ನಮ್ ಭಾರತೀಯ ಸಂಸ್ಕೃತಿಯನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ..! ಆದ್ರೆ ನಾವೇ ನಮ್ ಸಂಸ್ಕೃತಿ ಸಂಪ್ರದಾಯವನ್ನು ಬಿಟ್ಟಾಕಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಫಾಲೋ ಮಾಡ್ತಾ ಇದ್ದೀವಿ..! ಆದ್ರೆ ವಿದೇಶಿಯರಿಗೆ ನಮ್ ಇಂಡಿಯಾ, ಇಂಡಿಯಾ ಕಲ್ಚರ್, ಟ್ರೆಡಿಶನ್ಸ್ ತುಂಬಾ ಅಚ್ಚು ಮೆಚ್ಚು..! ಭಾರತದ ಸಂಸ್ಕೃತಿ ಪರಂಪರೆಯಲ್ಲಿ ದೇವಾನು ದೇವತೆಗಳು, ಸನ್ಯಾಸಿಗಳು, ಗುರು ಹಿರಿಯರು ವಿಶೇಷವಾದ ಸ್ಥಾನವನ್ನು ಪಡೆದಿದ್ದಾರೆ..! ಈಗ ನಾವು ಗುರು-ಹಿರಿಯರಿಗೆ ಗೌರವ ಕೊಡ್ತಾ ಇದ್ದೀವಾ..? ನಮ್ಮಲ್ಲಿ ನಮ್ಮ ಜನಗಳಿಗೇ ನಮ್ಮ ದೇವಾನು ದೇವತೆಗಳು, ದೇವಾಲಯಗಳು ಮೌಡ್ಯದ ಪ್ರತಿಬಿಂಬವಗಳಾಗಿವೆ..! ನಮ್ಮ ಸಂಸ್ಕೃತಿ ಪರಂಪರೆ ನಂಬಿಕೆಗಳನ್ನು ನಮ್ಮವರೇ ಮೌಡ್ಯ ಎಂಬ ಹೆಸರಿನಿಂದ ಹೀಯಾಳಿಸುತ್ತಿದ್ದಾರೆ..! ಅವರ ಉದ್ದೇಶ ಪ್ರವಾಹದ ವಿರುದ್ಧ ಈಜಿದಂತೆ, ಸಮಾಜ ನಡೆಯುತ್ತಿರುವ ಹಾದಿಗೆ ವಿರುದ್ಧವಾಗಿ ತಾನು ಏನಾದರೊಂದು ಹೇಳಿಕೆಯನ್ನು ನೀಡುವುದರ ಮೂಲಕ ಮಾಧ್ಯಮಗಳ ಮುಂದೆ, ದೇಶದ ಜನತೆಯ ಮುಂದೆ ತನ್ನನ್ನು ತಾನು ಗುರುತಿಸಿಕೊಳ್ಳುವುದು..! ಆ ಮೂಲಕ ಸಮಾಜದ ಆರೋಗ್ಯವನ್ನು ಹಾಳು ಮಾಡಿ, ಚಿಂತಕನೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ಪ್ರಶಸ್ತಿಯನ್ನು ಬೇಡಿ ಪಡೆಯುವುದು..! ಹೀಗೆ ನಮ್ಮ ದೇಶದಲ್ಲಿ ದೇವಾನು ದೇವತೆ, ಪರಂಪರೆಯನ್ನು ಹೀಗಳೆದರೆ ರಾತ್ರೋ ಬೆಳಗಾಗಬೇಕಾದ್ರೆ ಸುದ್ದಿಯಾಗಿ ಹೆಸರುವಾಸಿ ಆಗ್ತಾರೆ..! ಆದ್ರೆ ಇಂತವರಿಗೆ ನಮ್ಮ ಇಂಡಿಯಾದ ದೇವಾನು ದೇವತೆಗಳ ಶಕ್ತಿ, ನಮ್ಮ ಪುರಾಣ ಪರಂಪರೆಯ ಶ್ರೇಷ್ಠತೆ ಕಿಂಚಿತ್ತೂ ಗೊತ್ತಿಲ್ಲ..! ಆದ್ರೆ ವಿದೇಶಿಯೆರಿಗೆ ನಮ್ ದೇಶದ ಸಂಸ್ಕೃತಿ ಬಗ್ಗೆ ಅಪಾರ ಗೌರವವಿದೆ..! ದೇವಾನು ದೇವಾತೆಗಳ ಬಗ್ಗೆ ನಂಬಿಕೆಯಿದೆ..! ನಮ್ಮ ದೇವಾಲಯಗಳು ಅವರ ಪಾಲಿಗೆ ಸ್ವರ್ಗ…! ಯಶಸ್ಸಿನ ಮೆಟ್ಟಿಲುಗಳಾಗಿವೆ..! ವಿಶ್ವದ ಶ್ರೇಷ್ಠ ವ್ಯಕ್ತಿಗಳು, ಸಾಧಕರ ಸಾಧನೆಗೆ ನಮ್ಮ ದೇವರುಗಳ ಅನುಗ್ರಹವಿದೆ..! ಇದನ್ನು ಸ್ವತಃ ಅಂತಹ ಮೇರು ವ್ಯಕ್ತಿಗಳೇ ಸಾಧಕರೇ ಹೇಳ್ತಾರೆ..!
ಹ್ಞಾಂ, ಎಲ್ಲರಿಗೂ ಫೇಸ್ ಬುಕ್ ಗೊತ್ತೇ ಇದೆ..! ಈ ಜನಪ್ರೀಯ ಸಾಮಾಜಿಕ ಜಾಲತಾಣದ ಜನಕ “ಜುಕರ್ ಬರ್ಗ್” ಭಾರತದ ಸಂಸ್ಕೃತಿ, ಪರಂಪರೆ, ದೇವಾನು ದೇವತೆಗಳಲ್ಲಿ ನಂಬಿಕೆಯನ್ನು ಹೊಂದಿದ್ದಾರೆ..! ಈ ಬಗ್ಗೆ ಅವರೇ ನಮ್ಮ ಪ್ರಧಾನಿಯೊಡನೆ ಸಂವಾದಿಸುವಾಗ ಹೇಳಿದ್ದಾರೆ..!
ಯಸ್, ಇಂದು ಸಾಮಾಜಿಕ ಜಾಲತಾಣಗಳ ದಿಗ್ಗಜನಾಗಿ ಮೆರೆಯುತ್ತಿರುವ ಫೇಸ್ ಬುಕ್ ಆರಂಭದ ದಿನಗಳಲ್ಲಿ ಸಂಕಷ್ಟದಲ್ಲಿತ್ತು..! ಜುಕರ್ ಬರ್ಗ್ ಅಂದು ಕೊಂಡಂತೆ ವ್ಯವಹಾರ ನಡೆಯುತ್ತಿರಲ್ಲ..! ಆಗ ಜುಕರ್ ಬರ್ಗ್ ಗೆ ಚಿಂತೆ ಶುರುವಾಗುತ್ತೇ..! ಅಯ್ಯೋ, ಹಾಕಿದ ಬಂಡವಾಳವನ್ನು ಹೆಂಗಪ್ಪಾ ಹೊರ ತೆಗೆಯಿಲಿ..! ಲಾಭಗಳಿಸೋದು ಹೇಗಪ್ಪಾ..! ಅಂತ ತಲೆಬಿಸಿ ಶುರುವಾಗುತ್ತೆ..! ಆಗ ಅವರ ನೆನಪಗೆ ಬಂದಿದ್ದೇ ಭಾರತದ ನೈನಿತಾಲ್ ನ ಕೈಂಚಿಯಲ್ಲಿರುವ “ನೀಮ್ ಕರೋರಿ” ಬಾಬಾ ಆಶ್ರಮದಲ್ಲಿನ “ಆಂಜನೇಯ ಸ್ವಾಮಿ” ದೇವಾಲಯ…! ಈ ದೇವಾಲಯಕ್ಕೆ ಹೋದ್ರೆ ಖಂಡಿತಾ ನನ್ನ ಸಂಕಷ್ಟಗಳು ಪರಿಹಾರವಾಗುತ್ತೆ..! ನನ್ನ ಉದ್ಯಮ ಬೆಳೆದೇ ಬೆಳಯುತ್ತೆ, ನಾನು ಉದ್ಯಮ ಜಗತ್ತಿನಲ್ಲಿ ಗೆದ್ದೇ ಗೆಲ್ತೇನೆಂಬ ನಂಬಿಕೆ “ಜುಕರ್ ಬರ್ಗ್” ರಲ್ಲಿ ಗಟ್ಟಿಯಾಗಿ ಬೇರೂರುತ್ತೆ..! ಹೀಗೆ ಕೈಂಚಿಕರೋರಿ ಬಾಬರ ಆಶ್ರಮದ ಆಂಜನೇಯ ಸ್ವಾಮಿಯ ನಂಬಿ ಭಾರತಕ್ಕೇ ಬಂದೇ ಬಿಟ್ರು..! ಭಾರತಕ್ಕೆ ಬಂದವರೇ ಕೈಂಚಿಯತ್ತ ಹೆಜ್ಜೆ ಹಾಕ್ತಾರೆ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅಂದು ಅವರು ಕೈಂಚಿ ದೇವಾಲಕ್ಕೆ ಭೇಟಿ ನೀಡಿದ್ದ ಟೈಮ್ನಲ್ಲಿ ಫೇಸ್ ಬುಕ್ ಯಾರ ಮನಸ್ಸಲ್ಲೂ ಬುಕ್ ಆಗಿರ್ಲಿಲ್ಲ..! ಅಂದ್ರೆ, ಅದು ಜನಪ್ರೀಯತೆ ಪಡೆದಿರಲಿಲ್ಲ..! ಜುಕರ್ ಬರ್ಗ್ ಈ ದೇವಸ್ಥಾನಕ್ಕೆ ಬರ್ತಾರೆ ಅಂತ ಫೋನ್ ಕಾಲ್ ಬಂದಿದ್ದರೂ ಅದರ ಬಗ್ಗೆ ಯಾರೂ ಅಷ್ಟೊಂದು ಗಮನ ಕೊಟ್ಟಿರಲ್ಲ..! ಯಾಕಂದ್ರೆ ಅವತ್ತು ಫೇಸ್ ಬುಕ್ಕೇ ಗೊತ್ತಿರ್ಲಿಲ್ಲ, ಇನ್ನು ಅದರ ಮಾಲಿಕ ಗೊತ್ತಾಗ್ತಾನೆಯೇ..?! ಯಾರೂ ಅವರ ಬರುವಿಕೆಯನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದು ಕೊಂಡಿರ್ಲಿಲ್ಲ..! ಭಾರತಕ್ಕೆ ಬೇರೆ ವಿದೇಶಿಯರು ಬಂದು ಹೋಗ್ತಾರಲ್ಲಾ ಅದೇ ರೀತಿ ಜುಕರ್ ಬರ್ಗ್ ಕೂಡ ಸಾಮಾನ್ಯ ವ್ಯಕ್ತಿಯಾಗಿ ಬರ್ತಾರೆ..!
ಮಂಡಿ ಹರಿದಿದ್ದ ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದ ಜುಕರ್ ಬರ್ಗ್ ಕೇವಲ ಒಂದೇ ಒಂದು ಜೊತೆ ಬಟ್ಟೆಯಲ್ಲಿ ಬಂದಿದ್ದರಂತೆ..! ಮಳೆ ಕೂಡ ಬರ್ತಾ ಇತ್ತು..! ಆದ್ರಿಂದ ಎಲ್ಲೂ ಹೊರಗಡೆ ಹೋಗಲಾಗದೆ ಎರಡು ದಿನಗಳ ಕಾಲ ಅವರು ಅಲ್ಲೇ ಬಾಬಾರ ಆಶ್ರಮದಲ್ಲಿ ಉಳಿದು ಕೊಳ್ತಾರೆ..! ಆ ಎರಡು ದಿನಗಳಲ್ಲಿ ಇವರಲ್ಲಿ ಅಪಾರ ಬದಲಾವಣೆ ಆಗುತ್ತೆ..! ಮಾನಸಿಕ ಒತ್ತಡದಿಂದ ತಾನಾಗಿಯೇ ಹೊರ ಬರ್ತಾರೆ..! ಮನಸ್ಸು ಹಗುರವಾಗುತ್ತೆ..! ಆ ದೇವಸ್ಥಾನದಲ್ಲಿ ಅರವತ್ತರ ದಶಕದಲ್ಲಿ ಕರೋರಿ ಬಾಬಾ ತಪಸ್ಸು ಮಾಡಿದ್ದರು, ಈಗ ಅವರು ನಿಧನರಾಗಿದ್ದರೂ ಅವರ ಆತ್ಮ ಅಲ್ಲೇ ಇದೆ..! ಅವರು ಭಕ್ತರಲ್ಲಿ ಶಾಂತಿ ನೆಮ್ಮದಿಯನ್ನು ನೆಲೆಸುವಂತೆ ಮಾಡ್ತಾರೆಂಬ ನಂಬಿಕೆ ಎಲ್ಲಾ ಭಕ್ತರಂತೆ ಜುಕರ್ ಬರ್ಗ್ ರಲ್ಲೂ ಬಲವಾಗುತ್ತೆ..! ಆ ಆಶ್ರಮ ಮತ್ತು ಅಲ್ಲಿನ ಆಂಜನೇಯ ಸ್ವಾಮಿಯ ಬಗ್ಗೆ ಅಪಾರವಾದ ಭಕ್ತಿ ಮತ್ತಷ್ಟು ಹೆಚ್ಚಾಗುತ್ತೆ..! ಭಾರತ ಅವರಿಗೆ ತುಂಬಾನೇ ಇಷ್ಟವಾಗಿ ಬಿಡುತ್ತೆ,…! ಭಾರತದ ಸಂಸ್ಕೃತಿ ಇಷ್ಟವಾಗುತ್ತೆ..! ಆ ಭಕ್ತಿ-ನಂಬಿಕೆಯೇ ಅವರನ್ನು ಮುಂದಿನ ಒಂದು ತಿಂಗಳುಗಳ ಕಾಲ ಭಾರತದಲ್ಲಿ ಕಳೆಯುವಂತೆ ಮಾಡುತ್ತೆ..! ಈ ದೇವಾಲಕ್ಕೆ ಭೇಟಿ ನೀಡಿದ ಬಳಿಕ ಮತ್ತೆಂದೂ ಜುಕರ್ ಬರ್ಗ್ ಎದೆಗುಂದಲಿಲ್ಲ..! ವ್ಯವಹಾರ ಅವರು ಅಂದುಕೊಂಡಿದ್ದಕ್ಕಿಂತ ಮೇಲ್ಮಟ್ಟದಲ್ಲಿಯೇ ಬೆಳೆಯಿತು..! ಫೇಸ್ ಬುಕ್ ಈಗ ಎಷ್ಟೊಂದು ಫೇಮಸ್ ಆಗಿದೆ ಅನ್ನೋದನ್ನು ಯಾರೂ ಹೇಳಬೇಕಿಲ್ಲ..! ಈಗ ಇದೇ ಜುಕರ್ ಬರ್ಗ್ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ ವಿಶ್ವದ ಶ್ರೀಮಂತರಲ್ಲಿ 31ನೇ ಸ್ಥಾನದಲ್ಲಿದ್ದಾರೆ..! ಇವರಿಗೆ ಈಗ ಕೇವಲ 31 ವರ್ಷ..! ಆದರೆ ಆಸ್ತಿ 33.4 ಬಿಲಿಯಲ್ ಡಾಲರ್ ಅಂದ್ರೆ 2269619460000.00 ರೂಪಾಯಿಗಳು..!
ಅಷ್ಟಕ್ಕೂ, “ಭಾರತದಲ್ಲಿನ ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಒಳ್ಳೆಯದಾಗುತ್ತೆ, ಅಲ್ಲಿಗೊಮ್ಮೆ ಹೋಗಿ ಬಾ ಎಂದು ಜುಕರ್ ಬರ್ಗ್ ಗೆ ಹೇಳಿದವರು ಆತನ ಗುರು ಮತ್ತು ಸ್ನೇಹಿತನೂ ಆದ “ಸ್ಟೀವ್ ಜಾಬ್ಸ್..”!
ಆ್ಯಪಲ್ ಕಂಪನಿಯ ಜನಕ ಹಾಗೂ ಮುಖ್ಯಸ್ಥ “ಸ್ಟೀವ್ ಜಾಬ್ಸ್” ಓದುವುದನ್ನು ಅರ್ಧಕ್ಕೆ ಬಿಟ್ಟು, ಸ್ನೇಹಿತರೊಡನೆ ಆ್ಯಪಲ್ ಕಂಪನಿಯನ್ನು ಹುಟ್ಟು ಹಾಕಿದ್ದ ಆರಂಭದ ದಿನಗಳಲ್ಲಿ ಈ ದೇವಾಲಯಕ್ಕೆ ಬಂದಿದ್ದರು..! ಈಗ ಸ್ಟೀವ್ ಜಾಬ್ಸ್ ಇಲ್ಲ, ಆದ್ರೂ ಇಡೀ ಜಗತ್ತೇ…ಜಗತ್ತಿನ ಉದ್ಯಮ ಲೋಕವೇ ಅವರನ್ನು ನೆನಪಿಸಿಕೊಳ್ಳುತ್ತೆ..! ಅವರು ಹುಟ್ಟು ಹಾಕಿದ ಆ್ಯಪಲ್ ಕಂಪನಿ ಇವತ್ತು ಎಷ್ಟೊಂದು ಜನಪ್ರೀಯವಾಗಿದೆ ಅಲ್ವಾ..?!
ಕೈಂಚಿಯ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದ್ದೇ ನಮ್ಮ ಯಶಸ್ಸಿಗೆ ಕಾರಣವೆಂದು ಸ್ಟೀವ್ ಜಾಬ್ಸ್” ನಂಬಿದ್ದರು..! ಜುಕರ್ ಬರ್ಗ್ ಕೂಡ ಅದನ್ನೇ ನಂಬಿ ವಿಶ್ವದ ಹಿರಿಯಣ್ಣ ಅಮೇರಿಕಾದಲ್ಲಿ ಕೂತು ನಮ್ಮ ಭಾರತದ ಪ್ರಧಾನಿ ಬಳಿ ನಮ್ಮ ಸಂಸ್ಕೃತಿಯನ್ನು ಅಟ್ಟಕ್ಕೇರಿಸಿದ್ದಾರೆಂದರೆ.., ನಮ್ಮ ಪರಂಪರೆ, ದೇವಾನು ದೇವತೆಗಳು ಎಷ್ಟು ಪವರ್ ಫುಲ್ ಅಲ್ವಾ..? ಇದೇ ರೀತಿ ವಿಶ್ವದ ಅನೇಕ ಗಣ್ಯ ವ್ಯಕ್ತಿಗಳು ಭಾರತದ ವಿವಿಧ ದೇವಾಲಯಗಳ ಭಕ್ತರಾಗಿದ್ದರು..! ಇಂದಿಗೂ ಅನೇಕ ವಿದೇಶಿಯರು ಭಾರತದ ದೇವಾಲಯಗಳಿಗೆ ಬರ್ತಾನೇ ಇದ್ದಾರೆ..!
ದೇವರು ಇದ್ದಾನೋ ಇಲ್ಲವೋ ಚರ್ಚೆಗಿಂತ ನಂಬಿಕೆ ಮುಖ್ಯ ಕಣ್ರೀ..! ನಮ್ ಸಂಸ್ಕೃತಿ, ಪರಂಪರೆಯ ಬಗ್ಗೆ ನಮಗೆ ನಂಬಿಕೆ ಬೇಕು..! ಜುಕರ್ ಬರ್ಗ್, ಸ್ಟೀವ್ ಜಾಬ್ಸ್ ಅಂತ ಶ್ರೇಷ್ಠ ವಿದೇಶಿ ಉದ್ಯಮಿಗಳೇ ಭಾರತದ ಸಂಸ್ಕೃತಿ ಪರಂಪರೆಯಲ್ಲಿ ನಂಬಿಕೆ ಹೊಂದಿರುವಾಗ ನಮ್ ಸಂಪ್ರದಾಯ, ಸಂಸ್ಕೃತಿಯನ್ನು ನಮ್ಮಲ್ಲೇ ಕೆಲವರು ವಿರೋಧಿಸ್ತಾ ಇರೋದು ಸರಿಯೇ..?! ಮೌಡ್ಯವೇ ಬೇರೆ, ಭಕ್ತಿ ನಂಬಿಕೆ, ಪರಂಪರೆಯೇ ಬೇರೆ ಎಂಬುದನ್ನು ನಮ್ಮ ಜನ ಅರ್ಥ ಮಾಡಿಕೊಳ್ಬೇಕು..! ಜುಕರ್ ಬರ್ಗ್ ರ ಫೇಸ್ ಬುಕ್ ಅನ್ನು ನೆಚ್ಚಿಕೊಂಡಂತೆ, ಜುಕರ್ ಬರ್ಗ್ ಹೆಮ್ಮೆ ಪಡುವ ನಮ್ಮ ಸಂಸ್ಕೃತಿಯನ್ನು ನಮ್ಮವರೂ ಗೌರವಿಸಲಿ… ಎಂಬ ಆಶಯ ನಮ್ಮದು..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com