಈ ಮಧ್ಯೆ ಪ್ರತಿಕ್ರಿಯೆ ನೀಡಿರೋ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್, ಕೈ ಮುಗಿದು ಕೇಳ್ತಿನಿ, ಈ ವಿಷಯವನ್ನ ವಿವಾದ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತ್ನಾಡಿದ ಅವರು, ನನ್ನ ಉದ್ದೇಶ ಇದ್ದಿದ್ದು, ಮೈಸೂರು ಅರಮನೆ ಮಾದರಿಯಲ್ಲಿ ಹೆರಿಟೇಜ್ ರೀತಿ ಕಾಣಬೇಕಂತ ಸುಮಾರು 12 ಬಸ್ ನಿಲ್ದಾಣಗಳನ್ನ ನಿರ್ಮಣ ಮಾಡಲಾಗಿದೆ. ಜೆಎಸ್ಎಸ್ ಕಾಲೇಜಿನ ಮಕ್ಕಳು ಹಾಗೂ ನಂಜನಗೂಡುಗೆ ಹೋಗುವವರು ಸಮಸ್ಯೆ ಎದುರಿಸ್ತಿದ್ರು. ಈ ಉದ್ದೇಶಕ್ಕೆ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ವಿವಾದ ಆಗಿದ್ದಕ್ಕೆ ರಾಜ್ಯದ ಅಧ್ಯಕ್ಷರಿಗೆ ಪತ್ರ ಬರೆದಿದ್ದೀನಿ. ಸಿಎಂಗೂ ಮನವಿ ಮಾಡಿ ಪತ್ರ ಬರೆದಿದ್ದೀನಿ ಎಂದು ತಿಳಿಸಿದರು. ಇದರಲ್ಲಿ ವಿವಾದ ಏನಾದ್ರೂ ಇದ್ದಲ್ಲಿ ತಜ್ಞರ ಸಮಿತಿ ಕಳುಹಿಸಿಕೊಡಿ. ಅವರು ಅದನ್ನು ಪರೀಕ್ಷಿಸಿ, ಅದರಲ್ಲಿ ಏನಾದ್ರೂ ತಪ್ಪು ಇದ್ದರೇ ಕ್ಷಮೆ ಕೇಳುತ್ತಿನಿ. ಜೊತೆಗೆ ನೀವೇ ಅದನ್ನ ಹೊಡೆದು ಹಾಕಿ ಬಿಡಿ. ಅಲ್ಲಿ ಖರ್ಚು ಆಗೋ ಹಣವನ್ನ ನನ್ನ ಸಂಬಳದಲ್ಲಿ ಕೊಡ್ತಿನಿ ಅಂತ ಹೇಳಿದಿನಿ ಹೊರತು, ಅದರಲ್ಲಿ ಯಾವುದು ವಿವಾದ ಆಗಲಿ ಅಂತ ಹೇಳಿಲ್ಲ.
ಗುಂಬಜ್ ವಿವಾದ:ದಿನಕ್ಕೊಂದು ಹೊಸ ರೂಪ
Date: