ಡಿಕೆ ಶಿವಕುಮಾರ್ʼಗೆ ನಾಳೆಯೇ ಸಿಎಂ ಆಗಬೇಕೆಂಬ ತವಕವಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

Date:

ಚಿತ್ರದುರ್ಗ: ಡಿಸಿಎಂ ಡಿಕೆ ಶಿವಕುಮಾರ್ʼಗೆ ನಾಳೆಯೇ ಸಿಎಂ ಆಗಬೇಕೆಂಬ ತವಕವಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಚಿತ್ರದುರ್ಗದ ಕೊಳಾಳ್ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಅಧಿಕಾರದಲ್ಲಿ 2 ದಿನ ಇರ್ತೀನೋ ಬಿಡ್ತೀನೋ ಎಂಬ ಭಾವವಿದೆ. ಅಲ್ಲದೇ ಕಾಂಗ್ರೆಸ್ನಲ್ಲಿ ಸಿಎಂ, ಡಿಸಿಎಂ ಯಾರಾಗಬೇಕೆಂಬ ಸ್ಪರ್ಧೆ ನಡೆಯುತ್ತಿದ್ದು, ಅಧಿಕಾರದ ದಾಹ ಹೆಚ್ಚಾಗಿದೆ.
ಅಧಿಕಾರ ಹಂಚಿಕೆ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು, ಈ ಸರ್ಕಾರಕ್ಕೆ ಜನರ ಹಿತ ಕಾಪಾಡುವಲ್ಲಿ ಕಾಳಜಿಯೇ ಕಾಣುತ್ತಿಲ್ಲ ಎಂದು ಆರೋಪಿಸಿದರು. ಕಾವೇರಿ ನೀರು ಈಗಲೂ ತಮಿಳುನಾಡಿಗೆ ಹರಿಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಶಿವಮೊಗ್ಗ, ಕೋಲಾರದಲ್ಲಿ ಖಡ್ಗ ಹಿಡಿದು ಟಿಪ್ಪು ಮೆರವಣಿಗೆ ನಡೆದಿದ್ದು, ಕೋಮು ಭಾವನೆ ಕೆರಳಿಸುವ ಮತ್ತು ದ್ವೇಷ ಭಾವನೆ ಹಬ್ಬಿಸುವ ಕೆಲಸಕ್ಕೆ ಸರ್ಕಾರದ ರಕ್ಷಣೆ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

Share post:

Subscribe

spot_imgspot_img

Popular

More like this
Related

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿಲ್ಲ: ಡಿ.ಕೆ. ಶಿವಕುಮಾರ್ ನವದೆಹಲಿ: ನವೆಂಬರ್...

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...