ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ತಮ್ಮ ತಮ್ಮ ದೇವರುಗಳನ್ನು ಆಗಾಗ ಸ್ಮರಿಸಿಕೊಳ್ಳುವುದು ಸರ್ವೇ ಸಾಮಾನ್ಯ. ದೇವರನ್ನು ನೆನೆದುಕೊಳ್ಳಲು ಇಂದಹದ್ದೇ ಜಾಗವಿರಬೇಕು, ಅಲ್ಲಿ ಮಾತ್ರವೇ ದೇವರ ಸ್ಮರಣೆ ಮಾಡಬೇಕು ಎಂದು ಯಾವ ಕಾನೂನು ಸಹ ಹೇಳಿಲ್ಲ. ಆದರೆ ಇಲ್ಲೋಂದು ಏರ್‍ಲೈನ್ ಸಂಸ್ಥೆ ಅಂತಹ ನೀಚ ಬುದ್ದಿಯನ್ನು ತೋರಿಸಿದೆ. ವಿಮಾನದಲ್ಲಿ ಅಲ್ಲಾಹ್… ಎಂದು ದೇವರ ಸ್ಮರಣೆ ಮಾಡಿದಕ್ಕೆ ಮುಸ್ಲೀಂ ದಂಪತಿಗಳನ್ನು ಹೊರ ಹಾಕಿದ ಅಮಾನವೀಯ ಘಟನೆ ಚಿಕಾಗೋ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಡೆಲ್ಟಾ ಏರ್‍ಲೈನ್ಸ್‍ಗೆ ಸೇರಿದ ಈ ವಿಮಾನ ಪ್ಯಾರಿಸ್‍ನಿಂದ ಸಿನ್ಸಿನಾಟಿಗೆ ಹೊರಟಿತ್ತು. ಈ ವೇಳೆ ಅಲ್ಲಾಹ್ ಎಂದು ಹೇಳಿದಕ್ಕೆ ನಮ್ಮನ್ನು ಬಲವಂತವಾಗಿ ವಿಮಾನದಿಂದ ಕೆಳಕ್ಕಿಳಿಸಲಾಯಿತು ಎಂದು ನಾಝಿಯಾ ಹಾಗೂ ಫೈಸಲ್ ದಂಪತಿ ಆರೋಪಿಸಿದ್ದಾರೆ.
ನಾಝಿಯಾ ಅವರು ತಮ್ಮ ಕುಟುಂಬ ವರ್ಗದವರಿಗೆ ಮೆಸೇಜ್ ಕಳುಹಿಸಿ ಹೆಡ್‍ಫೋನ್ ಹಾಕಿಕೊಂಡು ಕುಳಿತ್ತಿದ್ದರಂತೆ. ಆಕೆ ತಲೆಗೆ ಸ್ಕಾರ್ಫ್ ಕಟ್ಟಿಕೊಂಡಿದ್ದಾಳೆ, ಜೊತೆಗೆ ಮೊಬೈಲ್ ಬಳಸುತ್ತಿದ್ದರಂತೆ. ತನ್ನ ಪತಿ ಫೈಸಲ್ ಬೆವರುತ್ತಿದ್ದರಂತೆ, ಅಲ್ಲದೇ ಪದೇ ಪದೇ ಅಲ್ಲಾಹ್ ಎಂದು ಕರೆಯತ್ತಿದ್ದರು. ಅದನ್ನು ಕಂಡು ಪಕ್ಕದಲ್ಲಿ ಕೂತ ಪ್ರಯಾಣಿಕನೊಬ್ಬ ಈತನೊಂದಿಗೆ ಕೂರಲು ಆಗುತ್ತಿಲ್ಲವೆಂದು ಪೈಲಟ್ ಬಳಿ ದೂರಿದ್ದಾನೆ. ಆತನನ್ನು ಕೂಡಲೇ ವಿಮಾನದಿಂದ ಕೆಳಗಿಳಿಸುವಂತೆ ಹೇಳಿದ್ದಾನೆ. ಇದರಿಂದ ನಮ್ಮಿಬ್ಬರನ್ನು ವಿಚಾರಣೆ ನೆಪದಲ್ಲಿ ಬಲವಂತವಾಗಿ ವಿಮಾನದಿಂದ ಕೆಲಗಿಳಿಸಲಾಗಿದೆ ಎಂದು ನಾಝಿಯಾ ಆರೋಪಿಸಿದ್ದಾರೆ. ಈ ಕುರಿತು ದೂರನ್ನೂ ಸಹ ದಾಖಲಿಸಿದ್ದಾರೆ. ಘಟನೆಯ ಕುರಿತು ಕ್ಷಮೆ ಕೋರಿದ ವಿಮಾನ ಸಂಸ್ಥೆ ಇನ್ನು ಈ ರೀತಿ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
POPULAR STORIES :
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!