ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಕಛೇರಿಗೆ ನುಗ್ಗಲು ಪ್ರಯತ್ನಿಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಗೊಂಡಿದ್ದಾಳೆ.
ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನ ಇಂದಿರಾನಗರದಲ್ಲಿರುವ ಆಮ್ನೇಸ್ಟಿ ಇಂಟರ್ ನ್ಯಾಶನಲ್ ಇಂಡಿಯಾ ಕಛೇರಿ ಮುಂದೆ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದಿರೆ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‍ಗಳನ್ನು ದಾಟಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಕಾರ್ಯಕರ್ತರು ಮುಂದಾಗಿದ್ದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಈ ಕುರಿತು ಪ್ರತಿಭಟನೆ ವೇಳೆ ಮಾತನಾಡಿದ ವಿನಯ್ ಬಿದಿರೆ ಅವರು ಕರ್ನಾಟಕ ಸರ್ಕಾರ ದೇಶ ದ್ರೋಹಿಗಳನ್ನು ರಕ್ಷಣೆ ಮಾಡಲು ಹೊರಟಿದೆ. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಕೈ ಬಿಡೆವು ಎಂದು ಎಚ್ಚರಿಸಿದ್ದಾರೆ.
ಪೊಲೀಸರ ಲಾಠಿ ಏಟಿಗೆ ಓರ್ವ ಗಾಯಗೊಂಡಿದ್ದು, ವೀಣಾ ಎಂಬ ಯುವತಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
POPULAR STORIES :
ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!
ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!
ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!
ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.
ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!
ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ