ಶ್ವಾಸಕೋಶದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಪಾಕಿಸ್ಥಾನ ಕ್ರಿಕೇಟ್ ದಂತಕಥೆ ಮಹಮ್ಮದ್ ಹನೀಫ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕರಾಚಿ ಆಸ್ಪತ್ರೆಯಲ್ಲಿ ಇಹ ಲೋಕ ತ್ಯಜಿಸಿದ್ದಾರೆ.
ಹನೀಫ್ ಅವರು ಕಳೆದೆರೆಡು ವಾರಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಕರಾಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಸತತವಾಗಿ ಚಿಕಿತ್ಸೆ ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನೆನ್ನೆಯಷ್ಟೇ ಅವರ ಹೃದಯ 6 ನಿಮಿಷಗಳ ಕಾಲ ಎದೆ ಬಡಿತ ನಿಂತು ಹೋಗಿತ್ತು ವೈದ್ಯರ ಸತತ ಪ್ರಯತ್ನದಿಂದ ಪುನಃ ಮರು ಜೀವ ಪಡೆದಿದ್ದರು. ಆದರೆ ಇಂದು ಅವರು ವಿಧಿವಶರಾಗಿದ್ದಾರೆ. ಹನೀಫ್ ಪಾಕಿಸ್ಥಾನ ಕ್ರಿಕೇಟ್‍ಗೆ ಪದಾರ್ಪಣೆ ಮಾಡಿದ್ದು 1952-53 ರಲ್ಲಿ. 1960-61ರ ವರೆಗೂ ಪ್ರತಿನಿಧಿಸಿದ್ದ ಹನೀಫ್ ಒಟ್ಟು 55 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 12 ಶತಕಗಳು ಸೇರಿದಂತೆ 43.98 ಸರಾಸರಿಯಂತೆ ರನ್ ಗಳಿಸಿದ್ದಾರೆ. 1967ರ ವೆಸ್ಟ್‍ಇಂಡೀಸ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 337ರಲ್ಲಿ ಬಾರಿಸಿ ಸಾಧನೆ ಮಾಡಿದ್ದರು. ಆ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದ ಒಂದು ವಿಶೇಷ.
POPULAR STORIES :
ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ
ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video