ಥೈರಾಯ್ಡ್ ಎಂಬುದು ನಮ್ಮ ದೇಹದಲ್ಲಿರೋ ಎಂಡೋಕ್ರಾಯಿನ್ ಗ್ರಂಥಿಗಳಲ್ಲೊಂದು.ಎಂಡೋಕ್ರಾಯಿನ್ ಗ್ರಂಥಿಗಳೆಂದರೆ ಹಾರ್ಮೋನು ಸ್ರವಿಸುವ ಗ್ರಂಥಿಗಳು ಎಂದರ್ಥ, ಹಾಗೂ ಇವುಗಳಿಂದ ಸ್ರವಿಸಲ್ಪಟ್ಟ ಹಾರ್ಮೋನುಗಳು ನಾಳಗಳ ಮೂಲಕ ಸಂಚರಿಸುವ ಬದಲಾಗಿ ನೇರವಾಗಿ ರಕ್ತದೊಂದಿಗೆ ಬೆರೆಯಲ್ಪಡುತ್ತದೆ. ನಮ್ಮ ಗಂಟಲಲ್ಲಿರೋ ಚಿಟ್ಟೆಯಾಕಾರದ ಈ ಗ್ರಂಥಿಯು ಥೈರೋಕ್ಸಿನ್ ಹಾರ್ಮೋನನ್ನು ಉತ್ಪಾದಿಸುತ್ತದೆ.ಈ ಹಾರ್ಮೋನುಗಳಿಂದ ನಮ್ಮ ದೇಹದಲ್ಲಿರೋ ಎನರ್ಜಿ ಲೆವೆಲ್,ಹೃದಯ ಬಡಿತದ ವೇಗ ,ರಕ್ತದೊತ್ತಡ,ನಮ್ಮ ಜೀರ್ಣ ಕ್ರಿಯೆಯನ್ನು ನಿರ್ವಹಿಸುವತ್ತ ಉತ್ತಮ ಪಾತ್ರ ವಹಿಸುತ್ತದೆ.ಶರೀರದಲ್ಲಿ ಈ ಹಾರ್ಮೋನು ಗಳ ಉತ್ಪಾದನೆ ಕಡಿಮೆಯಾದಾಗ,ಅನೇಕ ತರಹದ ಅನಾರೋಗ್ಯ ನಮ್ಮನ್ನು ಕಾಡುತ್ತದೆ.ಅದರೆ ಇವೆಲ್ಲವುಗಳಿಗಿಂತ ಮುಖ್ಯವಾಗಿ ಗೋಚರಿಸುವಂತಹದ್ದು ನಮ್ಮ ಶರೀರದ ತೂಕದಲ್ಲಿ ಏರಿಳಿತ…
ದೇಹದ ತೂಕದ ಹೆಚ್ಚಳಕ್ಕೆ ಹೈಪೋ ಥೈರಾಯಿಡಿಸಂ ಎಂದೂ ತೂಕ ಕಡಿಮೆಯಾಗುವಿಕೆಗೆ ಹೈಪರ್ ಥೈರೋಯಿಡಿಸಂ ಅಂತಲೂ ಕರೆಯಲಾಗುತ್ತದೆ.
ಇಲ್ಲಿ ಈ ಎರಡೂ ವಿಧದ ಥೈರಾಯ್ಡ್ ನಿಯಂತ್ರಣಕ್ಕೆ ಸಹಾಯಕವಾದ ಕೆಲವೊಂದು ಆಹಾರ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ…ನಿಮಗಾಗಿ…
ಹೈಪೋ ಥೈರಾಯ್ಡ್ (weight gain)ನಿಯಂತ್ರಣಕ್ಕಾಗಿ
1.ಡ್ರೈ ಫ್ರುಟ್ಸ್ ಸೇವನೆ
ಪಿಸ್ತಾ,ಕಾಜೂ,ನೆಲಗಡಲೆ,ಅಪ್ರಿಕೋಟ್,ಆಕ್ರೋಟ್,ಕಾರಕ ಮೊದಲಾದ ಡ್ರೈ ಫ್ರೂಟ್‍ನಲ್ಲಿರೋ ಸೆಲೆನಿಯಂ ಎಂಬ ಅಂಶವು ಥೈರೋಯಿಡ್ ನಿಂದ ಬರೋ ಹೃದಯ ಸಂಬಂಧಿ ಸಮಸ್ಯೆಗೆ ಪರಿಹಾರ ನೀಡುತ್ತದೆ.
2.ಮೀನು
ಇವುಗಳಲ್ಲಿರೋ ಒಮೇಗಾ-3 ಫ್ಯಾಟಿ ಅಸಿಡ್ ಗಳು ಥೈರಾಯ್ಡ್ ಗ್ರಂಥಿಗಳನ್ನು ನಾರ್ಮಲ್ ಆಗಿರುಸುತ್ತದೆ.
3.ಹೋಲ್ ಗ್ರೈನ್ ಸೇವಿಸಿ
ಇಡೀ ಗೋಧಿ-ಹಿಟ್ಟು,ಇಡೀ ಜೋಳದ ಹಿಟ್ಟು,ಓಟ್ಸ್ ಮೀಲ್ ಹಾಗೂ ಬ್ರೌನ್ ರೈಸ್ ಮೊದಲಾದವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಇರುತ್ತದೆ,ಇದೊಂದು ಉತ್ತಮ ಪರಿಣಾಮ ನೀಡಬಲ್ಲುದು.
4.ಚೆರ್ರಿ
ಕಡಿಮೆ ಕ್ಯಾಲರಿಯನ್ನು ಒಳಗೊಂಡಿರೋ ಈ ಹಣ್ಣು ಥೈರಾಯ್ಡ್ ಗೆ ಪರಿಣಾಮಕಾರಿ.
5.ದೊಡ್ಡ ಮೆಣಸಿನ ಕಾಯಿ(Capsicum)
ಇದು ಥೈರಾಯ್ಡ್ ನಿಂದ ಬರಬಹುದಾದ ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ.
6.ಹಾಲು
ಥೈರಾಯ್ಡ್ ಗೆ ಕ್ಯಾಲ್ಷಿಯಂ ಅಗತ್ಯವಾಗಿರುತ್ತದೆ,ಹಾಲಿನಲ್ಲಿ ಕ್ಯಾಲ್ಷಿಯಂ ಇರುವುದರಿಂದ ಇದೊಂದು ಉತ್ತಮ ಔಷಧಿ.ಆದರೆ ಅಧಿಕ ಹಾಲಿನ ಸೇವನೆ ಒಳ್ಳೆಯದಲ್ಲ.
7.ಧಾನ್ಯಗಳು
ಅಲಸಂದೆ ಬೀಜ,ತೊಗರಿಕಾಳು,ಹೆಸರುಕಾಳು,ಸೋಯಾ ಬೀನ್ಸ್ ಮೊದಲಾದವುಗಳಲ್ಲಿ ಪ್ರೋಟೀನ್ ಹಾಗೂ ಮಿನರಲ್ಸ್ ಇರುವುದರಿಂದ ಇದನ್ನು ಸೇವಿಸುವುದು ಒಳಿತು.
ಹೈಪರ್ ಥೈರೋಯ್ಡಿಸಂ(Weight loss) ಗಾಗಿ
8.ಕ್ಯಾಬೇಜ್ – ಕಾಲಿಫ್ಲವರ್
ಹೈಪರ್ ಥೈರಾಯ್ಡಿಸಂ ನಂತಹ ಪರಿಸ್ಥಿತಿಯಲ್ಲಿ ನಮ್ಮ ಜೀರ್ಣ ವ್ಯವಸ್ಥೆಗೆ ಹಾನಿಯುಂಟಾಗುವುದರಿಂದ ಕ್ಯಾಬೇಜ್ ನಲ್ಲಿರೋ ಅಮೀನೋ ಆಸಿಡ್ಸ್ ನಮ್ಮ ಜೀರ್ಣ ವ್ಯವಸ್ಥೆ ಸರಿಯಾಗಿರುವಂತೆ ಕಾಪಾಡುತ್ತದೆ.
9 ಮೊಸರು-ಚೀಸ್
ಇವುಗಳಲ್ಲಿ ಕ್ಯಾಲ್ಷಿಯಂ ಹೇರಳವಾಗಿರುವುದರಿಂದ ಮೊಸರು ಹಾಗೂ ಚೀಸ್ ಸೇವನೆಯು ನಮ್ಮ ದೇಹಕ್ಕೆ ಅಗತ್ಯವಿರೋ ಕ್ಯಾಲ್ಷಿಯಂ ನೀಡುತ್ತದೆ.
10.ಅಗಸೆ ಬೀಜ
ಥೈರಾಯ್ಡ್ ಸಂದರ್ಭದಲ್ಲಿ ದೇಹಕ್ಕೆ ಝಿಂಕ್ ಅಂಶವು ತೀರಾ ಅಗತ್ಯವಿರುವುದರಿಂದ ಇವುಗಳಿಂದ ಅದು ಸಾಧ್ಯ.
11.ಮೊಟ್ಟೆ ಹಾಗೂ ಮಶ್ರೂಮ್
ಇವುಗಳಲ್ಲಿ ವಿಟಾಮಿನ್ ಆ ಹೇರಳವಾಗಿರೋದ್ರಿಂದ ಇದು ಥೈರಾಯ್ಡ್ ನ ನಾರ್ಮಲ್ ಆಗಿರುವಂತೆ ನೋಡಿಕೊಳ್ಳುತ್ತದೆ.
12.ಬ್ರೊಕೋಲಿ
ಇದು ಥೈರಾಯ್ಡ್ ಗ್ರಂಥಿಗಳಿಂದ ಅಯೋಡಿನ್ ಹೀರಿಕೊಳ್ಳುವುದನ್ನು ತಡೆಹಿಡಿಯುತ್ತದೆ.ಅಯೋಡಿನ್ ಥೈರಾಯ್ಡ್ ನ ಸಮದೂಗಿಸಲು ತೀರಾ ಅಗತ್ಯ.
13.ಹಸಿರು ತರಕಾರಿಗಳು
ಕ್ಯಾರೆಟ್,ಟೊಮ್ಯಾಟೋ ಹಾಗೂ ಹಲವು ವಿಧದ ಸೊಪ್ಪುಗಳು ಥೈರಾಯ್ಡ್ ನಿಯಂತ್ರಿಸುವಲ್ಲಿ ಸಹಕಾರಿ.
- ಸ್ವರ್ಣಲತ ಭಟ್
POPULAR STORIES :
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!
ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ
ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!
ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?