ನೋಡಿ… ನಮ್ಮ ದೇಶದ ದೇಶೀ ತಳಿಯ ಸೆಗಣಿ ಹಾಗೂ ಅದರ ಗೋ ಮೂತ್ರ ಸೇವಿಸಿದರೆ ಗರ್ಭಿಣಿಯರಿಗೆ ನಾರ್ಮಲ್ ಡೆಲಿವರಿಯಾಗುತ್ತದೆ ಅಂತೆ. ಅದರಲ್ಲೂ ಮುಖ್ಯವಾಗಿ ಆ ಹಸು ನಮ್ಮ ದೇಶದ್ದಾಗಿರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಗೋ ಸೇವಾ ಪ್ರಮುಖರಾದ ಶಂಕರ್ ಲಾಲ್ ಹೇಳಿದ್ದಾರೆ.
ಸಗಣಿ ನಮ್ಮ ದೇಶದ್ದೇ ಹಸುವಿನದ್ದಾಗಿರಬೇಕು, ಪಾಶ್ಚಾತ್ಯ ತಳಿಯ ಹಸುವಿನದ್ದಾಗಿರಬಾರದು. ಪಾಶ್ಚಾತ್ಯ ಹಸುಗಳ ಹಾಲೇ ವಿಷಕ್ಕೆ ಸಮಾನ ಎಂದು ಶಂಕರ್ ಲಾಲ್ ಹೇಳಿದ್ದಾರೆ.
ಅಷ್ಟೇ ಅಲ್ಲಾ ಸ್ವಾಮೀ.. ಮೊಬೈಲ್ ಫೋನ್‍ಗಳು ವ್ಯಕ್ತಿಯ ಶಕ್ತಿಯನ್ನು ಕುಂದಿಸುವ ಸಾಮಥ್ರ್ಯ ಹೊಂದಿದೆ. ಆದ ಕಾರಣ ತಮ್ಮ ತಮ್ಮ ಫೊನಿನ ಹಿಂಬದಿಯ ಪ್ಯಾನೆಲ್‍ಗೆ ತಾಜಾ… ಸೆಗಣಿ ಹಚ್ಚುವುದರಿಂದ ಅಪಾಯಕಾರಿ ವಿಕಿರಣಗಳನ್ನು ಅದು ತಡೆಯುತ್ತದೆ ಎಂದು ಸಂದರ್ಶನದ ವೇಳೆ ಹೇಳಿದ್ದಾರೆ.
ತಮ್ಮ ಮೊಬೈಲ್ ಫೋನ್ ಪ್ರತೀ ವಾರವೂ ತಾಜಾ ಸಗಣಿಯನ್ನು ಹಚ್ಚುತ್ತೇನೆ ಎಂದು ಹೇಳಿದ ಅವರು ಸೆಗಣಿ ಹಚ್ಚಿದ್ದ ಫೋನ್‍ನ್ನು ಮಾಧ್ಯಮದವರಿಗೆ ಪ್ರದರ್ಶಿಸಿದರು. ಗುಜರಾತ್‍ನ ಜುನಾಘಡದ ವಿಜ್ಞಾನಿಗಳು ಸಗಣಿ ಮತ್ತು ಗೋಮೂತ್ರದಲ್ಲಿ ಚಿನ್ನದ ಅಂಶವಿದೆ ಎಂದು ಪತ್ತೆ ಹಚ್ಚಿದ್ದಾರೆ. ಅದರಲ್ಲೆ ನಾವು ತಿಳಿದುಕೊಳ್ಳಬೇಕು ಗೋಮೂತ್ರ ಹಾಗೂ ಸೆಗಣಿಯಲ್ಲಿ ಎಷ್ಟು ಶಕ್ತಿ ಇದೆ ಎಂದು ಶಂಕರ್‍ಲಾಲ್ ಹೇಳಿದ್ದಾರೆ.
POPULAR STORIES :
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!