ಉತ್ತರ ಪ್ರದೇಶದ ಆಗ್ರಾದಲ್ಲಿರೋ ಸಂಜಯ್ ನಗರ ಕಾಲೋನಿಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಒಂದು ಅಪೂರ್ವ ಕ್ಷಣವನ್ನು ನಿಮ್ಮಲ್ಲರನ್ನೂ ಮೂಕ ವಿಸ್ಮಿತವಾಗಿಸೋದು ಖಚಿತ. ಹಿಂದು ಮುಸ್ಲೀಂ ಭಾಯಿ ಭಾಯಿ ಅನ್ನೋದಕ್ಕೆ ಇಲ್ಲಿನ ಒಂದು ಶಾಲೆ ಸೂಕ್ತ ನಿದರ್ಶನವಾಗಿದೆ ನೋಡಿ..!
ಪ್ರತಿ ನಿತ್ಯ ಈ ಶಾಲೆಯಲ್ಲಿ 35 ಮುಸ್ಲೀಂ ಮಕ್ಕಳು ಕುರಾನ್ ಪಟನೆ ಮಾಡುತ್ತಾರೆ.. ಅರೇ ಮಸಲ್ಮಾನ್ ಕುರಾನ್ ಓದದೇ ಬೇರೇನು ಓದುತ್ತಾರೆ ಅಂತೀರಾ.. ಹೌದು ಕುರಾನ್ ಮುಸ್ಲೀಮರ ಧರ್ಮ ಗ್ರಂಥ ಆದ್ರೆ ಈ ಶಾಲೆಯಲ್ಲಿ ಆ ಧರ್ಮ ಗ್ರಂಥದ ಸಾರವನ್ನು ಹೇಳಿಕೊಡೋದು ಮಾತ್ರ ಹಿಂದು ಯುವತಿ..! 18 ವರ್ಷದ ಪೂಜಾ ಕುಶ್ವಾನಾ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದು ಅತ್ಯಂತ ಕಷ್ಟಕರವಾದ ಅರೇಬಿಕ್ ಬಾಷೆಯನ್ನು ಸುಲಲಿತವಾಗಿ ಓದಿ ಅಥೈಸಿಕೊಳ್ಳ ಬಲ್ಲ ಪೂಜಾ ಸುಮಾರು 35 ಮಕ್ಕಳೀಗೆ ಕುರಾನ್ ಪಾಠ ಹೇಳಿಕೊಡುತ್ತಾಳೆ.
ಪೂಜಾಳ ಈ ಸಾಧನೆಗೆ ಹೆಮ್ಮೆ ಪಡುತ್ತಿರುವ ಪೋಷಕರು ಆಕೆ ನಮ್ಮ ಮಕ್ಕಳಿಗೆ ಶಿಕ್ಷಕಿಯಾಗಿ ಸಿಕ್ಕಿರುವುದು ಅದೃಷ್ಟ ಎನ್ನುತ್ತಾರೆ. ಇಲ್ಲಿ ಧರ್ಮ ಅನ್ನೋದು ಅಲ್ಲಿನ ಜನತೆಯ ಮನಸ್ಸಿನಲ್ಲಿ ಬರುವ ಕೊನೇಯ ವಿಚಾರವಾಗಿದೆ. ಪೂಜಾ ಅರೇಬಿಕ್ ಕಲಿತಿದ್ದು ಒಂದು ರೀತಿಯ ಚಮತ್ಕಾರ ಎಂದು ಹೇಳಿರುವ ಜನರು ಈ ಹಿಂದೆ ಈ ಕಾಲೋನಿಯಲ್ಲಿ ಸಂಗೀತಾ ಬೇಗಂ ಎಂಬುವವರು ಮಕ್ಕಳಿಗೆ ಕುರಾನ್ ಪಾಠ ಹೇಳಿ ಕೊಡುತ್ತಿದ್ದರು. ಪೂಜಾ ಕೂಡ ಇತರೆ ಮುಸ್ಲೀಂ ಮಕ್ಕಳೊಂದಿಗೆ ಕುರಾನ್ ಪಾಠ ಕಲಿಯಲು ಹೋಗುತ್ತಿದ್ದಳು ಎಂದು ತಿಳಿಸಿದ್ದಾರೆ. ಇದೀಗ ಪೂಜಾ ಸಂಪೂರ್ಣವಾಗಿ ಕುರಾನ್ ಕಲಿತಿದ್ದು ತಮ್ಮ ಕಾಲೋನಿಯ ಮಕ್ಕಳಿಗೆ ಕುರನ್ ಹೇಳಿಕೊಡುತ್ತಿದ್ದಾಳೆ. ಇನ್ನು ಪೂಜಾಳ ತಂಗಿ ನಂದಿನಿ ಕಾಲೋನಿಯ ಮಕ್ಕಳಿಗೆ ಹಿಂದಿ ಹಾಗೂ ಭಗದ್ಗೀತೆ ಹೇಳಿಕೊಡುತ್ತಿದ್ದಾಳೆ. ಜಾತಿ ಧರ್ಮ ಎಂದು ಬಡಿದಾಡಿಕೊಳ್ಳುವ ಇಂದಿನ ಕಾಲಘಟ್ಟದಲ್ಲಿ ಪೂಜಾಳ ಕಾರ್ಯ ಇಡೀ ದೇಶಕ್ಕೆ ಮಾದರಿ ಅಂದ್ರೂ ತಪ್ಪಾಗೊಲ್ಲ.
POPULAR STORIES :
ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!