ಪ್ರಪಂಚದಲ್ಲೆಲ್ಲಾ ಒಂದೇ ತರನಾದ ಸಂಸ್ಕೃತಿ, ಆಚಾರ ವಿಚಾರಗಳು ಇರಲು ಸಾದ್ಯವೇ ಇಲ್ಲ. ಪ್ರತಿಯೊಂದು ಸಮುದಾಯಗಳಲ್ಲೂ ಅವರದ್ದೇ ಆದ ನೀತಿ ನಿಯಮಗಳಿರುವುದು ಸಾಮಾನ್ಯ ಸಂಗತಿ. ವ್ಯಕ್ತಿಯೊಬ್ಬ ಸಾವನ್ನಪ್ಪಿದ್ರೆ ಹಿಂದಿನಿಂದಲೂ ರೂಢಿಸಿಕೊಂಡು ಬಂದಿರುವ ವಿಧಿ ವಿಧಾನಗಳನ್ನು ಆಚರಿಸಿಕೊಂಡು ಹೋಗುವುದು ವಾಡಿಕೆ. ಅದನ್ನ ಕನ್ನಡದ ತಿಥಿ ಸಿನಿಮಾ ನೋಡುದ್ರೆನೇ ಗೊತ್ತಾಗುತ್ತೆ ಅಲ್ವಾ..? ಸಾವಿನ ಮನೆ ಅಂದ್ರೆನೇ ಅದು ಸೂತಕದ ಛಾಯೆ ಇದ್ದಂಗೆ. ಬಂಧು ಮಿತ್ರರು, ಸ್ನೇಹಿತರೆಲ್ಲರೂ ಕಣ್ಣೀರು ಹಾಕೋದು, ಕಾರ್ಯಗಳಿಗೆ ಸಿದ್ದತೆ ನಡೆಸೋದು ಸಾಮಾನ್ಯದ ಸಂಗತಿ. ಅದುನ್ನೆಲ್ಲಾ ಬಿಟ್ಟು ಸಾವಿನ ಮನೇಲಿ ಬಾರ್ ಗರ್ಲ್ಸ್ ಬಂದು ಡ್ಯಾನ್ಸ್ ಮಾಡುದ್ರೆ ಹೇಗಿರುತ್ತೆ ನೀವೇ ಕಲ್ಪನೆ ಮಾಡಿಕೊಳ್ಳಿ..!
ಇಂತಹ ವಿಚಿತ್ರ ಸಂಪ್ರದಾಯ ಇರೋದು ಬೇರೆಲ್ಲೂ ಅಲ್ಲ ನೆರೆಯ ರಾಷ್ಟ್ರ ಚೀನಾದಲ್ಲಿ.. ವಿಚಿತ್ರ ಏನಪ್ಪಾ ಅಂದ್ರೆ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರೋದಲ್ವಂತೆ ಬದ್ಲಾಗಿ ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯವನ್ನ ಆಡ್ ಮಾಡಿರೋದಂತೆ ನೋಡಿ.. ಇದ್ಯಾಕೆ ಈ ವಿಚಿತ್ರ ಪದ್ದತಿ ಅಂತ ನಿಮ್ಮ ತಲೇಲಿ ಕೊರಿತಾ ಇದ್ರೆ ಉತ್ತರ ಕೇಳುದ್ರೆ ನೀವೇ ಶಾಕ್ ಆಗ್ಬಿಡ್ತೀರ..! ಚೀನಾದಲ್ಲೇಲ್ಲಾ ಜನ್ರಿಗೆ ಶೋಕಾಚರಣೆಯಲ್ಲಿ ಪಾಲ್ಗಳ್ಳೋವಷ್ಟು ಟೈಮ್ ಇಲ್ವಂತೆ ನೋಡಿ… ಅದಕ್ಕಾಗಿನೇ ಚೀನಾ ಜನರನ್ನ ಸೆಳೆಯೋ ಉದ್ದೇಶದಿಂದ ಸತ್ತೋರ್ ಮುಂದೆ ಬಾರ್ ಗರ್ಲ್ಸ್ ಸ್ಟೆಪ್ ಹಾಕ್ತಾರಂತೆ. ಅವರ ಸ್ಟೆಪ್ ನೋಡೋಕಾದ್ರೂ ಜನರು ಸಾವಿನ ಮನೆ ಮುಖ ನೋಡ್ತಾರೆ ಅನ್ನೋದು ಜನರ ಅಭಿಪ್ರಾಯ. ಅಷ್ಟೇ ಅಲ್ಲಾ ರೀ ಸಾವಿನ ಮನೆಯವ್ರು ನೋವನ್ನೆಲ್ಲಾ ಮರೆತು ಸಂತೋಷವಾಗಿ ಜೀವನ ನಡೆಸಲೀ ಅನ್ನೋದು ಚೀನಾ ಜನರ ಪ್ಲಾನ್..! ಎಂತೆಂತಾ ಜನರಿರ್ತಾರೆ ಅಲ್ವಾ..?
POPULAR STORIES :
ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!
ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.
ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!
ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ
ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!
ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.
ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?