ಗೂಗಲ್‍ನ ಹೊಸ ವೀಡಿಯೋ ಚ್ಯಾಟಿಂಗ್ ಆ್ಯಪ್ ಬಿಡುಗಡೆ.

0
67

ಗೂಗಲ್ ಸಂಸ್ಥೆ ಇದೀಗ ತಮ್ಮ ಬಳಕೆದಾರರಿಗೆ ಹೊಸ ವೀಡಿಯೋ ಚ್ಯಾಟಿಂಗ್ ಆ್ಯಪ್ ‘ಡುಯೋ’ ಬಿಡುಗಡೆ ಮಾಡಿದೆ. ಇದು ಆಪಲ್‍ನ ಫೇಸ್ ಟೈಮ್, ಮೈಕ್ರೋ ಸಾಫ್ಟ್ ನ ಸ್ಕೈಪ್, ಮತ್ತು ಫೇಸ್‍ಬುಕ್‍ನ ಮೆಸೆಂಜರ್‍ಗಳಿಗೆ ತೀವ್ರ ತರವಾದ ಸ್ಪರ್ಧೆ ನೀಡಲಿದೆ ಎಂದು ಮೂಲಗಳು ತಿಳಿಸಿದೆ. ಈ ಹೊಸ ಚ್ಯಾಟಿಂಗ್ ಆ್ಯಪ್ ಸಹಾಯದಿಂದ ಸ್ನೇಹಿತರ ಜೊತೆ ಅಥವಾ ತಮ್ಮ ಫ್ಯಾಮಿಲಿಯವರೊಂದಿಗೆ ಮಾತನಾಡುವಾಗ ಒಬ್ಬರನ್ನೋಬ್ಬರು ನೋಡಿಕೊಂಡು ಮಾತನಾಡಬಹುದು.
ಈ ಚ್ಯಾಟಿಂಗ್ ಆ್ಯಪ್ ಉಳಿದ ಚ್ಯಾಟಿಂಗ್ ಆ್ಯಪ್ ಗಳಿಗಿಂತ ಭಿನ್ನವಾಗಿರದಿದ್ದರೂ, ಇದರಲ್ಲಿ ಕರೆ ಮಾಡಿರುವ ವ್ಯಕ್ತಿಯ ಮುಖದ ಭಾವನೆಗಳನ್ನು ನೋಡಬಹುದಾಗಿದೆ. ಈ ಫೀಚರ್‍ಗೆ ಗೂಗಲ್ ನಾಕ್ ನಾಕ್ ಎಂದು ಹೆಸರಿಡಲಾಗಿದೆ. ಈ ಆ್ಯಪ್ ಗೂಗಲ್‍ನ ಆಪರೇಟಿಂಗ್ ಸಿಸ್ಟಂ ಹಾಗೂ ಆ್ಯಪಲ್‍ನ ಐಫೋನ್‍ಗಳಲ್ಲಿ ಲಭ್ಯವಿರುತ್ತದೆ ಎನ್ನಲಾಗಿದೆ. ಈ ಆ್ಯಪ್ ನಲ್ಲಿ ಫೋನ್‍ಗೆ ಇರುವಂತೆ ವ್ಯಕ್ತಿಯನ್ನು ಸಂಪರ್ಕಿಸಲು ನಂಬರ್‍ನ ಅಗತ್ಯವಿರೋದಿಲ್ಲ. ಗೂಗಲ್ 2013 ರಿಂದ ಹ್ಯಾಂಗ್‍ಔಟ್ ಮೂಲಕ ವೀಡಿಯೋ ಕಾಲಿಂಗ್ ಸೌಲಭ್ಯ ಕೊಡುತ್ತಿತ್ತು. ಇದೀಗ ಕಂಪನಿ ಇವುಗಳನ್ನು ಬ್ಯುಸಿನೆಸ್ ಮೀಟಿಂಗ್‍ಗಳಿಗೆ ಉಪಯೋಗವಾಗುವಂತೆ ವಿಸ್ತರಿಸಲಾಗುತ್ತಿದೆ.

POPULAR  STORIES :

ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!

ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!

ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.

ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

LEAVE A REPLY

Please enter your comment!
Please enter your name here