ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್‍ನಲ್ಲಿ ಭಾರತದ ಪದಕ ಭೇಟೆ ಮುಂದುವರೆದಿದೆ. ಭಾರತದ ಭರವಸೆಯ ಆಟಗಾರರಾದ ಮರಿಯಪ್ಪನ್ ತಂಗವೇಲ್ ಮತ್ತು ವರುಣ್ ಭಾಟಿ ಅವರು ಪುರುಷರ ಹೈಜಂಪ್‍ನಲ್ಲಿ ಈ ಬಾರಿಯ ರಿಯೋ ಪ್ಯಾರಾಲಿಂಪಿಕ್‍ನಲ್ಲಿ ಪದಕದ ಖಾತೆ ತೆರೆದಿದ್ದೇ ತಡ ಭಾರತಕ್ಕೆ ಪದಕಗಳ ಭರ್ಜರಿ ಭೇಟೆ ಆರಂಭವಾಗಿದೆ. ಮಹಿಳೆಯರ ಶಾಟ್‍ಪುಟ್ ಎಸೆತದಲ್ಲಿ ದೀಪಾ ಮಲ್ಲಿಕ್ ಬೆಳ್ಳಿ ಪದಕ ಗೆದ್ದು ಸಂತಸ ನೀಡಿದ ಬೆನ್ನಲ್ಲೇ ಕೋಟ್ಯಾನು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಬಂದಿದೆ. ಜಾವ್ಲಿನ್ ಥ್ರೋ ಎಸೆತದಲ್ಲಿ ಭಾರತದ ಅಥ್ಲೀಟ್ ದೇವೇಂದ್ರ ಜಝಾರಿಯಾ ವಿಶ್ವ ದಾಖಲೆಯ ಎಸೆತದ ಮೂಲಕ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಪುರುಷರ ಎಫ್ 46 ವಿಭಾಗದಲ್ಲಿ 63.97 ಮೀಟರ್ ದಾಖಲೆಯ ಎಸೆತದ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಜಝಾರಿಯಾ ಚಿನ್ನದ ಪದಕ ಗಳಿಸಿದ್ದಾರೆ. ಈ ಹಿಂದೆ ಜಝಾರಿಯಾ ಅಥೇನ್ಸ್ ಒಲಂಪಿಕ್‍ನಲ್ಲಿ 62.15 ಮೀ. ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದೀಗ ರಿಯೋದಲ್ಲಿ ತಮ್ಮ ಹೊಸ ದಾಖಲೆಯ ಖಾತೆಯನ್ನು ತೆರೆದಿದ್ದಾರೆ. ಈ ಮೂಲಕ ಭಾರದ ಪದಕ ಪಟ್ಟಿಯಲ್ಲಿ 2 ಚಿನ್ನ 1 ಬೆಳ್ಳಿ, ಹಾಗೂ 1 ಕಂಚಿಗೆ ಮಾರ್ಪಟ್ಟಿದೆ.
POPULAR STORIES :
ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!
ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!
ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…