ಬೆಂಗಳೂರು:- ನಗರದ ಹೊರವಲಯ ನೆಲಮಂಗಲ ತಾಲ್ಲೂಕಿಗೆ 8ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದ ತಹಸೀಲ್ದಾರ್ ಅರುಂಧತಿಯವರು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ತಾಲ್ಲೂಕು ಆಡಳಿತ ಜನರಿಂದ ರೈತರಿಂದ ದೂರ ಉಳಿದಿರುವ ಬಗ್ಗೆ ಜನರಿಗೆ ಕೆಲಸ ಮಾಡದಿರುವುದು , ಲಂಚದ ಆರೋಪ, ಅರ್ಜಿಗಳಿಗೆ ಸ್ಪಂದನೆ ನೀಡದಿರುವುದು, ಮಾಹಿತಿ ನೀಡದೇ ನಿರ್ಲಕ್ಷ್ಯ ಸೇರಿದಂತೆ ಅನೇಕ ಆರೋಪಗಳು ಕೇಳಿ ಬಂದು ಹಲವು ರೈತಪರ ಸಂಘಟನೆಗಳ ಆಕ್ರೋಶಕ್ಕೆ ತಹಸೀಲ್ದಾರ್ ಅರುಂಧತಿ ಗುರಿಯಾಗಿದ್ರು ಇನ್ನೂ ತಹಸೀಲ್ದಾರ್ ಅರುಂಧತಿ ವಿರುದ್ಧ ರೈತ ಸಂಘಟನೆಗಳು ಪ್ರತಿಭಟನೆ ಕೂಡ ಮಾಡಿದ್ರು ಈ ಬಗ್ಗೆ ನೆಲಮಂಗಲ ಶಾಸಕ ಎನ್ ಶ್ರೀನಿವಾಸ್ ರವರು ರಾಜ್ಯ ಸರ್ಕಾರದ ಗಮನಸೆಳೆದಿದ್ದು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಕಂದಾಯ ಇಲಾಖೆ ನೆಲಮಂಗಲ ತಹಸೀಲ್ದಾರ್ ಅರುಂಧತಿಯವರನ್ನು ಅಮಾನತ್ತು ಗೊಳಿಸಿ BMRDA ಗ್ರೇಡ್ 2 ತಹಸೀಲ್ದಾರ್ ಅಮೃತ್ ಆತ್ರೆಶ್ ರವರನ್ನು ನೆಲಮಂಗಲ ತಹಸೀಲ್ದಾರ್ ಆಗಿ ನೇಮಕಗೊಳಿಸಿ ಆದೇಶ ಮಾಡಿದೆ.ಇನ್ನೂ ನೆಲಮಂಗಲ ತಹಸೀಲ್ದಾರ್ ಅರುಂಧತಿ ಅಮಾನತ್ತು ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ರೈತಪರ ಕಾಳಜಿ ಇಲ್ಲದೆ ಕೆಲಸ ಮಾಡಿದ ತಹಸೀಲ್ದಾರ್ ಅರುಂಧತಿಯವರ ಅಮಾನತ್ತು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು ನೆಲಮಂಗಲ ಶಾಸಕ ಎನ್ ಶ್ರೀನಿವಾಸ್ ರವರಿಗೆ ಧನ್ಯವಾದ ತಿಳಿಸಿದ್ದಾರೆ.
ರೈತರ ಆಕ್ರೋಶಕ್ಕೆ ಗುರಿಯಾಗಿದ್ದ ನೆಲಮಂಗಲ ತಹಸೀಲ್ದಾರ್ ಅರುಂಧತಿ ಅಮಾನತ್ತು
Date: