ಕಾಫಿ ಯಂತ್ರದ ಅವಾಂತರದಿಂದ ಅಂತರಾಷ್ಟ್ರೀಯ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಸುಮಾರು 223 ಪ್ರಯಾಣಿಕರನ್ನು ಹೊತ್ತೊಯ್ತಾ ಇದ್ದ ಲುಫ್ತಾನಾ ಏರ್ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ವರ್ಜೀನಿಯಾದ ವಾಷಿಂಗ್ಟನ್ ಡಲ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮ್ಯೂನಿಚ್‍ಗೆ ಹೊರಟಿದ್ದ ಎ333-300 ವಿಮಾನದಲ್ಲಿದ್ದ ಕಾಫಿ ಯಂತ್ರದಲ್ಲಿ ದಿಢೀರನೆ ಹೊಗೆ ಕಾಣಲು ಆರಂಭಿಸಿದೆ. ಅದನ್ನು ಸ್ವಿಚ್ ಆಫ್ ಮಾಡಿದ್ರೂ ಸಹ ಅದರಲ್ಲಿ ಬರ್ತಾ ಇದ್ದ ಹೊಗೆ ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ಈ ಕಾರಣದಿಂದಾ ಪ್ರಯಾಣಿಕರಿಗೆ ತುರ್ತು ಸಂದೇಶವನ್ನು ನೀಡಿ, ಪಕ್ಕದ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇನ್ನು ವಿಮಾನ ಸಿಡ್ನಿಯಿಂದ ನೈರುತ್ಯಕ್ಕೆ ಹಾದು ಹೋಗುವ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರಿಗೆ ವಿಮಾನದಲ್ಲಿ ಸುಟ್ಟ ವಾಸನೆ ಬರುವುತ್ತಿದ್ದನ್ನು ಗಮನಕ್ಕೆ ಬಂದಿದ್ದು, ಕೂಡಲೇ ದೂರು ನೀಡಿದ್ದಾರೆ. ತಕ್ಷಣ ಗ್ರೌಂಡ್ ಕಂಟ್ರೋಲ್‍ಗೆ ಮಾಹಿತಿ ನೀಡಿದಾಗ ಕಾಫಿ ಯಂತ್ರದಲ್ಲಿ ಹೊಗೆ ಕಾಣಿಸಿರುವುದು ಗಮನಕ್ಕೆ ಬಂದಿದೆ ಎಂದು ವೈಮಾನಿಕ ಮಾಹಿತಿ ವೆಬ್‍ಸೈಟ್ ಏರೋ ಇನ್ಸೈಡ್ ವರದಿ ಮಾಡಿದೆ. ತಕ್ಷಣವೇ ಪೈಲಟ್‍ಗಳು ವಿಮಾನವನ್ನು ಬೋಸ್ಟನ್ ಕಡೆ ತಿರುಗಿಸಿ, 70 ನಿಮಿಷಗಳ ಬಳಿಕ ಲ್ಯಾಂಡ್ ಆಗಿದೆ. ಘಟನೆ ಸಂಭವಿಸಿ 10 ದಿನಗಳಾದರೂ ಬೆಳಕಿಗೆ ಬಂದದ್ದು ಮಾತ್ರ ಈಗ..!
POPULAR STORIES :
ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!
ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!
ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!
ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?
ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.






