ಸೇಲಂ ನಿಂದ ಚೆನ್ನೈಗೆ ಹೋಗುತ್ತಿರೋ ಟ್ರೈನ್ ನಿಂದ ಯಾವುದೋ ಫಿಲ್ಮೀ ಸ್ಟೈಲ್ ನಲ್ಲಿ 5.78 ಕೋಟಿ ರೂಪಾಯಿ ದರೋಡೆ ಮಾಡಿದ ವಿಷಯ ಬೆಳಕಿಗೆ ಬಂದಿದೆ. 11064 ಸೇಲಂ-ಚೆನ್ನೈ ಎಕ್ಸ್ ಪ್ರೆಸ್ ಟ್ರೈನ್ ನ ಮೇಲ್ಛಾವಣಿಯನ್ನು ಕಿತ್ತು ಈ ದರೋಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಟ್ರೈನ್ ನ ಕೋಚ್ ನಲ್ಲಿ R.B.I ನ 342 ಕೋಟಿ ರೂಪಾಯಿಗಳಿತ್ತು,ಹಾಗೂ ಇದನ್ನು ಡಿಪಾಸಿಟ್ ಮಾಡುವುದಕ್ಕಾಗಿ ಚೆನೈಗೆ ತರಲಾಗುತ್ತಿತ್ತು.ಈ ಹೈ ಕೆಪ್ಯಾಸಿಟಿ ಪಾರ್ಸಲ್ ಕೋಚ್ ನಲ್ಲಿ 18 ಸೆಕ್ಯೂರಿಟಿ ಆಫೀಸರ್ ಗಳಿದ್ರು.
ಈ ದುಡ್ಡು ಅನೇಕ ಖಾಸಗಿ ಬ್ಯಾಂಕುಗಳಿಗೆ ಸಂಬಂಧಿಸಿತ್ತು ಹಾಗೂ ಟ್ರೈನ್ ಸೋಮವಾರ ರಾತ್ರಿ 9 ಘಂಟೆಗೆ ಸೇಲಂ ನಿಂದ ಹೊರಟು ಮಂಗಳವಾರ ಸಾಯಂಕಾಲ ಚೆನ್ನೈಗೆ ತಲುಪಿತು.ಪೋಲೀಸರ ಮಾಹಿತಿಯನ್ವಯ ಈ ದರೋಡೆಯು ಸೇಲಂ ಹಾಗೂ ವಿರಧಾಚಲಂ ನಡುವೆ ಸಂಭವಿಸಿರಬೇಕು ಯಾಕಂದ್ರೆ ಇವೆರಡರ ನಡುವಿನ ದೂರ ವು ಸುಮಾರು 138 ಕಿ.ಮೀ ಆಗಿದ್ದು,ಈ ಮಾರ್ಗದಲ್ಲಿ ಯಾವುದೇ ಇಲೆಕ್ಟ್ರಿಫೈಡ್ ಲೈನ್ಸ್ ಗಳಿಲ್ಲ.ಟ್ರೈನ್ ನ ಮೇಲ್ಛ್ಹಾವಣಿ ಕತ್ತರಿಸಿದ ಜಾಗದಲ್ಲಿ ಇಲೆಕ್ಟ್ರಿಫೈಡ್ ಲೈನ್ ಗಳಿರುತ್ತದೆ.ಆದ ಕಾರಣ ದರೋಡೆ ಮಾಡುವುದು ಸುಲಭದ ಮಾತಲ್ಲ ಅನ್ನುತ್ತಾರೆ.
ಟ್ರೈನ್ ನ ಜೊತೆ ಜೊತೆಗೆ ರೈಲ್ವೆ ಟ್ರಾಕ್ ನ್ನು ಪರೀಶೀಲಿಸಲಾಗುತ್ತಿದೆ,ಯಾಕಂದ್ರೆ ಇಲ್ಲೂ ಏನಾದ್ರೂ ಸುಳಿವು ದೊರಕುವ ಸಂಭವ ವಿದೆ.ಸೇಲಂ ಹಾಗೂ ಚೆನ್ನೈ ನ ನಡುವಿನ ಎಲ್ಲಾ ಸ್ಟೇಷನ್ ನ್ನು ಅಲರ್ಟ್ ಮಾಡಲಾಗಿದೆ.
POPULAR STORIES :
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!