ಲವ್ ಒಂದು ರೀತಿ ಸ್ಲೋ ಪಾಯಿಸನ್ ಅಂತೆ ನಿಜವೇ ?

Date:

ಮದುವೆ ಆಗೋಣವೇ ಎಂದು ಕೇಳಿದಾಗಲೆಲ್ಲ ನಿನ್ನಿಂದ ಬರುತ್ತಿದ್ದ ಏಕೈಕ ಉತ್ತರ ಏನಾಗಬೇಕಿರುತ್ತದೆಯೋ ಆದೇ ಆಗುವುದು ನಾವಿಬ್ಬರು ಒಂದಾಗಬೇಕು, ಮದುವೆಯಾಗಬೇಕು ಎಂದಿದ್ದರೆ ಆಗೆ ಆಗುತ್ತದೆ ಅದರ ಬಗ್ಗೆ ಯಾಕೆ ಚಿಂತಿಸುವುದು ಎನ್ನುತ್ತಿದ್ದೆ. ಕಾಲೇಜು ದಿನಗಳ ಕೊನೆ ದಿನ ನೀನೇಳಿದ ಮಾತುಗಳು ಇವತ್ತಿಗೂ ಮಾಸದೆ ಪ್ರತಿಯೊಂದು ಪದಗಳು ನನ್ನ ಮನಸ್ಸಿನಲ್ಲಿ ಅಚ್ಚೆ ಹಾಕಿದಂತಿವೆ. ನನಗೆ ಮನಸ್ಸೇ ಇಲ್ಲ, ಫೀಲೇ ಆಗೋದೇ ಇಲ್ಲ ನಾನೋಬ್ಬಳು ಮೃಗ ಎಂದುಕೊಂಡಿದ್ದೀಯ ಅಲ್ಲವೇ? ನನಗೂ ಹತ್ತಾರು ಕನಸ್ಸು, ಆಸೆಗಳಿವೆ ಆದರೆ ನನ್ನ ಪಾಲಿಗೆ ಅವೆಲ್ಲಾ ಇದ್ದು ಇಲ್ಲವಾಗಿದೆ. ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಅಪ್ಪನನ್ನೇ ಕಳೆದುಕೊಂಡು ಪ್ರೀತಿಯಿಂದ ವಂಚಿತಳಾಗಿದ್ದೇನೆ, ಈಗ ನನ್ನ ಪಾಲಿಗೆ ಉಳಿದಿರುವುದು ಅಮ್ಮ ಮಾತ್ರ ಅವಳನ್ನು ಕಳೆದುಕೊಂಡು ಅನಾಥಳಾಗುವುದಕ್ಕೆ ಇಷ್ಟವಿಲ್ಲ ಅವಳನ್ನು ಕಳೆದುಕೊಂಡು ಬದುಕುವ ಶಕ್ತಿಯೂ ನನಗಿಲ್ಲ.
ನಿನ್ನ ಮನಸ್ಸಿನ ಭಾವನೆಗಳಿಗೆ ನಾನು ಬೆಲೆ ಕೊಡುತ್ತೇನೆ, ಇಷ್ಟು ದಿನ ನೀನು ಕೇಳುತ್ತಿದ್ದೆಯಲ್ಲ ನಿನಗೆ ಭಾವನೆಗಳೇ ಇಲ್ಲವೇ? ನನ್ನ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೇ? ಮದುವೆ ಆಗೋಣವೇ ಎಂದಾಗ ಒಮ್ಮೆ ಆಗೋಣ ಎನ್ನಬೇಕು ಎನ್ನಿಸಲಿಲ್ಲವೇ? ನನ್ನಿಂದ ನೀನು ಏನೂ ಎಕ್ಸ್ ಪೆಕ್ಟ್ ಮಾಡುವುದಿಲ್ಲವೇ? ಎನ್ನುವ ಹತ್ತಾರು ಪ್ರಶ್ನೆಗಳಿಗೆ ನೀ ನೀಡಿದ ಉತ್ತರ ನಾ ಸತ್ತರೂ ನೀ ಸತ್ತರು ಭಾವನೆಗಳು, ನೀ ಹೇಳಿದ ಮಾತುಗಳು ಮಾತ್ರ ಸಾಯುವುದಕ್ಕೆ ಸಾಧ್ಯವೇ ಇಲ್ಲ. ನಾನೇಕೆ ಇವಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೇನೆ ನಿಜವಾಗಿಯೂ ನಾನು ಅರೆ ಹುಚ್ಚ ಎಂದುಕೊಳ್ಳುತ್ತಿದ್ದೆ. ಆದರೆ ಕೊನೆಯ ದಿನವೇ ಗೊತ್ತಾಗಿದ್ದು ನಿಜವಾಗಿಯೂ ಹುಚ್ಚು ನನಗಲ್ಲ ಹಿಡಿದಿರುವುದು ನಿನಗೆ ಎಂದು. ನಾನು ನನ್ನ ಮನಸ್ಸಿನ ಭಾವನೆಗಳನ್ನು ಮುಚ್ಚಿಡದೆ ನಿನ್ನ ಮುಂದೆ ಬಡಬಡಿಸಿ ಮನಸ್ಸನ್ನು ಹಗುರಮಾಡಿಕೊಳ್ಳುತ್ತಿದ್ದೆ. ಆದರೆ ಕೊನೆಯ ದಿನ ನಿನ್ನ ಮನಸ್ಸಿನ ಮಾತನ್ನು ಕೇಳಿ ಇಷ್ಟೆಲ್ಲಾ ಹೇಗೆ ಮನಸ್ಸಿನಲ್ಲಿ ಬಚ್ಚಿಟ್ಟಿದ್ದೆ ಎನ್ನುವುದು ಇವತ್ತಿಗೂ ಕಾಡುವ ಪ್ರಶ್ನೆ ಜೊತೆಗೆ ಅಂದೆ ಗೊತ್ತಾಗಿದ್ದು ನಿಜವಾಗಿಯೂ ಹುಚ್ಚಿಯಾಗಿರುವುದು ನೀನೆಂದು.
ನೆನ್ನೆ ಮೊನ್ನೆಯವರೆಗೂ ನನಗೆ ತಿಳಿಯದ ನಿನ್ನ ಮನಸ್ಸಿನ ವೇಧನಗೆಳನ್ನು, ಮಾತುಗಳನ್ನು ಇಂದು ಹೇಳಿದ್ದೀಯ ಇವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾ ಕೊರಗಲು ಸಾಧ್ಯವಿಲ್ಲ ಏಕೆಂದರೆ ನಿನ್ನಷ್ಟು ಗಟ್ಟಿ ಮನಸ್ಸು ನನಗಿಲ್ಲ ಅದ್ದರಿಂದಲೇ ಜಗತ್ತಿಗೆ ತಿಳಿಸುತ್ತಿದ್ದೇನೆ. ಕಾಲ್ ಮಾಡಿದಾಗಲೆಲ್ಲ ನೀನು ಬೇಗ ಕಟ್ ಮಾಡಬಾರದು, ಮಾಡಿದರೆ ಇನ್ನು ಸ್ವಲ್ಪ ಹೊತ್ತು ಮಾತನಾಡಬಹುದಿತ್ತಲ್ಲವೇ ಎನ್ನಿಸುತ್ತದೆ. ಏನಾದ್ರು ಹೇಳಲು ಬಂದು ಸುಮ್ಮನಾದಾಗ ನನ್ನ ಪುನ ಪುನ ಕೇಳಬೇಕು. ನಾನು ಕೇಳಿಲ್ಲ ಆದ್ರೂ ಸಹ ಆಟ್‍ಲೀಸ್ಟ್ ದಿನಕ್ಕೆ ಎರಡು ಸರಿಯಾದರೂ ಐ ಲವ್ ಯು ಎನ್ನಬೇಕು. ಪ್ರತಿಕ್ಷಣ ಎಲ್ಲಿದ್ದೀಯ, ಏನು ಮಾಡುತ್ತಿದ್ದೀರ ಎಂದು ತಿಳಿಸುತ್ತಲೇ ಇರಬೇಕು. ದಿನಕ್ಕೊಮ್ಮೆಯಾದರೂ ಮುಖ ತೋರಿಸಬೇಕು. ಮುಖ ತೋರಿಸಿದರೆ ಸಾಲದು ಮಾತನಾಡಿಸಬೇಕು. ಮಾತನಾಡಿಸಿಲ್ಲ ಎಂದರೆ ಸಿಟ್ಟು ಕೋಪ ಬರುತ್ತದೆ. ಬೇರೆಯವರನ್ನ ಮಾತನಾಡಿಸಿದರೆ ಅವರನ್ನ ಮಾತನಾಡಿಸಿದರು ಅಂತಾನು ಕೋಪ ಬರುತ್ತದೆ. ಯಾವಾಗ್ಲೂ ನನ್ನ ಮಾತನ್ನೇ ಕೇಳಬೇಕು ಸಮಾಧಾನ ಮಾಡಬೇಕು ಎನ್ನುವ ಆಸೆ. ಯಾಕ್ ಲವ್ ಆಯ್ತು ಅಂತಾ ಹೇಳ್ತಾನೆ ಇರಬೇಕು. . ಯಾವಾಗ್ಲೂ ಕೋಳಿ ಜಗಳ ಆಡಬೇಕು, ಜಗಳ ಆಡಿದ ನಂತರ ನೀನು ಸಮಾಧಾನ ಮಾಡುವುದು. ನೀನು ಪಡುವ ಕಷ್ಟ ಪರದಾಟ ಆಯ್ಯೋ ಎಷ್ಟು ಖಷಿ ಕೋಡುತ್ತದೆ ಗೊತ್ತಾ ಅದಕ್ಕೋಸ್ಕರನೇ ಸಣ್ಣ ಸಣ್ಣ ವಿಚಾರವನ್ನು ತೆಗೆದು ಜಗಳ ಮಾಡುತ್ತಿದ್ದೆ. ಜಗಳ ಆಡೋಕೆ ಕಾರಣವನ್ನು ಹುಡುಕುತ್ತಿದ್ದೆ. ಕೋಪ ಬಂದಿಲ್ಲವೆಂದರು ಸಮಾಧಾನ ಮಾಡಲಿ ಎನ್ನುವ ಕಾರಣಕ್ಕೆ ಕೋಪ ಬಂದಂತೆ ನಟನೆ ಮಾಡುತ್ತಿದ್ದೆ. ನನ್ನಲ್ಲಿನ ಹೊಸ ಹೊಸ ಗುಣವನ್ನು ಹೇಳುತ್ತಿರಬೇಕು. ನಾನ್ ಹೇಗೆ ನಿಮಗೆ ಮುಖ್ಯ ಮತ್ತೊಬ್ಬರಿಗಿಂತ ಅಂತಾ ಹೇಳುತ್ತಿರಬೇಕು. ನನ್ನ ಬಿಟ್ಟು ದೂರ ಎಲ್ಲೂ ನೀನು ಹೋಗಬಾರದು, ಇಲ್ಲೇ ನನ್ನ ಜೊತೆಗೆ ಇರಬೇಕು ಎನ್ನಿಸುತಿತ್ತು. ಬೇರೆ ಹುಡುಗಿಯರ ಜೊತೆ ಮಾತನಾಡಬಾರದು. ಓಡಾಡಬಾರದು ಇಷ್ಟೆಲ್ಲಾ ಫೀಲ್ ಮಾಡುತ್ತೇನೆ, ಇಷ್ಟೆಲ್ಲಾ ನಿನ್ನಿಂದ ಬಯಸುತ್ತೇನೆ ನೀವು ಹುಡುಗರು ಮನಸ್ಸಿನಲ್ಲಿರುವುದು ಪಟಾಪಟ್ ಅಂತಾ ಹೇಳುತ್ತೀರ ಆದರೆ ನಾನು ಹುಡುಗಿ ಆಗೆ ಹೇಳಲಾಗದು ಎಂದೆ ಇಷ್ಟೆಲ್ಲಾ ಎಕ್ಸ್ ಪೆಕ್ಟೇಶನ್ ಇಟ್ಟುಕೊಂಡಿದ್ದೀರ ಇದನ್ನು ಲವ್ ಎನ್ನುವುದಿಲ್ಲವೇ ಇದೆಲ್ಲ ಏನು ಎಂದು ಕೇಳಿದರೆ ಪ್ಲೀಸ್ ಕೈಮುಗಿಯುತ್ತೇನೆ ನನಗೇನು ಕೇಳಬೇಡ, ಲವ್ ಎನ್ನುವುದು ಒಂದು ರೀತಿ ಸ್ಲೋ ಪಾಯಿಸನ್ ಇದ್ದ ಹಾಗೆ ಎಲ್ಲರನ್ನು ನಮ್ಮಿಂದ ದೂರ ಮಾಡುತ್ತದೆ. ಅದರಿಂದ ನಾವು ದೂರವಿದ್ದಷ್ಟು ಒಳ್ಳೆಯದು ಎಂದ್ರಿ. ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ನೀವೆ ಉತ್ತರಿಸಬೇಕು.
ನಿನ್ನ ಬಗ್ಗೆ ತುಂಬಾ ಯೋಚಿಸಿದ್ದೀನಿ , ನೀನು ಪ್ರಪೋಸ್ ಮಾಡುವಾಗ ಎಷ್ಟು ಭಯ ಪಟ್ಟುಕೊಳ್ಳುತ್ತಿದ್ದಲ್ಲ ಅದು ಎಷ್ಟು ಚಂದ ಇರುತಿತ್ತು ಗೊತ್ತಾ ಆದರೂ ನೀನೊಂದು ತರ ಪಾಪ ಕಣೋ. ಅಪ್ಪ ಸತ್ತಾಗಲೂ ನನ್ನ ಕೈಮೇಲೆ ಕೈ ಇಟ್ಟುನೀನು ನನ್ನ ಒಂಟಿ ಮಾಡಿ ಹೋಗುವುದಿಲ್ಲ ಅಲ್ಲವೇ. ಅಪ್ಪನೂ ನನ್ನ ಬಿಟ್ಟು ಹೋದರು ನಾನೀಗ ಒಂಟಿ ಕಣೋ ಪ್ಲೀಸ್ ನೀನು ಬಿಟ್ಟುಹೋಗಬೇಡ ಎನ್ನುತ್ತಿದ್ದೆ ಯಾಕೆ ಇದೆಲ್ಲಾ ಪ್ರೀತಿ ಅಲ್ಲವೇ. ಈಗ ನಾನು, ನನ್ನ ಪ್ರೀತಿ ಸಾಕಾಯಿತೇ? ಇವತ್ತಲ್ಲ, ನಾಳೆ ನನ್ನೆಲ್ಲಾ ಪ್ರಶ್ನೆಗಳಿಗೆ ನೀನು ಉತ್ತರಿಸಿಯೇ ಉತ್ತರಿಸುತ್ತೀಯ. ನಿನಗಾಗಿ ಕಾಯುತ್ತಲೇ ಇರುತ್ತೇನೆ. ನೀನು ಹುಚ್ಚಿಯಾಗುವುದಲ್ಲದೆ ಎಲ್ಲೋ ಅಡ್ಡಾಡಿಕೊಂಡು ಆಡಿಕೊಂಡಿದ್ದ ಹುಡುಗನನ್ನು ಪ್ರೀತಿಯೆಂಬ ಅಸ್ತ್ರ ಪ್ರಯೋಗ ಮಾಡಿ ಹುಚ್ಚನನ್ನಾಗಿ ಮಾಡಿದ್ದೀಯ ಇದೆಷ್ಟು ಸರಿ ಯೋಚಿಸು.

  • ಪ್ರಮೋದ್ ಲಕ್ಕವಳ್ಳಿ.

POPULAR  STORIES :

ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ

ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!

ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.

ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?

ಸೆಕ್ಸ್ ಉದ್ಯಮದಲ್ಲಿ ಚೀನಾ ನಂ.1 ಭಾರತ ನಂ.7..!

ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!

ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...