ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದ ಸರ್ಕಾರದ ಪರ ವಾದ ಮಂಡಿಸಲು ವಕೀಲ ಸುಧನ್ವರವರನ್ನ ಗೃಹ ಇಲಾಖೆ ನೇಮಕ ಮಾಡಿದೆ. ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಏಕಸದಸ್ಯ ಆಯೋಗದ ಎದುರು ಸಿಐಡಿ ಪರ ಸುಧನ್ವ ಡಿ.ಎಸ್ ಅವರ ವಾದ ಮಂಡಿಸಲಿದ್ದಾರೆ.
ಏಕ ಸದಸ್ಯ ಆಯೋಗ ರಚನೆಯಾಗುತ್ತಿದ್ದಂತೆ,
ಅದರ ಎದುರು ಸಿಐಡಿ ಪರ ವಾದ ಮಂಡಿಸಲು ವಕೀಲ ಅಶೋಕ ನಾಯ್ಕ್ ಅವರನ್ನು ಈ ಹಿಂದೆ ನೇಮಿಸಲಾಗಿತ್ತು. ಆದ್ರೆ ಒಬ್ಬರಿಂದ ಪರಿಣಾಮಕಾರಿ ವಾದ ಮಂಡಿಸಲು ಕಷ್ಟವೆಂದು ಸಿಐಡಿ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟು ಗೃಹ ಇಲಾಖೆಗೆ ಮನವಿ ಮಾಡಿ ಮತ್ತೊಬ್ಬ ವಕೀಲರನ್ನು ನೇಮಿಸುವಂತೆ ಕೋರಿದ್ದರು.. ಇದರ ಬೆನ್ನಲ್ಲೇ ವಕೀಲ ಸುಧನ್ವ ಅವರನ್ನು ನೇಮಕ ಮಾಡಿ ಗೃಹ ಇಲಾಖೆ ಅದೇಶ ಹೊರಡಿಸಿದೆ..