ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ & ವಾಹನದ ನೊಂದಣಿ ಪ್ರಮಾಣಪತ್ರದ (ಆರ್.ಸಿ) ಪ್ರತಿಯನ್ನು (ಹಾರ್ಡ್ ಕಾಪಿ) ಇಟ್ಟುಕೊಳ್ಳದೇ ಡ್ರೈವ್ ಮಾಡಬಹುದು.
ಡ್ರೈವಿಂಗ್ ಲೈಸೆನ್ಸ್ & ವಾಹನದ ನೊಂದಣಿ ಪ್ರಮಾಣಪತ್ರ ಡಿಜಿಲಾಕರ್ ನಲ್ಲಿ ಇದ್ದರೆ ಸಾಕು. ಅಗಕ್ಯ ಬಿದ್ದಾಗ ಪೊಲೀಸರು, ಸಾರಿಗೆ ಅಧಿಕಾರಿಗಳು ರಾಷ್ಟ್ರೀಯ ಡಿಜಿಟಲ್ ಲಾಕರ್ ವ್ಯವಸ್ಥೆಯಡಿ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ.
ಸಾರಿಗೆ ಹಾಗೂ ಆದಾಯ ತೆರಿಗೆ ಸಚಿವಾಲಯ ಬುಧವಾರ ಈ ವ್ಯವಸ್ಥೆಗೆ ಚಾಲನೆ ನೀಡಲಿದೆ. ಈ ಡಿಜಿಲಾಕರ್ ವ್ಯವಸ್ಥೆಯಿಂದ ಎಲ್ಲ ಪ್ರಮುಖ ದಾಖಲೆಗಳು ಒಂದೆಡೆ ಲಭ್ಯವಾಗಲಿದೆ.
ಆಧಾರ್ ಕಾರ್ಡ್ ಜತೆಗೆ ಮೊಬೈಲ್ ಫೋನ್ ನಂಬರ್ ಜೋಡಣೆ ಆಗಿದ್ದರೆ ಡಿಜಿಲಾಕರ್ ಸೇವೆ ಪಡೆಯಲು ಖಾತೆ ತೆರೆಯಬಹುದು (ಡಿಜಿಲಾಕರ್ ಖಾತೆ ತೆರೆಯಲು ಈ https://digilocker.gov.in/ ವೆಬ್ ಸೈಟ್ ಗೆ ಭೇಟಿ ನೀಡಿ.) ಈ ಸೇವೆ ಆರಂಭಗೊಂಡರೆ ಬಳಕೆದಾರರ ಮೊಬೈಲ್ ಫೋನ್ ನಲ್ಲೇ ಅಧಿಕಾರಿಗಳು, ವಾಹನ ಹಾಗೂ ಸವಾರರ ಡಿಎಲ್, ಆರ್ ಸಿ ಪರಿಶೀಲಿಸಬಹುದು.
POPULAR STORIES :
ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ
ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!
ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?