ತಮಿಳು ಡಿಗೆ ನೀರು ಹರಿಸಿರುವುದನ್ನು ಖಂಡಸಿ ಇಂದು ರಾಜ್ಯ ವ್ಯಾಪ್ತಿ ಬಂದ್‍ಗೆ ಕರೆ ನೀರಿರುವ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರು ಸಂಪೂರ್ಣ ಸ್ಥಬ್ಧವಾಗಿದೆ. ನಗರದ ಬೀದಿ ಬದಿ ವ್ಯಾಪಾರಿಗಗಳಿಂದ ಹಿಡಿದು ಕಾರ್ಪೋರೇಟ್ ವಲಯಗಳವರೆಗೆ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. ಎಲ್ಲರೂ ಜೀವ ಜಲ ಕಾವೇರಿಗಾಗಿ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದ್ದಾರೆ. ನೂರಕ್ಕೂ ಅಧಿಕ ಕನ್ನಡ ಪರ ಸಂಘಟನೆಗಳು ಇಂದು ಬೀದಿಗಿಳಿದಿದ್ದು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರದ ವಿರುದ್ದ ಘೋಷಣೆ ಕೂಗಿದರು. ಇಂದು ಬಂದ್ ಬಿಸಿಯಿಂದಾಗಿ ಮಾಲ್‍ಗಳು, ಚಿತ್ರ ಮಂದಿರಗಳು ತೆರೆದಿರಲಿಲ್ಲ. ಸಾರಿಗೆ ಸಂಚಾರ, ಆಟೋ ರಿಕ್ಷಾ, ಕ್ಯಾಬ್, ಓಲಾ ಸೇರಿದಂತೆ ಯಾವುದೇ ಖಾಸಗೀ ವಾಹನಗಳು ಬೀದಿಗಿಳಿಯಲಿಲ್ಲ. ಇದರಂದಾಗಿ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳ ಜನರು ತೊಂದರೆಗೆ ಸಿಲುಕಿದ್ದಾರೆ. ಇನ್ನು ಅನೇಕ ಅಂಗಡಿ ಮಾಲಿಕರು ಸ್ವಯಂ ಪ್ರೇರಿತವಾಗಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದು, ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ನೂರಾರು ಕನ್ನಡ ಪರ ಸಂಘಟನೆಗಳು ಇಂದು ಮುಂಜಾನೆಯಿಂದಲೇ ಬಂದ್‍ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ನಗರದ ಅತ್ತಿಬೆಲೆ ಗ್ರಾಮದಿಂದ ಫ್ರೀಡಂ ಪಾರ್ಕ್ ಮಾರ್ಗವಾಗಿ ಟೌನ್‍ಹಾಲ್‍ವರೆಗೆ ಬೈಕ್ ರ್ಯಾಲಿ ನಡೆಸಿದರು.
POPULAR STORIES :
ಬಹು ನಿರೀಕ್ಷಿತ ಬಿಗ್ ಬಾಸ್-4 ಕಮಿಂಗ್ ಸೂನ್…!
ತಮಿಳುನಾಡಿಗೆ 61 ಟಿಎಂಸಿ ನೀರು ಬೇಕು, ಮೇಲುಸ್ತುವಾರಿ ಸಮಿತಿಗೆ ಜಯಾ ಪತ್ರ..!
ತಾಜಾ ತರಕಾರಿಗಳಿಗೆ ಮಾರು ಹೋಗುವ ಮುನ್ನ ಈ ವಿಡಿಯೋ ನೋಡಿ…!
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!