ಹೊಸ ವರ್ಷ ಹತ್ರ ಬರ್ತಿದ್ದಂತೆಯೇ ನಗರದಲ್ಲಿ ಆರ್ಗನೈಸ್ ಆಗೋ ಪಾರ್ಟಿಗಳಿಗೇನು ಕಮ್ಮಿ ಇಲ್ಲ. ಅದ್ರಲ್ಲೂ ನ್ಯೂ ಇಯರ್ ಅಂದ್ರೆ ಕೆಲ ಹೈಫೈ ಯುವಕ-ಯುವತಿಯರಿಗೆ ಮಾದಕ ಜಗತ್ತು ಇಲ್ದೆ ಆಗೋದಿಲ್ಲ ಎಂಬಂತೆ.. ಅದಕ್ಕೆ ಅಂತ್ಲೇ ವಿದೇಶದಿಂದ ಬಂದಿರೋ ನೈಜೀರಿಯನ್ಸ್ ಡ್ರಗ್ ಪೆಡ್ಲಿಂಗ್ ನಲ್ಲಿ ಆ್ಯಕ್ಟೀವ್ ಇರ್ತಾರೆ. ಅಂತೋರ ಮೇಲೆ ಸಿಸಿಬಿ ಹದ್ದಿನ ಕಣ್ಣಿಟ್ಟಿದ್ದು, ಇತ್ತೀಚೆಗೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನೈಜೀರಿಯಾ ಮೂಲದ ರೊನಾಲ್ಡೊ ಎಂಬಾತನನ್ನ ಬಂಧಿಸಿದ್ರು.. ಆತನ ಬಳಿ ಬರೋಬ್ಬರಿ 21ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ರು.
ಈ ನಡುವೆ ನ್ಯೂ ಇಯರ್ ಗೆ ಡ್ರಗ್ ಮಾಫಿಯಾ ಸಖತ್ ಆ್ಯಕ್ಟೀವ್ ಆಗಿರೋದು ಗೊತ್ತಾಗಿದ್ದು, ಹಳೆ ತಲೆಗಳು ಹೈಪರ್ ಆ್ಯಕ್ಟೀವ್ ಆಗಿವೆ ಅನ್ನೋ ವಿಚಾರ ಗೊತ್ತಾಗಿದೆ.. ಇತ್ತೀಚೆಗೆ 180ಜನ ಫಾರಿನ್ ಮೂಲದ ಡ್ರಗ್ ಪೆಡ್ಲರ್ಸ್ ಜೈಲಿಂದ ರಿಲೀಸ್ ಆಗಿದ್ದು, ಅವ್ರೆಲ್ಲರೂ ಮತ್ತೆ ಪೆಡ್ಲಿಂಗ್ ನಲ್ಲಿ ಆ್ಯಕ್ಟೀವ್ ಆಗಿದ್ದಾರಂತೆ.. ನಗರದ ಬಹುತೇಕ ಠಾಣಾ ವ್ಯಾಪ್ತಿಯಲ್ಲಿ ಪೆಡ್ಲರ್ಸ್ ಇದ್ದು, ಒಬ್ಬಬ್ಬರ ಮೇಲೆ ಮೂರ್ನಾಲ್ಕು ಕೇಸ್ ಗಳಿವೆ.. ಇವ್ರ ನೆಟವರ್ಕ್ ಕೂಡ ಮುಂಬೈಯಿಂದ ಹಿಡಿದು ಹೊರ ದೇಶದವರೆಗೂ ಇದೆ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ.. ಜೈಲಿಂದ ಬಂದ್ಮೇಲೂ ಪೆಡ್ಲರ್ಸ್ ಮತ್ತೆ ಹಳೇ ಚಾಳಿ ಮುಂದುವರೆಸಿದ್ದು ಅವರ ಮೇಲೆ ಸಿಸಿಬಿ ಕಣ್ಣಿಟ್ಟಿದೆ.
ಈಗಾಗಲೇ ಬಿಡುಗಡೆಯಾಗಿರೋ 180ಜನರ ಲಿಸ್ಟ್ ಪಡೆದಿರೋ ಸಿಸಿಬಿ ಟೀಂ ಅವ್ರ ನೆಟವರ್ಕ್ ಮೇಲೆ ಕಣ್ಣಿಟ್ಟಿದೆ.. ಜೊತೆಗೆ ನಗರದಲ್ಲಿ ನ್ಯೂ ಇಯರ್ ಸಂಬಂಧ ಎಲ್ಲೆಲ್ಲಿ ರೇವ್ ಪಾರ್ಟಿಗಳು ಆರ್ಗನೈಸ್ ಆಗ್ತಿತ್ತು. ವಿಶೇಷವಾಗಿ ವಿದೇಶಿಯರ ನೇತೃತ್ವದಲ್ಲಿ ಎಲ್ಲೆಲ್ಲಿ ಪಾರ್ಟಿಗಳು ಆರ್ಗನೈಸ್ಡ್ ಆಗಿವೆ ಅನ್ನೋದ್ರ ಬಗ್ಗೆ ತೀವ್ರ ನಿಗಾವಹಿಸಲಾಗಿದೆ.