ವಿಶ್ವ ವಿಖ್ಯಾತ ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶ ನೀಡಬೇಕೆಂದು ಮಹಿಳೆಯರು ಕಳೆದೊಂದು ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿದ್ದರೆ, ಮತ್ತೊಂದೆಡೆ ಈಗ ಇರುವ ವ್ಯವಸ್ಥೆಯನ್ನು ಬೆಂಬಲಿಸಿ ಮಹಿಳೆಯರ ಗುಂಪೊಂದು ಆನ್‍ಲೈನ್‍ನಲ್ಲಿ ಹೊಸ ಹೋರಾಟ ಆರಂಭಿಸಿದೆ..!
ಅಯ್ಯಪ್ಪ ಸ್ವಾಮಿ ದೇವಾಲಯ ಧಾರ್ಮಿಕ ಪರಂಪರೆಯ ತಾಣ. ಅಷ್ಟೇ ಅಲ್ಲ ಇದೊಂದು ಪವಿತ್ರವಾದ ಸನ್ನಿಧಿ. ಈ ಸನ್ನಿಧಿಗೆ ದರ್ಶನ ಪಡೆÀಯುವವರು ಎಷ್ಟೊಂದು ವೃತವನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಕೋಟ್ಯಾನು ಕೊಟಿ ಭಕ್ತರು ಕಲ್ಲು, ಮುಳ್ಳಗಳನ್ನೆಲ್ಲಾ ದಾಡಿ ಅಯ್ಯಪ್ಪ ಸ್ವಾಮಿಯ ಜಪವನ್ನು ಮಾಡಿ ಮಡಿ ಮೈಲಿಗೆಯಿಂದ ದೇವರ ದರ್ಶನ ಭಾಗ್ಯವನ್ನು ಪಡೆಯುತ್ತಾರೆ. ಇಂತಹ ಪವಿತ್ರ ಸನ್ನಿಧಿಗೆ ಈಗಿರುವ ಹತ್ತು ವರ್ಷದೊಳಗಿನ ಹಾಗೂ 55 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಅವಕಾಶ ಎಂಬ ನಿಯಮವೇ ಸರಿ, ಋತುಮತಿಯಾದ ಮಹಿಳೆ ದೇವಾಲಯ ಪ್ರವೇಶಿಸಿದರೆ ಮೈಲಿಗೆಯಾಗುತ್ತದೆ ಎಂಬುದು ಈ ಮಹಿಳೆಯರ ವಾದ. ಹಾಗಾಗಿ ನಾವು 55 ವರ್ಷದವರೆಗೆ ಕಾಯಲು ಸಿದ್ದರಿದ್ದೇವೆ ಎಂದು ‘ರೆಡಿ ಟು ವೈಟ್’ ಆಂದೋಲನವನ್ನು ಆನ್‍ಲೈನ್‍ನಲ್ಲಿ ಆರಂಭಿಸಿದ್ದಾರೆ.
ಈ ಆಂದೋಲನಕ್ಕೆ ಕೇರಳ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ಎಡರಂಗ ಇದನ್ನು ರಾಜಕೀಯವಾಗಿ ಮಾಡಿಕೊಂಡು ಧಾರ್ಮಿಕ ರಂಗಗಳನ್ನ ಅತಿಕ್ರಮಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಅಯ್ಯಪ್ಪ ಸ್ವಾಮಿಯನ್ನು ನಂಬದವರು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡುತ್ತಿರುವ ಬಗ್ಗೆ ಮಹಿಳಾ ವರ್ಗದಲ್ಲಿ ಆಕ್ರೋಶವಿದೆ ಎಂದು ಅಭಿಯಾನದ ಸದಸ್ಯೆಯಾದ ಸುಜಾ ಪವಿತ್ರನ್ ಎಂಬುವವರು ಖಾಸಗೀ ವಾಹಿನಿಗೆ ತಿಳಿಸಿದ್ದಾರೆ.
ಶಬರಿ ಮಲೈ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ನಿಷೇಧ ವಿರೋಧಿಸಿ ಕಳೆದ ನವಂಬರ್‍ನಲ್ಲಿ ಮಹಿಳಾ ಪರ ಹೋರಾಟಗಾರ್ತಿಯರು ಆನ್ಲೈನ್ ಮೂಲಕ ಹೋರಾಟ ನಡೆಸಿದ್ದರು. ಇದೀಗ ಈ ಮಹಿಳೆಯರ ವಿರುದ್ದ ಇನ್ನೋಂದು ಮಹಿಳಾ ಸಂಘಟನೆ ಹುಟ್ಟಿಕೊಂಡಿರುವುದು ಎಲ್ಲರಿಗೂ ಚಕಿತಗೊಳಿಸಿದೆ…!
POPULAR STORIES :
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!
ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!
ಈ ವೃದ್ದ ಸನ್ಯಾಸಿಯ ದೀರ್ಘಾಯುಷ್ಯದ ಸೀಕ್ರೇಟ್ ಏನು ಗೊತ್ತಾ…?
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು