ಮಂಗಳೂರು: ಮಾಜಿ ಸಚಿವ ಆಂಜನೇಯ ಅವರು ಸಿದ್ದರಾಮಯ್ಯನೇ ರಾಮ ಎಂಬ ಹೇಳಿಕೆ ವಿಚಾರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೇ ನೀಡಿದ್ದಾರೆ. ರಾಮ ಎಂಬುದು ಭಾವನಾತ್ಮಕ ನಂಬಿಕೆಗಳ ಸಂಕೇತ. ಮರ್ಯಾದಪುರುಷ ರಾಮನನ್ನು ಆದರ್ಶಪುರುಷನಾಗಿ ಸ್ವೀಕರಿಸಲಾಗಿದೆ. ರಾಮನಿಗೆ ಇನ್ನೊಂದು ಹೋಲಿಕೆಯಿಲ್ಲ. ರಾಮನಿಗೆ ರಾಮನೇ ಹೋಲಿಕೆ. ಹೆಸರಿಟ್ಟ ತಕ್ಷಣ ಎಲ್ಲರೂ ರಾಮನಾಗಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ಗೋದ್ರಾ ಮಾದರಿಯ ಹತ್ಯಾಕಾಂಡಕ್ಕೆ ಸಂಚು, ಅಯೋಧ್ಯೆಗೆ ಹೋಗುವವರಿಗೆ ಭದ್ರತೆ ಕೊಡಬೇಕೆಂದು ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್ ಅವರ ಮೇಲೆ ಕಿಡಿ ಕಾರಿದ ಸಂಸದ ನಳಿನ್ ಕುಮಾರ್ ಕಟೀಲು ಅವರು, ತಕ್ಷಣ ಹರಿಪ್ರಸಾದ್ ಬಂಧನವಾಗಲಿ ಎಂದು ಸರಕಾರವನ್ನು ಆಗ್ರಹಿಸಿದರು. ಈ ಬಗ್ಗೆ ಸಿಎಂ, ಗೃಹಸಚಿವರು, ಉಪ ಮುಖ್ಯಮಂತ್ರಿಗಳು ತಮಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಿ.ಕೆ.ಹರಿಪ್ರಸಾದ್ ತಮ್ಮಲ್ಲಿರುವ ಮಾಹಿತಿಯನ್ನು ಗೃಹ ಇಲಾಖೆಗೆ ನೀಡಲಿ. ಇಲ್ಲದಿದ್ದಲ್ಲಿ ತಕ್ಷಣ ಅವರ ಬಂಧನವಾಗಲಿ ಎಂದು ಆಗ್ರಹಿಸಿದರು.
ತಕ್ಷಣ ಹರಿಪ್ರಸಾದ್ ಬಂಧನವಾಗಲಿ: ನಳಿನ್ ಕುಮಾರ್ ಕಟೀಲ್ ಆಗ್ರಹ
Date: