ವಿವಿಧ ಕನ್ನಡ ಪರ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ರಾಜ್ಯದ ಹಲವು ಭಾಗಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಳೆ ಬಂದ್‍ಗೆ ಬೆಂಬಲ ಸೂಚಿಸದೇ ಯಥಾಸ್ಥತಿ ಕಾಯ್ದುಕೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಭರಾಟೆ ಶುರುವಾಗಿದೆ.
ಕಳೆದ ಬಾರಿ ನಾವು ಎತ್ತಿನ ಹೊಳೆ ಯೋಜನೆ ವಿರುದ್ದ ಬಂದ್ ಘೋಷಿಸಿಕೊಂಡಾಗ ರಾಜ್ಯದಿಂದ ನಮಗೆ ಸೂಕ್ತವಾದ ಪ್ರತಿಕ್ರಿಯೆ ದೊರೆಯಲಿಲ್ಲ. ಹೀಗಿರುವಾಗ ಕಾವೇರಿ ಹೋರಾಟದಿಂದ ನಮ್ಮ ಸುತ್ತಲಿನ ಜಿಲ್ಲೆಗಳು ದೂರವಿರಲು ನಿರ್ಧರಿಸಿದ್ದೇವೆ. ಕರ್ನಾಟಕ ಸರ್ಕಾರ ಎತ್ತಿನ ಹೊಳೆ ಯೋಜನೆಯಲ್ಲಿ ತೋರಿಸಿರುವ ಅಸಡ್ಡೆ ನೀತಿಯನ್ನು ಖಂಡಿಸಿರುವ ಜಿಲ್ಲೆಯ ಸಂಘಟನೆಗಳು ಹಾಗೂ ಎತ್ತಿನ ಹೊಳೆ ವಿರೋಧಿ ಹೋರಾಟಗಾರರು ನಾಳೆ ನಡೆಯುವ ಕಾವೇರಿ ನದಿ ಹೋರಾಟದ ವಿಚಾರದಲ್ಲಿ ಮೂಗು ತೂರಿಸದಿರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ಬಾರಿಯೂ ಮಹದಾಯಿ ಯೋಜನೆ ಕುರಿತಾಗಿ ಬಂದ್ ಘೋಷಿಸಿದ್ದಾಗ ದಕ್ಷಿಣ ಕನ್ನಡ ಇದಕ್ಕೆ ಬೆಂಬಲ ಸೂಚಿಸಿರಲಿಲ್ಲ. ಇದೀಗ ಕಾವೇರಿ ನದಿ ನೀರಿನ ಹೋರಾಟಕ್ಕಾಗಿ ನಾಳೆ ನಡಿಯುವ ಬಂದ್‍ನಲ್ಲೂ ದ. ಕನ್ನಡ ಭಾಗಿಯಾಗೋದಿಲ್ಲ ಎಂದು ತಿಳಿದು ಬಂದಿದೆ. ದ.ಕನ್ನಡ ಜಿಲ್ಲೆಯ ಜನರ ಈ ನೀತಿಯನ್ನು ಕನ್ನಡ ಚಳುವಳಿ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು
POPULAR STORIES :
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!