ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್‍ಗೆ ಶ್ರಿಲಂಕಾ ತಂಡ ಮಾಡಿದ ಮೋಸಕ್ಕೆ ಇಂದಿಗೆ ಆರು ವರ್ಷ ತುಂಬಿದೆ ಎಂದು ಸೆಹ್ವಾಗ್ ನೆನೆದು ಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ನೋವನ್ನು ಟ್ವಿಟರ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಲಂಕಾ 46.1 ಓವರ್‍ಗಳಲ್ಲಿ ಕೇವಲ 170 ರನ್‍ಗೆ ಆಲೌಟ್ ಆಗಿತ್ತು. ಅದರ ಗುರಿ ಬೆನ್ನು ಹತ್ತಿದ್ದ ಟೀಂ ಇಂಡಿಯಾಗೆ ಸೆಹ್ವಾಗ್ ಆಸರೆಯಾಗಿ ನಿಂತು ಗುಲುವಿನ ದಡ ದಾಟಿಸುತ್ತಿದ್ದರು. ಈ ಸಂದರ್ಭದಲ್ಲಿ ಭಾರತ ಗೆಲ್ಲಲು ಹಾಗೂ ವೀರೂ ಶತಕ ಸಿಡಿಸಲು ಕೇವಲ ಒಂದು ರನ್ ಮಾತ್ರ ಅಗತ್ಯವಿತ್ತು. ಈ ವೇಳೆ ಬೌಲರ್ ಸೂರಜ್ ಬೇಕೆಂದೇ ನೋಬಾಲ್ ಎಸೆದಿದ್ದರು.
ಕ್ರಿಕೆಟ್ ನಿಯಮದ ಪ್ರಕಾರ ತಂಡಗಳ ಮೊತ್ತ ಸಮಗೊಂಡಿರುವಾಗ ನೋಬಾಲ್ ಅಥವಾ ವೈಡ್ ಎಸೆದಾಗ ಆ ರನ್ ಲೆಕ್ಕಕ್ಕೆ ಬರುವುದಿಲ್ಲ. ಹಾಗಾಗಿ ಸೆಹ್ವಾಗ್ ಸಿಕ್ಸರ್ ಬಾರಿಸಿದರೂ ಅವರು 99 ರನ್ ಬಾರಿಸಿ ಅಜೇಯರಾಗಿ ಉಳಿದರು.
Video :
POPULAR STORIES :
ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!
ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!
ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!