ಉದ್ದನೆಯ ಕಳೆಕಳೆಯಾಗಿರೋ ವಸ್ತ್ರವನ್ನು ತೊಟ್ಟು ಮುಖದ ತುಂಬಾ ವಿಶೇಷವಾಗಿ ಅಲಂಕರಿಸಿ,ಕಣ್ಣುಗಳಿಗೆ ಬಳಿದ ಕಾಡಿಗೆಯು ಹಣೆಯ ಎರಡೂ ಬದಿಗಳವರೆಗೂ ಚಾಚಲ್ಪಟ್ಟು,ತುಟಿಗೆ ಬಳಿದ ಗಾಢವಾದ ಕೆಂಪು ಬಣ್ಣ ಹಾಗೂ ಕೆಳಗೆ ಲೋಹದ ತಟ್ಟೆಯಲ್ಲಿ ಇಳಿಬಿಟ್ಟ ಆಕೆಯ ಪಾದಗಳು,ಭಕ್ತಾರ್ಥಿಗಳು ಮಂಡಿಯೂರಿ ಆಕೆಯ ಮುಂದೆ ನಿಂತಿರೋ ದೃಷ್ಯ ಇವಿಷ್ಟನ್ನು ನೀವೂ ಸಹ ನೋಡಿದಲ್ಲಿ ಥೇಟ್ ಒಂದು ಪುಟಾಣಿ ದೇವತೆಯು ನಮ್ಮೆದುರು ಬಂದು ಕೂತಂತಹ ಅನುಭವ ನೀಡುತ್ತದೆ.ಅವಳ ಅನುಯಾಯಿಗಳ ಅಹವಾಲುಗಳೆಲ್ಲ ಒಮ್ಮೆ ಮುಗಿದ ತಕ್ಷಣ ಅವಳು ಆವತ್ತಿನ ಕೆಲಸದಿಂದ ಮುಕ್ತಿ ಹೊಂದುತ್ತಾಳೆ.ಭೇಟಿ ನೀಡುವವರ ಜೊತೆ ನಡೆಯೋ ಸಂಭಾಷಣೆಯನ್ನು ಬಿಟ್ಟಲ್ಲಿ ಆಕೆಯ ಜೀವನ ಕೇವಲ ಕತ್ತಲಿನೊಂದಿಗಿನ ಬಾಳು.ಯಾಕಂದ್ರೆ ಆಕೆಗೆ ತನ್ನ ಫ್ಯಾಮಿಲಿಯನ್ನು ಹಾಗೂ ದೇವಸ್ಥಾನದ ವ್ಯಾಪ್ತಿಗೆ ಒಳಪಡುವ ಜನರನ್ನು ಬಿಟ್ಟಲ್ಲಿ ಇತರ ಬೇರೆ ಯಾರ ನಡುವೆಯೂ ಮಾತುಕತೆಯಾಡುವಂತಿಲ್ಲವಂತೆ.
ಕೆಲವೊಂದು ಪ್ರತ್ಯೇಕ ಜಾತಿಯ 5 ವಯಸ್ಸಿನೊಳಗಿರೋ ಹೆಣ್ಣು ಮಕ್ಕಳನ್ನು ದೇವಸ್ಥಾನದ ಮುಖ್ಯ ಅರ್ಚಕರು ಗಮನದಲ್ಲಿಟ್ಟುಕೊಂಡು ಯಾರಲ್ಲಿ ಅವರಿಗೆ ಬೇಕಾಗಿರೋ 32 ಗುಣಗಳನ್ನು ಕಂಡುಕೊಳ್ಳುತ್ತಾರೋ ಅಂತಹವರನ್ನು ಕುಮಾರಿ ದೇವತೆ ಯೆಂದು ಆಯ್ಕೆ ಮಾಡುತ್ತಾರೆ,ಇದಲ್ಲದೆ ಇವರನ್ನು ಖಟ್ಮಂಡುವಿನ ಸಂಪತ್ತು ಎಂಬುದಾಗಿ ಘೋಷಿಸಲಾಗುತ್ತದಂತೆ.
ಒಂದು ಬಾರಿ ಈಕೆಯನ್ನು ದೇವತೆ ಎಂದು ಘೋಷಣೆ ಮಾಡಿದಲ್ಲಿ ಈಕೆಯು ಎಲ್ಲಿಗೂ ಹೋಗುವಂತಿಲ್ಲ ಹಾಗೂ ತನ್ನ ಫ್ಯಾಮಿಲಿಯನ್ನು ಹೊರತು ಪಡಿಸಿ ಯಾರ ಜೊತೆಗೂ ಮಾತಾಡುವಂತಿಲ್ಲವಂತೆ ಆಕೆಯು ಪವಿತ್ರವಾಗಿರುವಂತೆ ಯಾವಾಗಲೂ ಆಕೆಯ ಕಾಲುಗಳನ್ನು ನೆಲಕ್ಕೆ ತಾಗಿಸದೆ ಮೇಲಿಡುವಂತೆಯೇ ನೋಡಿಕೊಳ್ಳಬೇಕು.ಅದಕ್ಕಾಗಿ ಈ ಲೋಹದ ತಟ್ಟೆಯ ವ್ಯವಸ್ಥೆ
ಏಂತಹದೇ ಭಯಂಕರ ಜವಾಬ್ದಾರಿ ಅಕೆಯ ಮೇಲೆ ಹೊರಿಸಿದರೂ ಮಗುವಿನ ಮನಸ್ಸು ಬದಲಾಗುವುದೇ? ಆಕೆಗೆ ವಾಯಲಿನ್ ಬಾರಿಸಲು ಹಾಗೂ ಸುಂದರ ಕಥೆ ಕೇಳಲು ಇಷ್ಟವಂತೆ.ನನ್ನ ಮಗಳು ಕೇವಲ 5 ವರುಷದಲ್ಲಿ ಕುಮಾರಿ ದೇವತೆ ಯಾಗಿದ್ದಾಳೆ.ನನಗೆ ನನ್ನ ಮಗಳನ್ನು ಕುಮಾರಿ ದೇವತೆ ಯಾಗಿಡಲು ಯಾವುದೇ ಇಚ್ಛೆ ಇಲ್ಲ,ನಮ್ಮ ಭಾಗ್ಯದಲ್ಲಿ ಇದೇ ಇರುವುದಾದಲ್ಲಿ ಏನು ಮಾಡೋಣ ಎನ್ನುತ್ತಾರೆ ಖಟ್ಮಂಡುವಿನ ನಿವಾಸಿ ರಮೇಶ್ ಭಾಜ್ರಾಚಾರ್ಯರವರು.
ಈ ರೀತಿಯ ಕುಮಾರಿಗಳು ತಮ್ಮ ಯೌವನಾವಸ್ಥೆಯನ್ನು ತಲುಪುತ್ತಿದ್ದಂತೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ ಮತ್ತೆ ಇನ್ನೊಬ್ಬರನ್ನು ಈ ಪದವಿಯಲ್ಲಿ ಕೂರಿಸಲಾಗುತ್ತದೆ.”ನನ್ನ ಅನಿಸಿಕೆಯ ಪ್ರಕಾರ,ನಮ್ಮ ತರ್ಕಕ್ಕೆ ನಿಲುಕದ ಏನೋ ಒಂದು ವಿಚಾರವಿದೆ,ಕುಮಾರಿಯ ಅವಧಿಯಲ್ಲಿ ನಾನು ಅನೇಕ ವಿಷಯಗಳನ್ನು ಕೇಳುತ್ತಾ ಬೆಳೆದವನು,ಆಕೆಗೆ ಸಾಮಾನ್ಯ ಮಕ್ಕಳಂತೆ ಯಾವ ಬಾಲ್ಯದ ಕನಸುಗಳಿಗೆ ಅವಕಾಶಗಳಿರುವುದಿಲ್ಲ.ಅವಳಿಗಿರುವುದು ಒಂದು ನಿತ್ಯ ಸಂಪ್ರದಾಯ ಬದ್ದ ಜೀವನ.ಅವಳ ಕಾಲಾವಧಿ ಮುಗಿದ ಬಳಿಕ ಅವಳು ಹೊರ ಪ್ರಪಂಚದ ಜೊತೆ ಹೊಂದಾಣಿಕೆ ಮಾಡುವುದು ತೀರಾ ಕಷ್ಟ” ಎನ್ನುತ್ತಾರೆ ನೇಪಾಳದ ನಿವಾಸಿ ಬಂಧನ್ ಶಾ ರವರು.
ಸ್ನೇಹಿತರೇ!!ಯಾಕೋ ಇದು ತೀರಾ ಅಶ್ಚರ್ಯಜನಕವಾಗಿದೆಯಲ್ಲವೇ???
- ಸ್ವರ್ಣಲತ ಭಟ್
POPULAR STORIES :
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!