ನಿಮ್ಮ ಹೆಸರು ನಮ್ಮ ಮನದಲ್ಲಿದೆ…

Date:

ಹಿಂಗೆ ಸ್ವಲ್ಪ ದಿನದ ಹಿಂದೆ ಕಣ್ರೀ
ನಾನು ತುಮಕೂರು ಇಂದ ಶಿವಮೊಗ್ಗಗೆ ಹೋಗ್ತಾ ಇದ್ದೆ
ಹುಡುಗ್ ಬುದ್ಧಿ ಗೊತ್ತಲ್ಲಾ.! ಮೊದಲು ಬಸ್ ಹತ್ತಿದೆ ಬಸ್ ಅಲ್ಲಿ ಯಾವ್ ಯಾವ್ ಸೀಟಲ್ಲಿ ಯಾರ್ ಯಾರ್ ಇದಾರೆ ನೋಡ್ದೇ, ಓಂದು ಸೀಟ್ ಅಲ್ಲಿ ಯಾರು ಕೂತಿರ್ಲಿಲ್ಲ ಹೋಗಿ ಕೂತ್ಕೊಂಡೆ ಪಕ್ಕದ ಸೀಟ್ಗೇ ನನ್ನ ಬ್ಯಾಗ್ ಇಟ್ಕೊಂಡೇ( ಕಾರಣ ನಿಮಗೂ ಗೊತ್ತು ಯಾಕಂತ)
ಓಬ್ಬರು ಅಂಕಲ್ ಬಂದರೂ ಕೂತ್ಕೊಳೊಕೆ ಇಲ್ಲ ಅಂಕಲ್ ಬರ್ತಾರೆ ಅಂದೆ ,‌ ಇನ್ನೋಬ್ಬ ಕಾಲೇಜ್ ಹುಡುಗ ಬಂದ ಸೇಮ್ ಡೈಲಗ್ ಸ್ವಲ್ಪ ಎಡಿಟೆಡ್ ಬರ್ತಾರೆ ಕಣಪ್ಪ ಅಂದೇ..
ಇದೆಲ್ಲದರ ಮಧ್ಯೆ ನಾನು ತುಮಕೂರ್ ಬಸ್ ಸ್ಟ್ಯಾಂಡ್ನಲ್ಲಿ ಒಂದು ಹುಡುಗಿ ಆಚೀಚೆ ಓಡಾಡುತ್ತಾ ತನ್ನ ಮುಂಗುರುಳು ಹಾರಿಸುತ್ತಾ ಅದೇನೇನೋ ವಿಚಾರಿಸುತ್ತಿದ್ದಳೂ ನನಗೂ ಇನ್ನೇನೂ ಕೆಲಸ ಬಸ್ ಹೊರಡುವವರೆಗೂ ಇವಳನ್ನೆ ನೋಡೋಣಾ ಅನ್ನಿಸ್ತಿತ್ತು..
ಕಾರಣ ಅವಳ ಅರಳು ಕಂಗಳೋ..!
ಬಿಡಿ ಬಿಡಿಯಾದ ಮುಂಗುರುಳೋ..?
ಅಂತಃ ಜನ ನಿಬಿಡ ಜಾಗದಲ್ಲು ಎಣಿಸಿ ಹೆಜ್ಜೆ ಇಡುತ್ತಿದ್ದ ಅವಳ ಬಂಗಿಯೋ…
ಇಲ್ಲ ನನ್ನಿಷ್ಟದ ಬಣ್ಣದ ತೆಳು ನೇರಳೆ ಬಣ್ಣದ ಸೆಲ್ವರ್ ಕಮೀಜೋ…? ಏನೋ ಎಂತದೋ ಈ ಮನಸೆಂಬ ಮಯಾಗಾರನಿಗೆ ಗೊತ್ತು.
ಸರಿ ಆ ಜನ ಜಾತ್ರೆಯ ಮಧ್ಯೆ ಮರೆಯಾದ
ಕ್ಷಣ ಹೊತ್ತು ನನ್ನ ಸೆಳೆದ ಮಾಟಗಾತಿಯನ್ನು
ಸ್ವಲ್ಪ ಹೊತ್ತಿನ ಮುಂಚೆ ಸವಿದ ಡೈರಿ ಮಿಲ್ಕ್ ಚಾಕೊಲೆಟ್ನಂತೆ ನೆನಪು ಮಾಡಿಕೊಂಡು ಕಣ್ಮಚ್ಚಿದೆ‌..
ಕಿಟಕಿಯಾಚೆಯಿಂ ದ ತಣ್ಣನೆಯ ಹವೆ ಶುರುವಾಯಿತು ಧೂಮ್ರಷಕಟ ಹೊರಟ ಅರಿವಿನ ನಡುವೆ..
ಹೆಲೊ ಎಕ್ಸಕ್ಯೂಸ್ ಮೀ .? ಎಂದಿತು ಸಣ್ಣ ಧನಿ
ಯಾರೆಂದು ಕಣ್ಬಿಟ್ಟೆ ಅರೇ..!
( ಏನು ಅದೇ ಹುಡುಗಿ ಬಂದ್ಲೂ ಅಂದ್ಕೊಂಡ್ರಾ..?
ನೋ ಛಾನ್ಸ್ ಇದು ಮೂವಿ ಅಲ್ಲ ಕಣ್ರೀ ಲೈಫು)
ಯಾರದ್ರೂ ಬರ್ತಾರ ಅಂದ್ಲೂ ., ನಾನೋ ಮೆಲ್ಲಗೆ
ಒಳಗೆ ಮಂಡಕ್ಕಿ ಕುಟ್ಟುತ್ತ ಇಲ್ಲ ಬನ್ನೀ ಅಂತಾ ಸುಮ್ಮನೇ ನನ್ನ ಬ್ಯಾಗ್ ತೆಗೆದು ಕೊಂಡೆ ಅಷ್ಟೇ
ಅಲ್ಲೆ ಪಕ್ಕದಲ್ಲಿ ನಿಂತಿದ್ದ ಅಂಕಲ್, ಮತ್ತು ಆ ಕಾಲೇಜು ಹುಡುಗ ಇಬ್ಬರು ಹಿಡಿ ಶಾಪ ಹಾಕಿದ್ದು ಅವ್ರ ತುಟಿ ಅಲುಗಾಟದಲ್ಲಿ, ಕಣ್ ಕೆಮಿಸ್ಟ್ರೀಯಲ್ಲೇ ಗೊತ್ತಾಯ್ತು (ಏನಂತ ಕೇಳ್ಬೇಡಿxxx),
ಮಗೂ ಕಡೂರಿಗೆ ಟಿಕೆಟ್ ತಗೊಂತು! ಓಹ್ ಐ ಥಿಂಕ್ ಮೂರು ಗಂಟೆ ಜೊತೆ ಸಿಕ್ಕಿದ್ ಖುಷಿ..
ಇವ್ಳೂ ಬಗ್ಗೆ ಹೇಳಲೆ ಬೇಕಲ್ವಾ,.!.ಇಲ್ಲಾಂದ್ರೆ ನೀವು ಬಿಡೊಲ್ಲ .,
ಏನಂದ್ರೆ ಫೇರ್ ಅಂಡ್ ಲವ್ಲೀ ಗೂ ಕಾಂಪಿಟೇಷನ್ ಕೊಡೊ ಕಲರ್,. ಸಿಸಿ ಟಿವಿಗಿಂತ ಶಾರ್ಫ್ ಐಸ್,.
ಬಸ್ ನ ಕಂಬಿಯ ಮೇಲೆ ಅವಳ ಬೆರಳಿಟ್ಟರೆ ಬೆರಳುಗಳೇ ಹೊಳಾಪಾಗಿದ್ವು,.
ಯಾಕೊ ಹುಡುಗಿ ಮಾತಿಗೆ ಬರುವ ಯಾವುದೇ ಮುನ್ಸೂಚನೆ ಕಾಣ್ಲಿಲ್ಲ., ನಾನೂ ಎಷ್ಟೂ ಅಂತಾ ನೋಡ್ಲಿ,.. ಕಾಯೋಕ್ ಆಗ್ಲಿಲ್ಲ ಎಂದಿನಂತೆ ನನ್ನ ಬ್ಯಾಗಿನೊಳಗಿದ್ದ
ನೀ ಹಿಂಗ ನೋಡ ಬ್ಯಾಡ ನನ್ನ ಪುಸ್ತಕವನ್ನು ತೆಗೆದು ನೂರೈವತ್ತನೆ ಪುಟವನ್ನು ಓದಲೂ ಪ್ರಾರಂಭಿಸಿದೆ., ನಾಲ್ಕೈದು ಸಾಲು ಓದಿದ್ದೆ ಅಷ್ಟೇ ನೀವು ರವಿಬೆಳೆಗೆರೆ
ಫ್ಯಾನಾ.? ಅಂದ್ಲೂ ಹೌದೂ ಅಂದೇ ಕೈ ಕೊಟ್ಟು ನಾನೂ ಕೂಡ ಅಂದ್ಲೂ! ಅಯ್ಯೋ ದೇವ್ರೆ ಈ ವಿಷಯ ಮೊದಲೆ ಗೊತ್ತಿದ್ದಿದ್ರೆ ಅಂದ್ಕೊಂಡೆ ಮತ್ತೆ ಪಾರ್ಟಿ ಸುದ್ದಿ ತನ್ನ ಪಾಡಿಗೆ ತಾನೂ ಕೂತು ಬಿಟ್ಲೂ‌
ಕಡೆದ ಬೆಣ್ಣೆಯ ಬೊಂಬೆಯ ಜೊತೆ ಪಯಣ ಮಾಡುವ ರಸ ಸಂಧರ್ಭ
ಇದ್ದಕ್ಕಿದ್ದಂತೆ ಬಸ್ ರಸ್ತೆಯ ಪಕ್ಕಕ್ಕೆ ಸರೀತು ಯಾಕೆ ಎಂದು ಕಿಟಕಿಯಿಂದ ಬಗ್ಗಿ ನೋಡಿದಾಗ ಆಕ್ಸೆಲ್ ಕಟ್ ಆಗಿದೆ ಎಂಬ ಉತ್ತರ!.#ರಿಪೇರಿ
ಸರಿ ಇನ್ನೇನೂ ಎಂದು ಬಸ್ ಇಳಿದು ಆಚೀಚೆ ನೋಡುವಾಗ ನೀವು ರವಿ ಸರ್ದು ಎಷ್ಟು ಪುಸ್ತಕ ಓದಿದೀರಾ..? ಎಷ್ಟು ವರ್ಷದಿಂದ ಅವ್ರ ಫ್ಯಾನ್..? ಅವ್ರನ್ನ ಮೀಟ್ ಮಾಡಿದೀರಾ..?
ಪ್ರಶ್ನೆಗಳ ಸುರಿಮಳೆಗಳನ್ನೇ ಬಿಟ್ಟಳೂ ಹುಡುಗಿ.
ನಾನು ಪರಿಚಯವಿಲ್ಲದವರ ಜೊತೆ ಮಾತು ಸ್ವಲ್ಪ ಕಡಿಮೆ ಮೇಡಂ ಎಂದೆ, ಅವ್ಳೂ ಮೈ ಸೆಲ್ಫ್ #ಮಾನಸ
ನೀವು ಅಂದ್ಳೂ , #ಚೇತನ್ ಎಂದು ಹಲ್ಲು ಕಿರಿದೆ ನಾನು. ಹಾಗೂ ಹೀಗೂ ಒಂದಿಷ್ಟು ವಿಷಯಗಳು ವಿನಿಮಯವಾಯಿತು, ಅವಳ ಬಳಿ
ಡಯಾನಾ, ರೇಷ್ಮೆ ರುಮಾಲು , ನೀನಾ ಪಾಕಿಸ್ತಾನ.? ಬ್ಲಾಕ್ ಫ್ರೈ ಡೇ,. ಪುಸ್ತಕಗಳ ಕೊರತೆ ಇತ್ತು ಅವಳಿಗೆ ಸರಳವಾಗಿ ಅದರ ಬಗ್ಗೆ ವಿವರಿಸಿದೆ.,
ಬಸ್ ಮತ್ತೆ ಹೊರಡ್ತು
ನಾನು ರವಿ ಬೆಳಗೆರೆಯವರ ಬುಕ್ ರೀಡರ್ಸ ಗುಂಪಿನ ಸದಸ್ಯ ಎಂದು ತಿಳಿದು ಅವಳು ಎಕ್ಸೈಟ್ ಆದಳು,.
ಅವಳ ವಾಟ್ಸಾಪ್ ನಂಬರ್ ಕೊಟ್ಟಳು ಮತ್ತೆ ನಮ್ ಗುರುಗಳ ಪುಸ್ತಕ ಹೊಸದು ಅಚ್ಚಾದರೆ ಅವಳಿಗೆ ಗಿಫ್ಟ್ ಕೊಡುವೆ ಎಂದು ವಾಗ್ದನ ವಿತ್ತೆ., ಅವಳು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹುಡುಗಿ, ನಮ್ ತುಮಕೂರಲ್ಲಿ ಸಾಫ್ಟ್ವೇರ್ ಇಂಜಿನಿಯರಿಂಗ್ ಓದ್ತಿದಾಳೇ ಅಂತಾ ಗೊತ್ತಾಯ್ತು.. ಪದೇ ಪದೇ ನಮ್ಮಿಬ್ರದೂ ಸೇಮ್ ಟೇಸ್ಟ್ ಅಂತಿದ್ಲೂ,. ಅವ್ಳೂ ಹಂಗಂದಾಗ ನನ್ನ ಎದೆಲೀ ಯಾರೋ ಮಲ್ಲಿಗೆ ಗಿಡ ನೆಟ್ಟಂಗಾಯ್ತು! ಇಬ್ಬರು ಲೇಸ್ ಚಿಪ್ಸ್, ಸ್ಲೈಸ್ ಡ್ರಿಂಕ್ ಎಲ್ಲ ಶೇರ್ ಮಾಡಿದ್ದು ಆಯ್ತು.. ಬಸ್ ಅರಸಿಕೆರೆ ಬಿಟ್ಟು ಬಾಣವರ ದಾಟಿ ಕಡೂರ್ ಗೂ ಬಂತು., ಅವ್ಳು ಬರ್ಲಾ ಅಂದ್ಲೂ ,. ಅಷ್ಟು ಮುದ್ದಾದ ಹುಡುಗಿ ಮನಸು ಬಾರ ಆಗಿತ್ತು.. ಯಾಕೊ ಹೋದವ್ಳು ವಾಪಸ್ ಬಂದ್ಲೂ ಬ್ಯಾಗ್ ಇಂದ ಏನನ್ನೊ ತೆಗಿತಿದ್ಲೂ, ನಾನು ಮೊಸ್ಟ್ಲೀ ಅವ್ಳ ಅಡ್ರೆಸ್ ಬರ್ಕೊಡೊಕೆ ಪೆನ್ನು ಪೇಪರ್ ಹುಡುಕ್ತಿದಾಳೆ ಅಂದ್ಕೊಂಡೆ,
ಬಟ್ ಅವ್ಳೂ ತಪ್ಪದೆ ಬರ್ಬೆಕು ನನ್ ಮದ್ವೇ ಮುಂದಿನ್ ತಿಂಗಳು ಅಂತ ಇನ್ವಿಟೇಷನ್ ಕಾರ್ಡ ಕೊಟ್ಟು ಬಸ್ ಇಳಿದು ತನ್ನ ಪಾಡಿಗೆ ತಾನು ಹೊದ್ಲು.,!
ನಿಮ್ಮ ಹೆಸರು ನಮ್ಮ ಮನದಲ್ಲಿದೆ
ಎಂಬ ಪದವೆ ನನ್ನ ಹಂಗಿಸಲು ಶುರುವಾಯಿತು
ಎಂದಿನಂತೆ ನಿಮ್ಮವನು

  • ಚೇತನ್ ದಾಸರಹಳ್ಳಿ

POPULAR  STORIES :

ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...