ಈ ಬಾರಿ ರಿಯೋ ಒಲಂಪಿಕ್‍ನಲ್ಲಿ ಮೊದಲ ಸುತ್ತಿನಲ್ಲೇ ಕೂಟದಿಂದ ಹೊರ ಬಿದ್ದು ಕೋಟ್ಯಾಂತರ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಭಾರತದ ಕುಸ್ತಿ ಪಟು ಯೋಗೇಶ್ವರ ದತ್‍ಗೆ ಇದೀಗ ಬಂಪರ್ ಆಫರ್ ಬಂದಿದೆ. ಈ ಹಿಂದಿನ 2012ರ ಲಂಡನ್ ಒಲಂಪಿಕ್‍ನಲ್ಲಿ 60 ಕೆಜಿ ಕುಸ್ತಿ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತಕ್ಕೆ ಕಂಚು ತಂದು ಕೊಟ್ಟಿದ್ದ ಯೋಗೇಶ್ವರ್ ಇದೀಗ ಅವರ ಪದಕ ಬೆಳ್ಳಿಗೆ ಪರಿವರ್ತನೆಗೊಳ್ಳುವ ಸಾಧ್ಯತೆ ಬಹು ಪಾಲು ಖಚಿತಗೊಂಡಿದೆ. ಲಂಡನ್ ಒಲಂಪಿಕ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರಷ್ಯಾದ ದಿವಂಗತ ಬೆಸಿಕ್ ಕುಡುಖೋವ್ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದರು ಎಂದು ಧೃಡ ಪಟ್ಟ ಹಿನ್ನಲೆಯಲ್ಲಿ ಅವರು ಪಡೆದ ಬೆಳ್ಳಿ ಪದಕವನ್ನು ಹಿಂಪಡೆಯಲಾಗಿದೆ. ಈ ಹಿನ್ನಲೆಯಲ್ಲಿ ಕಂಚಿನ ಪದಕ ಪಡೆದಿದ್ದ ಭಾರತದ ಯೋಗೇಶ್ವರ್‍ಗೆ ಬೆಳ್ಳಿ ಭಾಗ್ಯ ದೊರೆಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ. 2012ರ ಲಂಡನ್ ಒಲಂಪಿಕ್‍ನಲ್ಲಿ ಭಾರತೀಯರು ಒಟ್ಟು 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಜಯಿಸಿದ್ದರು. ಒಂದು ವೆಳೆ ಯೋಗೆಶ್ವರ್ ಅವರಿಗೆ ಬೆಳ್ಳಿ ಪದಕ ನೀಡಿದ್ದೇ ಆದಲ್ಲಿ ಬೆಳ್ಳಿ ಪದಕಗಳ ಸಂಖ್ಯೆ 3ಕ್ಕೆ ಏರಲಿದೆ. ಕಂಚಿನ ಪದಕ ಮೂರಕ್ಕೆ ಇಳಿಯಲಿದೆ.
POPULAR STORIES :
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!
ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!
ಈ ವೃದ್ದ ಸನ್ಯಾಸಿಯ ದೀರ್ಘಾಯುಷ್ಯದ ಸೀಕ್ರೇಟ್ ಏನು ಗೊತ್ತಾ…?
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು