ಬೆಂಗಳೂರಿನಲ್ಲಿ ಭಾರತೀಯ ಸೈನಿಕರ ವಿರುದ್ದ ಅವಹೇಳನಕಾರಿ ಘೋಷಣೆ ಕೂಗಿದವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಸಾಥ್ ನೀಡಲು ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ಭಾರತೀಯ ಸೈನಿಕರ ವಿರುದ್ದ ಘೋಷಣೆ ಕೂಗಿದ ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಮಹಾರಾಣಿ ಕಾಲೇಜ್‍ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ಬಾಗಲಕೋಟೆ ಬಳ್ಳಾರಿ ಜಿಲ್ಲೆಯಲ್ಲೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು ಚಿಕ್ಕೋಡಿಯಲ್ಲಿ ಅಮ್ನೆಸ್ಟಿ ಇಂಟರ್‍ನಾಷನಲ್ ಇಂಡಿಯಾ ಮತ್ತು ದಿ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್‍ನ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಮತ್ತು ಗೃಹ ಇಲಾಖೆಯ ಕ್ರಮವನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಎಬಿವಿಪಿ ಹಮ್ಮಿಕೊಳ್ಳಲಾಗಿದ್ದು, ಬಳ್ಳಾರಿಯ ಎಸ್ಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರದ ಅಣುಕು ಶವ ಯಾತ್ರೆಯ ಮೂಲಕ ನೂರಾರು ವಿದ್ಯಾರ್ಥಿಗಳು, ಭಾರತೀಯ ಸೇನೆಯ ವಿರುದ್ದ ಘೋಷಣೆ ಕೂಗಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
POPULAR STORIES :
ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!
ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!
ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!