ಇತ್ತೀಚೆಗೆ ಭಾರತಕ್ಕೆ ಮಹಿಳೆಯರ ಕೊಡುಗೆ ಯಾವ ರೀತಿಯಲ್ಲಿ ಇದೆ ಅನ್ನೋದನ್ನ ನಾವೇನು ಹೇಳೋ ಅಗ್ಯ ಇಲ್ಲ ಅನ್ಸತ್ತೆ.. ಅದ್ರಲ್ಲೂ ಕ್ರೀಡಾ ವಿಭಾಗಕ್ಕೆ ಬಂದ್ರೆ ಈ ಬಾರಿಯ ರಿಯೋ ಒಲಂಪಿಕ್‍ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದು ಇದೇ ಮಹೀಳಾ ಕ್ರೀಡಾ ಮಹಾಮಣಿಗಳು… ಅವರ ಈ ದಿಟ್ಟ ಪ್ರದರ್ಶನದಿಂದ ಈಗ ತಮ್ಮ ದೇಶ ಅವರಿಗೆ ಸನ್ಮಾನದ ರೂಪದಲ್ಲಿ ಕೊಟಿಗಟ್ಟಲೇ ಹಣ, ಐಶಾರಾಮಿ ಉಡುಗೊರೆ, ದೊಡ್ಡ ದೊಡ್ಡ ಫ್ಲಾಟ್ ಕೂಡ ನೀಡಿ ಅವರನ್ನು ಒಂದೇ ದಿನದಲ್ಲಿ ಕೋಟ್ಯಾಧೀಶರನ್ನಾಗಿ ಮಾಡಿದೆ. ಆದ್ರೆ ನಿಮಗೆಲ್ಲಾ ಭಾರತದ ಅಂಡರ್-14 ಮಹಿಳಾ ಫುಟ್ಬಾಲ್ ತಂಡದ ನಾಯಕಿಯ ಹೆಸರೇನು ಅಂತ ಗೊತ್ತಾ…? ಎಷ್ಟೋ ಜನರಿಗೆ ಭಾರತ ಫುಟ್ಬಾಲ್ ಆಡುತ್ತಾ ಅನ್ನೋದೇ ಡೌಟಾಗಿರ್ವಾಗ.. ಇನ್ನು ಮಹಿಳಾ ತಂಡದ ನಾಯಕಿಯ ಬಗ್ಗೆ ಏನ್ ಗೊತ್ತಿರತ್ತೆ ಹೇಳಿ… ಆಕೆಯ ಹೆಸರು ಸೊನಿ ಕುಮಾರಿ.. ಭಾರತ ಅಂಡರ್-14 ಮಹಿಳಾ ಫುಟ್ಬಾಲ್ ತಂಡದ ದಿ ಗ್ರೇಟ್ ಕ್ಯಾಪ್ಟನ್…! ಹೆಸರಿಗೆ ಮಾತ್ರ ಈಕೆ ದಿ ಗ್ರೇಟ್ ಕ್ಯಾಪ್ಟನ್… ಆದ್ರೆ ಈಕೆ ಜೀವಿಸುತ್ತಾ ಇರೋದು ಒಂದು ಸಣ್ಣ ಮುರುಕಲು ಮನೇಲಿ…! ಇಂದು ಆಕೆ ತುತ್ತು ಅನ್ನಕ್ಕಾಗಿ ಕಷ್ಟ ಪಡ್ತಾ ಇದಾಳೆ ಅಂದ್ರೆ ಯಾರಾದ್ರೂ ನಂಬ್ತೀರಾ…? ನಂಬ್ಲೇ ಬೇಕು ಯಾಕಂದ್ರೆ ಇಂದು ಆಕೆಗೆ ಬಡತನ ಅನ್ನೋದು ಕಿತ್ತು ತಿಂತಾ ಇದೆ..!
ಬಿಹಾರ ಮೂಲದ ದಿ ಮೊಸ್ಟ್ ಟ್ಯಾಲೆಂಟೆಡ್ ಫುಟ್ಬಾಲ್ ಕ್ಯಾಪ್ಟನ್ ಸೋನಿ 2013ರ ಏಷಿಯನ್ ಫುಟ್ಬಾಲ್ ಕಾನ್ಫಡರೇಶನ್ ಟೂರ್ನಿಮೆಂಟ್‍ನಲ್ಲಿ ಭಾರತಕ್ಕೆ ಚಾಂಪಿಯನ್ ಪಟ್ಟ ಪಡೆಯಲು ಮೂಲ ಕಾರಣ ಕರ್ತಿ ಈ ಸೋನಿ… ಅಷ್ಟೇ ಅಲ್ಲ ಅಂಡರ್-14 ಫುಟ್ಬಾಲ್ ಟೂರ್ನಮೆಂಟ್‍ನಲ್ಲಿ ಭಾರತಕ್ಕೆ ಹಲವಾರು ಟ್ರೋಫಿಯನ್ನೂ ಸಹ ತಂದು ಕೊಟ್ಟಿದ್ದಾಳೆ.. ಆದ್ರೆ ಪ್ರಸ್ತುತ ಸೋನಿ ಕುಟುಂಬ ಕಡು ಬಡತನದಿಂದ ನರಳುತ್ತಿದೆ.. ತಮ್ಮ ರಾಜ್ಯ ಆಕೆಗಾಗಿ ಯಾವುದೇ ರೀತಿಯ ಸೌಲತ್ತನ್ನೂ ನೀಡದೇ ಆಕೆಯನ್ನು ನಿರ್ಲಕ್ಷದಿಂದ ನೋಡ್ತಾ ಇದೆ. ಒಬ್ಬ ಅತ್ಯದ್ಭುತ ಪ್ರತಿಭೆ ನಮ್ಮ ದೇಶದಲ್ಲಿ ಎಲೆ ಮರೆಯ ಕಾಯಾಗಿ ಹೋಗ್ತಾ ಇರೋದು ನಮ್ಮ ದೇಶದ ಅತೀ ದೊಡ್ಡ ದುರಂತ ನೋಡಿ..
ಆಕೆ ತನ್ನ ಕುಟುಂಬಕ್ಕೆ ಸಹಾಯ ಹಸ್ತ ಚಾಚುವಂತೆ ಹಲವಾರು ಬಾರಿ ಯುಎನ್‍ಐಸಿಇಎಫ್ ಹಾಗೂ ಪ್ರಧಾನಿ ನರೆಂದ್ರ ಮೋದಿ ಅವರಲ್ಲಿ ಕೇಳಿಕೊಂಡಿದ್ದರೂ, ಕೇಂದ್ರ ಸರ್ಕಾರವಾಗಲೀ ಅಥವಾ ತಮ್ಮ ರಾಜ್ಯವಾಗಲೀ ಮುಂದೆ ಬಂದಿಲ್ಲ. ಅವಳ ಟ್ಯಾಲೆಂಟ್‍ನ್ನು ಯಾರೂ ಸಹ ಗುರುತಿಸದಿದ್ದರೂ ಕೂಡ ಇಂದಿಗೂ ಆಕೆ ಫುಟ್ಬಾಲ್‍ನಿಂದ ದೂರ ಉಳಿದಿಲ್ಲ…! ವಿಚಿತ್ರ ಅಂದ್ರೆ ಆಕೆ ತರಬೇತಿಗೆ ಬರುವ ಸಂದರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಪ್ರಾಕ್ಟೀಸ್ ಮಾಡ್ತಾಳೆ ಎಂದು ಆಕೆಯ ಕೋಚ್ ಬೆಸರ ವ್ಯಕ್ತ ಪಡಿಸಿದ್ದಾರೆ..!
ಇಷ್ಟೆಲ್ಲಾ ಆದರೂ ನಮ್ಮ ದೇಶದ ಯಾವೊಬ್ಬ ವ್ಯಕ್ತಿಯೂ ಆಕೆಗೆ ಸಹಾಯ ನೀಡಲು ಕೈ ಚಾಚಿಲ್ಲ. ಪ್ರತಿ ದಿನ ಆಕೆ ಮೂರೊತ್ತು ಊಟ ಮಾಡುತ್ತಾಳೋ ಇಲ್ಲವೋ ಗೊತ್ತಿಲ್ಲ ಆದ್ರೆ ಫುಟ್ಬಾಲ್ ಪ್ರ್ಯಾಕ್ಟೀಸ್‍ಗೆ ಎಂದೂ ತಪ್ಪಿಸಿಲ್ಲ ಎನ್ನುತ್ತಾರೆ ಕೋಚ್… ಪ್ರಸ್ತುತದಲ್ಲಿ ಸೋನಿ ಕುಟುಂಬಕ್ಕೆ ನೆರವಿನ ಅಗತ್ಯ ತುಂಬಾ ಇದೆ. ದಯವಿಟ್ಟು ಈ ಸ್ಟೋರಿ ಓದಿದವರಲ್ಲಿ ಯಾರಾದ್ರೂ ಆಕೆಗೆ ಸಹಾಯ ನೀಡಬೇಕು ಎಂದು ಅನ್ನಿಸಿದ್ರೆ 91-9470488468 ಗೆ ಕರೆ ಮಾಡಿ ಅವರ ವಿಳಾಸ ಪಡೆದುಕೊಳ್ಳಿ.
POPULAR STORIES :
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.