ಒಲಿಂಪಿಕ್ಸ್ ನಲ್ಲಿ ಅಭಿನವ್ ಬಿಂದ್ರಾಗೆ 4ನೇ ಸ್ಥಾನ ಸಿಗಲು ಕಾರಣವೇನು ಗೊತ್ತೇ..?

Date:

ನಮ್ಮ ಭಾರತದ ಶೂಟಿಂಗ್ ಚ್ಯಾಂಪಿಯನ್ ಅಭಿನವ್ ಬಿಂದ್ರಾಗೆ ಕೆಲವೇ ಅಂತರದಲ್ಲಿ ಬ್ರೋಂಜ್ ಪದಕ ತಪ್ಪಿ ಹೋಯಿತು.ಅವರು 10 m ಏರ್ ರೈಫಲ್ ಫೈನಲ್ಸ್ ನಲ್ಲಿ 163.8 ಅಂಕ ಪಡೆಯುವುದರೊಂದಿಗೆ 4ನೇ ಸ್ಥಾನ ತನ್ನದಾಗಿಸಿದ್ರು.
ಅಭಿನವ್ ಬಿಂದ್ರಾ ಜಗತ್ಪ್ರಸಿದ್ದ ಬುದ್ದಿವಂತ ಶೂಟರ್ಗಳಲ್ಲೊಬ್ಬರಾಗಿದ್ದು‍ದಲ್ಲದೆ,10 m ಏರ್ ರೈಫಲ್ ಶೂಟಿಂಗ್ ನ ಗೋಲ್ಡ್ ಮೆಡಲ್ ಪಡೆಯಲು ಸಾಮರ್ಥ್ಯವುಳ್ಳ ಒಬ್ಬ ಪ್ರಬಲ ಪ್ರತಿಸ್ಪರ್ಧಿಯೂ ಅಗಿದ್ದರು.ಆದ್ರೆ ಅವರು ಕೆಲವೇ ಕೆಲವು ಅಂತರದಲ್ಲಿ ಬ್ರೋಂಜ್ ಮೆಡಲ್ ನ್ನೂ ಸಹ ಪಡೆಯುವಲ್ಲಿ ಸಫಲರಾಗಲಿಲ್ಲ ಯಾಕೆ ಗೊತ್ತಾ?? ಆದ್ರೆ ಇದ್ರ ಬಗ್ಗೆ ನೀವುಗಳೆಲ್ಲಾ ಇದು ಅವರ ದುರಾದೃಷ್ಟ,ಅವರ ದಿನ ಚೆನ್ನಾಗಿರಲಿಲ್ಲ,ಹಾಗೆ ಹೀಗೆ ಅದು ಇದು ಎಂದೆಲ್ಲಾ ಯೋಚನೆ ಮಾಡಬೇಕಾದ ಪ್ರಮೇಯವಿಲ್ಲ.ಇದ್ರ ಹಿಂದೆ ಒಂದು ದೊಡ್ಡ ಕಥೆ ಇದೆ ನೋಡಿ!
ಹಿರಿಯ ಪತ್ರಕರ್ತರಾದ ದಿಗ್ವಿಜಯ್ ಸಿಂಗ್ ರವರು ಈ ಘಟನೆಯ ಹಿಂದಿನ ದಿನ ಬೆಳಗ್ಗೆ ಅಭಿನವ್ ಬಿಂದ್ರಾ ಜೊತೆಗೆ ನಡೆದ ಘಟನೆಯ ಬಗೆಗಿನ ಸಂಪೂರ್ಣ ಮಾಹಿತಿ ಕಲೆ ಹಾಕಿ ಅದನ್ನು ಟಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಸ್ಪರ್ಧೆ ನಡೆಯುವ ಹಿಂದಿನ ದಿನದಂದು ಬಿಂದ್ರಾರವರು ತನ್ನ ಗನ್ ಜೊತೆಯಲ್ಲಿ ಕೆಳಗೆ ಬಿದ್ದ ಕಾರಣದಿಂದ ಅವರ ಸೈಟ್ ಡ್ಯಾಮೇಜ್ ಆಗಿ ಹೋಯಿತಂತೆ(ಸೈಟ್ ಎಂಬುದು ರೈಫಲ್ ಗೆ ಅಳವಡಿಸಲಾಗೋ ಒಂದು ಸಣ್ಣ ಉಪಕರಣವಾಗಿದ್ದು,ಇದು ಶೂಟರ್ ಗೆ ತನ್ನ ಗುರಿಯಿಡಲು ಮುಖ್ಯವಾಗಿ ಸಹಾಯ ಮಾಡುತ್ತದೆ)
ಅಭಿನವ್ ಆಲ್ಟರ್ನೇಟಿವ್ ಗನ್ ಉಪ್ಯೋಗಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರಂತೆ.
ಹೇಗೋ ದಿಗ್ವಿಜಯ್ ಸಿಂಗ್ ಇದನ್ನೆಲ್ಲಾ ನೋಡಿ ಬಿಟ್ಟಿದ್ದಾರೆಂಬುದರ ಬಗ್ಗೆ ಸುಳಿವು ಸಿಕ್ಕ ಕೂಡಲೆ ಬಿಂದ್ರಾ,ಅನಗತ್ಯ ಸುದ್ದಿ ಮಾಡಲಿಚ್ಛಿಸದೆ, ಇದನ್ನು ಯಾರಿಗೂ ತಿಳಿಸ ಬೇಡಿರೆಂದು ಕೇಳಿಕೊಂಡರಂತೆ.ಆದರೂ ಮಿ! ಸಿಂಗ್ ಶೇರ್ ಮಾಡಿಬಿಟ್ಟಿದ್ದಾರೆ ನೋಡಿ! ಆಗುವುದೆಲ್ಲಾ ಒಳ್ಳೆಯದಕ್ಕೆ ಅಂತಾರೆ ಹಾಗೇನೇ!ಇದರಿಂದಾಗಿ ನಮಗೆ ಅಭಿನವ್ ಬಗ್ಗೆ ಇನ್ನಷ್ಟು ಹೆಮ್ಮೆ ಪಡುವಂತಾಯಿತು.
ತನ್ನ ಸ್ವಂತ ಗನ್ ಇಲ್ಲದಿದ್ದರೂ ಅಭಿನವ್ ಬಿಂದ್ರಾ ಕೇವಲ ಬದಲಿ ಗನ್ ಜೊತೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಿಂದಕ್ಕೆ ಸರಿಯಲಿಲ್ಲ.ಅಲ್ಲದೆ,ಇದರ ಬಗ್ಗೆ ಏನೂ ಸುದ್ದಿ ಯನ್ನೂ ಮಾಡದೆ,ಕೇವಲ ತನ್ನ ದೃಷ್ಟಿಯನ್ನು ಅದರತ್ತ ಕೇಂದ್ರೀಕರಿಸಲು ಯತ್ನಿಸಿದರು.ಬದಲಿ ಗನ್ ಜೊತೆಯಲ್ಲಿ ಅವರು ತೀವ್ರ ವಾಗಿ ಸೆಣಸಾಡಿದ್ರೂನೂ 4 ನೇ ಸ್ಥಾನ ದೊರಕಿಸಿ ಕೊಡುವಲ್ಲಿ ಸಫಲರಾದರು.
ಇದು ನಮಗೆ ಅಭಿನವ್ ಬಗೆಗಿನ ಗೌರವವನ್ನು ಇಮ್ಮಡಿಸುತ್ತದೆ.ಅವರು ಮೆಡಲ್ ನ್ನು ಅಷ್ಟೇ ಮಿಸ್ ಮಾಡಿರಬಹುದು ಆದ್ರೆ ಅವರ ದೇಶದ ಜನರ ಪ್ರೀತಿ ಗೌರವಗಳನ್ನಲ್ಲ!ಅಭಿನವ್ ರ ದೇಶದ ಕುರಿತಾದ ಸಮರ್ಪಿತ ಮನೋಭಾವನೆ ಎಲ್ಲಾ ಮೆಡಲ್ ಗಿಂತಲೂ ಹೆಚ್ಚು.ಅಬಿನವ್ ರವರೇ! ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು.ನಾವು ಎಂದೆಂದಿಗೂ ನಿಮಗೆ ಆಭಾರಿ!

  • ಸ್ವರ್ಣಲತ ಭಟ್

POPULAR  STORIES :

ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

Share post:

Subscribe

spot_imgspot_img

Popular

More like this
Related

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ ಅಬ್ಬರ

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ...

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...

ನವರಾತ್ರಿ ಎಂಟನೇ ದಿನ – ಮಹಾಗೌರಿ !

ನವರಾತ್ರಿ ಎಂಟನೇ ದಿನ – ಮಹಾಗೌರಿ ! ದೇವಿಯ ಹಿನ್ನಲೆ ನವರಾತ್ರಿಯ ಎಂಟನೇ ದಿನ...