ಮೈಸೂರು ಮೃಗಾಲಯದಲ್ಲಿ ‘ತಬೋ’ ಎಂಬ ಗೊರಿಲ್ಲಾದ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. 15ನೇ ವಸಂತಕ್ಕೆ ಕಾಲಿರಿಸಿರುವ ‘ತಬೋ’ ಗೊರಿಲ್ಲಾದ ಹುಟ್ಟುಹಬ್ಬವನ್ನು ವಿಶೇಷ-ವಿಭಿನ್ನವಾಗಿ ಆಚರಣೆ ಮಾಡಲಾಗಿದ್ದು,
ಮೃಗಾಲಯ ಸಿಬ್ಬಂದಿ ತಬೋಗೆ ಇಷ್ಟವಾದ ಹಣ್ಣು-ತರಕಾರಿಯನ್ನು ನೀಡಿದ್ದಾರೆ. ಹಣ್ಣು-ತರಕಾರಿಯಿಂದ ‘ಹ್ಯಾಪಿ ಬರ್ತ್ ಡೇ’ ತಬೋ ಎಂದು ಬರೆದು ಶುಭಾಶಯ ಕೋರಲಾಗಿದೆ.
ಇನ್ನ ಗೊರಿಲ್ಲಾ ಮನೆ ಆವರಣದಲ್ಲಿ ಪೈನಾಪಲ್, ಪರಂಗಿ, ಸೇಬು, ಕಿತ್ತಳೆ, ದ್ರಾಕ್ಷಿ, ಕರ್ಬೂಜಾ, ಬಾದಾಮಿ, ಗೋಡಂಬಿ ಸೇರಿ ವಿವಿಧ ಹಣ್ಣುಗಳಿಂದ ವಿಶಿಷ್ಟವಾಗಿ ಅಲಂಕರಿಸಲಾಗಿದ್ದು,
ಬರ್ತ್ ಡೇ ಬಾಯ್ ತಬೋಗೆ ಪ್ರವಾಸಿಗರು ಶುಭಾಶಯ ಕೋರಿದ್ದಾರೆ.