No menu items!
10.3 C
Munich
Saturday, September 12, 2026

ರಾಜ್ಯದಲ್ಲಿ ಮತ್ತೆ ಕರೋನಾ ಆತಂಕ: ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲ ಕರೋನಾ ಕೇಸ್ ಪತ್ತೆ

Must read

ದೇವನಹಳ್ಳಿ: ರಾಜ್ಯದಲ್ಲಿ ಕರೋನಾ ಜೆ.ಎನ್.1 ಆತಂಕ ಹೆಚ್ಚಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.
ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಕರೋನಾ ಕೇಸ್ ಪತ್ತೆ ಆಗಿದ್ದು, ಸ್ಪರ್ಶ ಮಕ್ಕಳಧಾಮದಲ್ಲಿದ್ದ ಓರ್ವ ಮಗುವಿಗೆ ಕರೋನಾ ಪಾಸಿಟಿವ್ ಬಂದಿದೆ. ಜ್ವರ ಕೆಮ್ಮು ಎಂದು ಟೆಸ್ಟ್ ಮಾಡಿಸಿದ್ದ ಮಗುವಿಗೆ ಕರೋನಾ ದೃಢವಾಗಿದೆ.
ಮೊದಲ ಕೇಸ್ ಹಿನ್ನಲೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಹೈಸೊಲೇಷನ್ ಮಾಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಕರೋನಾ ಕೇಸ್ಗಳು ಜೀರೋ ಇದ್ದವು. ಇದೀಗ ಟೆಸ್ಟಿಂಗ್ ಮಾಡುತ್ತಿರುವ ಹಿನ್ನಲೆ ಒಂದೊಂದೆ ಕೇಸ್ಗಳ ಹೆಚ್ಚಳವಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾ.ಜಿಲ್ಲಾ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಶಿವಶಂಕರ್ ಹೇಳಿಕೆ ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article