ಬೆಂಗಳೂರು;- ಮುನಿಸು ಬದಿಗಿಟ್ಟು ಸುಭದ್ರ ಸರಕಾರ ನೀಡೋಣ ಎಂದು ಸಚಿವರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಸದ್ಯವೇ ಲೋಕಸಭಾ ಚುನಾವಣೆ ಇರುವ ಕಾರಣ ನಾವು ಭಿನ್ನಮತ ಪ್ರದರ್ಶಿಸುವುದು ಸರಿಯಲ್ಲ. ಹೀಗಾಗಿ ಎಲ್ಲ ಮುನಿಸುಗಳನ್ನು ಬದಿಗಿಟ್ಟು, ಸುಭದ್ರ ಸರಕಾರ ನೀಡೋಣ ಹಾಗೂ ಲೋಕಸಭಾ ಚುನಾವಣೆಯತ್ತ ದೃಷ್ಟಿ ಹರಿಸೋಣ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದ ಸಚಿವರಿಗೆ ಮನವಿ ಮಾಡಿದ್ದಾರೆ.
ಅನಗತ್ಯ ಹೇಳಿಕೆ ನೀಡಿ ವಿವಾದ ಸೃಷ್ಟಿಸದಂತೆ ಎಲ್ಲರನ್ನೂ ಕೋರಿಕೊಂಡಿದ್ದಾರೆ. ಉಪಾಹಾರ ಕೂಟದಲ್ಲಿ ಡಿಸಿಎಂ ಶಿವಕುಮಾರ್, ಡಾ| ಜಿ. ಪರಮೇಶ್ವರ, ಎಂ.ಬಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಕೆ.ಎನ್. ರಾಜಣ್ಣ ಸೇರಿ 15 ಸಚಿವರು ಭಾಗವಹಿಸಿದ್ದರು. ಉಳಿದ ಸಚಿವರಿಗೆ ಮುಂದಿನ ದಿನಗಳಲ್ಲಿ ಉಪಾಹಾರ ಕೂಟ ಏರ್ಪಡಿಸಲು ಸಿಎಂ ನಿರ್ಧರಿಸಿದ್ದಾರೆ.
ಮುನಿಸು ಬದಿಗಿಟ್ಟು ಸುಭದ್ರ ಸರಕಾರ ನೀಡೋಣ: ಸಚಿವರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ
Date: