ಕಳೆದ 8 ವರ್ಷಗಳಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಗಬೇಕು ಎಂದು ಅವಿರತ ಹೋರಾಟದ ಫಲವಾಗಿ ಇಂದು ಕನ್ನಡಕ್ಕೆ ದೊಡ್ಡ ಜಯ ಲಭಿಸಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡ ಬೇಕು ಎಂದು ಚೆನ್ನೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ ಎಲ್ಲೆಡೆ ಸಂತಸದ ಹರ್ಷೋದ್ಘಾರಗಳೇ ಕೇಳಿಬರುತ್ತಿದೆ.
ಉಳಿದ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ಮಾನ ನೀಡಿದರೆ ತಮಿಳು ಭಾಷೆಯ ಗೌರವ ಕಡಿಮೆಯಾಗುತ್ತದೆ ಎಂದು ಅರ್ಜಿದಾರ ಗಾಂಧಿ ಎಂಬುವವರು 2004 ರಲ್ಲಿ ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ 2008ರಲ್ಲಿ ಚೆನ್ನೈ ಹೈಕೋರ್ಟ್‍ಗೆ ಎರಡು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಇದೀಗ ಚೆನ್ನೈ ಹೈಕೋರ್ಟ್ ಗಾಂಧಿ ಅವರು ಹೂಡಿದ್ದ ದಾವೆಯನ್ನು ವಜಾಗೊಳಿಸುವ ಮೂಲಕ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೆಂಬ ಅತ್ಯುನ್ನತ ಗೌರವಕ್ಕೆ ಕಾನೂನಿನ ಮೂಲಕ ಅಂಕಿತ ಸಿಕ್ಕಿದಂತಾಗಿದೆ. ಆ ಮೂಲಕ ಸತತ 8 ವರ್ಷಗಳಿಂದ ನಡೆದ ಹೋರಾಟಕ್ಕೆ ನ್ಯಾಯಯುತ ಜಯ ಸಿಕ್ಕಿದೆ ಎಂದು ಕನ್ನಡ ಅಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್ ಹನುಮಂತಪ್ಪ ಸಂತಸ ವ್ಯಕ್ತ ಪಡಿಸಿದ್ದಾರೆ.
2008 ರಲ್ಲಿ ಗಾಂಧಿ ಎಂಬುವವರು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಎರಡು ಅರ್ಜಿಗಳನ್ನು ಹಾಕಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡಿರುವ ಕುರಿತು ಪ್ರಶ್ನಿಸಿದ್ದರು. ಇದೇ ವೇಳೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಆರನೇ ಪ್ರತಿ ವಾದಿಗಳನ್ನಾಗಿ ಮಾಡಿದ್ದರು. ಈ ಕುರಿತಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಸ್ವಯಂ ಪ್ರೇರಿತವಾಗಿ ಮದ್ರಾಸ್ ಉಚ್ಛ ನ್ಯಾಯಾಲಯಕ್ಕೆ ಪ್ರತಿ ಪ್ರಮಾಣ ಪತ್ರವನ್ನು ಸಲ್ಲಿಸಿ ಚೆನ್ನೈನ ಹಿರಿಯ ವಕೀಲರಾದ ಕಾರ್ತಿಕೇಯನ್ ಮೂಲಕ ಸಮರ್ಥವಾದ ಮಂಡಿಸಿದ್ದರು.
ಇದೀಗ ಎಂಟು ವರ್ಷಗಳ ಬಳಿಕ ಕನ್ನಡಕ್ಕೆ ಅಂತಿಮ ಜಯ ಲಭಿಸಿದೆ. ಆ ಮೂಲಕ ಕನ್ನಡದ ಹಿರಿಮೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಎಲ್ಲಾ ಸಾಧ್ಯತೆಗಳೂ ಇದೆ. ಮೈಸೂರಿನಲ್ಲಿ ಹಂಗಾಮಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಶಾಶ್ವತವಾಗಿ ಬೆಂಗಳೂರಿನಲ್ಲಿ ತೆರೆಯಲು ಸಕಲ ಸಿದ್ಧತೆಗಳೂ ನಡೆದಿದ್ದು, ಸಧ್ಯದಲ್ಲಿಯೇ ಅದಕ್ಕೆ ಚಾಲನೆ ಸಿಗಲಿದೆ ಎಂದು ಹೇಳಿದ್ದಾರೆ
ಈ ಕಾನೂನು ರೀತಿಯ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಉಮಾಶ್ರೀ ಅವರನ್ನು ಕನ್ನಡ ಪ್ರಾಧೀಕಾರ ಇಲಾಖೆಯ ಅಧ್ಯಕ್ಷ ಎಲ್ ಅನುಮಂತಯ್ಯ ಅಭಿನಂದಿಸಿದ್ದಾರೆ.
POPULAR STORIES :
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!