180 ಅಡಿ ಆಳದಲ್ಲಿ ನೇತಾಡುತ್ತಾ ಮದುವೆಯಾದ್ರು ಪ್ರೇಮಿಗಳು

0
48

ಚೀನಾದಲ್ಲಿ ಸಾಂಪ್ರದಾಯಿಕ ಪ್ರೇಮಿಗಳ ದಿನವನ್ನಾಗಿ ಪ್ರತೀ ವರ್ಷ ಅಂದರೆ ಚೀನಾ ಕ್ಯಾಲೆಂಡರ್ ಪ್ರಕಾರ ವರ್ಷದ ಏಳನೇ ಚಂದ್ರಮಾನದ ಏಳನೇ ತಾರೀಕಿನಲ್ಲಿ ವಿಭಿನ್ನ ರೀತಿಯ ಸಾಂಪ್ರದಾಯಿಕ ಪ್ರೇಮಿಗಳ ದಿನವನ್ನಾಗಿ ಆಚರಿಲಾಗುತ್ತೆ. ಅದರಂತೆ ಈ ತಿಂಗಳ ಕಳೆದ ಮಂಗಳವಾರದಂದು ಚೀನಾದಲ್ಲಿ ಪ್ರಸಕ್ತ ವರ್ಷದ ಸಾಂಪ್ರದಾಯಿಕ ಪ್ರೇಮಿಗಳ ದಿನವನ್ನು ಆಚರಿಸಲಾಯಿತು. ಅದನ್ನು ಚೀನಾದಲ್ಲಿ ರಿಕ್ಸಿ ಎಂದು ಕರೆಯುತ್ತಾರೆ. ಈ ಒಂದು ಉತ್ಸವದಲ್ಲಿ ಪ್ರೇಮಿಗಳು ಆ ದಿನ ವಿಭಿನ್ನ ರೀತಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾರೆ. ಅದೇ ರೀತಿಯಾಗಿ ಈ ಬಾರಿ ಒಂದು ಜೋಡಿ ವಿಶಿಷ್ಟ ರೀತಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ ನೋಡಿ… ಮಧ್ಯ ಚೀನಾ ಪ್ರಾಂತ್ಯದ ಈ ನವ ಜೋಡಿ ತಮ್ಮ ವಿವಾಹವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿ ಎಲ್ಲರ ಕಣ್ಣುಬ್ಬೇರಿಸುವಂತೆ ಮಾಡಿದ್ದಾರೆ. ಚೀನಾದಲ್ಲಿರುವ ಅತೀ ದೊಡ್ಡ ಗಾಜಿನ ಸೇತುವೆಯ ಕೆಳಗೆ ನೇತಾಡಿಕೊಂಡೆ ಮದುವೆಯಾಗಿ ಇದೀಗ ಭಾರೀ ಸುದ್ದಿಯಾಗಿದ್ದಾರೆ. ಪಿಂಗ್ ಜೈಂಗ್‍ನಲ್ಲಿರುವ ಶಿನುಝೈ ನ್ಯಾಷನಲ್ ಪಾರ್ಕ್ ಬಳಿಯಿರುವ ವಿಶ್ವ ವಿಖ್ಯಾತ ಗಾಜಿನ ಸೇತುವೆ ಕೆಳಗೆ ಸುಮಾರು 180 ಮೀಟರ್ ಕೆಳಗೆ ನೇತಾಡುತ್ತಾ ವಿಭಿನ್ನವಾಗಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ನೋಡಿ ಈ ಜೋಡಿ… ಅದರ ಸಂಪೂರ್ಣ ದೃಶ್ಯ ಇಲ್ಲಿದೆ ನೋಡಿ.

 

 

POPULAR  STORIES :

ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!

ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು

ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video

ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!

ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

LEAVE A REPLY

Please enter your comment!
Please enter your name here