ರೈಲಿನಲ್ಲಿ ದೂರದಿಂದ ಪ್ರಯಾಣಿಸಿಕೊಂಡು ಬಂದು ಸುಸ್ತಾಗಿ ಅದೆಷ್ಟೋ ಪ್ರಯಾಣಿಕರು ಬಾಗಿಲ ಬಳಿ ಕೂರಲು ಬರುತ್ತಾರೆ. ಇಲ್ಲೋ ತಮ್ಮ ಗೆಳಯನೊಂದಿಗೆ ಹಾಗೆ ಮಾತಾಡುತ್ತಾ ರೈಲಿನ ಬಾಗಿಲ ಬಳಿ ಕೂರುವುದು ಸಾಮಾನ್ಯ. ಅಥವಾ ಹೆಡ್‍ಫೊನ್ ಹಾಕಿಕೊಂಡು ಹಾಡು ಕೇಳುತ್ತಾ ತನ್ನದೇ ಲೋಕದಲ್ಲಿ ತಲ್ಲೀನರಾಗಿ ಕೂತಿರುವ ಅದೆಷ್ಟೋ ಯುವಕರನ್ನು ನೋಡಬಹುದು… ಆದರೆ ಅದೇ ರೀತಿ ನಿಮಗಾಗಿ ಹೊರಗೆ ಒಂದು ದೊಡ್ಡ ಗ್ಯಾಂಗೇ ಕಾಯ್ತಾ ಇರತ್ತೆ ಹುಷಾರ್… ನಿಮ್ಮದೇ ಲೋಕದಲ್ಲಿ ನೀವು ಸಂಚರಿಸುತ್ತದ್ದರೆ ಇದ್ದಕಿದ್ದ ಹಾಗೆ ಅವರು ನಿಮ್ಮ ಮೇಲೆ ಅಟ್ಯಾಕ್ ಮಾಡುತ್ತಾರೆ ನೆನಪಿರಲಿ…
ಹೌದು… ಈ ಸ್ಟೋರಿಯಲ್ಲಿರುವುದು ಕಟ್ಟು ಕಥೆಯಲ್ಲ ಬದಲಾಗಿ ಪ್ರಸ್ತುತದ ದಿನಗಳಲ್ಲಿ ನಡೀತಾ ಇರೋ ಒಂದು ಘಟನೆ. ಮೈಸೂರು-ಬೆಂಗಳೂರು ಮಾರ್ಗದಲ್ಲಿ ಇದೀಗ ಸ್ಲಂ ಹುಡುಗರ ಹಾವಳಿ ಹಾಗೂ ಮಾದಕ ವ್ಯಸನಿಗಳ ದಂಡೇ ಈ ಭಾಗದಲ್ಲಿ ಬಿಡಾರ ಹೂಡಿದೆ. ಐದರಿಂದ ಹತ್ತು ಜನರ ಗುಂಪು ಪೊದೆಯೊಳಗೆ ಅವಿತುಕೊಂಡು ರೈಲು ಬರುವಿಕೆಗಾಗಿ ಕಾಯ್ತಾ ಇರ್ತಾರೆ. ಯಾವ ಭಾಗದಲ್ಲಿ ರೈಲು ನಿಧಾನವಾಗಿ ಚಲಿಸುತ್ತದೆಯೊ ಅಲ್ಲಿ ಬಂದು ಅವಿತು ಕುಳಿತ್ತಿರುತ್ತಾರೆ ನೋಡಿ.. ಈ ವೇಳೆ ಬಾಗಿಲ ಬಳಿ ನೀವು ಮೈಮರೆತು ಕುಳಿತುಕೊಂಡು ಫೊನ್ ಅಥವಾ ಇನ್ಯಾವುದೇ ಬೆಲೆ ಬಾಳುವ ವಸ್ತುವನ್ನು ನಿಮ್ಮ ಕೈಯಲ್ಲೋ ಅಥವಾ ಕೊರಳಿನಲ್ಲೋ ಇದ್ದರೆ ಕಂಡಿತ ಅದು ಗೋವಿಂದನ ಪಾದಕ್ಕೆ ಸೇರೋದು ಗ್ಯಾರಂಟಿ. ಅಷ್ಟು ಸುಲಭವಾಗಿ ಕೆಲಸ ಮುಗಿಸಿಬಿಡುತ್ತಾರೆ. ಅಷ್ಟೇ ಅಲ್ಲ ಈ ದಾರಿಲಿ ಸ್ಲಂ ಹುಡುಗರು ಹಾಗೂ ಮಾಧಕ ವ್ಯಸನಿಗಳು ಪ್ರಯಾಣಿಕರಿಗೆ ಹೊಡೆಯುವ ರೀತಿಯಲ್ಲಿ ಬಂದು ಅವರನ್ನು ಹೆದರಿಸುವ ಉದಾಹಣೆಗಳು ಅದೆಷ್ಟೋ ನಡೆದು ಹೋಗಿದೆ. ಮಾಧಕ ವ್ಯಸನಿಗಳಂತೂ ಮೈಮೇಲೆ ಪ್ರಜ್ಞೆಯನ್ನೇ ಕಳೆದುಕೊಂಡು ಸೀದಾ ಚಲಿಸುವ ರೈಲಿನ ಬಳಿ ಬಂದು ಪ್ರಯಾಣಿಕರಿಗೆ ಧಮ್ಕಿ ಹಾಕುತ್ತಾರೆ. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ರೈಲ್ವೇ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೇ ಪ್ರಯಾಣಿಕರಿಗೆ ಪಜೀತಿ ತಂದಿಡುತ್ತಿದ್ದಾರೆ. ಪ್ರತಿ ದಿನ ಪ್ರಯಾಣಿಕರು ಹುಡುಗರ ಹಾವಳಿಗೆ ಬೇಸತ್ತು ಹೆದರಿಕೊಂಡು ಬಾಗಿಲ ಬಳಿ ಕೂರುವುದೇ ಕಮ್ಮಿ. ಇನ್ನು ಹೊಸಬರೇನಾದರು ಬಾಗಿಲ ಬಳಿ ಇದ್ದರೆ ಅವರ ಪಾಡು ಏನಾಗಬಹುದು ನಿವೇ ಯೋಚಿಸಿ..!
- ಪ್ರಮೋದ್ ಲಕ್ಕವಳ್ಳಿ.
POPULAR STORIES :
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!