ಸೊಮಾಲಿಯಾದ ಕರಾವಳಿ ಬಳಿ 15 ಮಂದಿ ಭಾರತೀಯರಿದ್ದ ಹಡಗು ಅಪಹರಣ

Date:

ನವದೆಹಲಿ: ಸೊಮಾಲಿಯಾ ಬಳಿ 15 ಮಂದಿ ಭಾರತೀಯರಿದ್ದ ಸರಕು ಹಡಗನ್ನು ಅಪಹರಣ ಮಾಡಲಾಗಿದೆ. ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿದ್ದು, ಭಾರತೀಯ ನೌಕಾಪಡೆಯು ಅದರತ್ತ ಯುದ್ಧನೌಕೆಯನ್ನು ಕಳುಹಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಅಪಹರಿಸಿದ ಹಡಗಿನಲ್ಲಿ 15 ಭಾರತೀಯರಿದ್ದಾರೆ. ಸಿಬ್ಬಂದಿಯೊಂದಿಗೆ ಸಂವಹನವನ್ನು ಸ್ಥಾಪಿಸಲಾಗಿದೆ.
ಸೇನಾ ಅಧಿಕಾರಿಗಳ ಪ್ರಕಾರ, ಸೊಮಾಲಿಯಾ ಕರಾವಳಿಯಲ್ಲಿ ಹಡಗನ್ನು ಅಪಹರಿಸಿರುವ ಬಗ್ಗೆ ಗುರುವಾರ ಸಂಜೆ ಮಾಹಿತಿ ಲಭಿಸಿದೆ. ಅಲ್ಲದೇ ಭಾರತೀಯ ನೌಕಾಪಡೆಯ ವಿಮಾನವು ಹಡಗಿನ ಮೇಲೆ ನಿಗಾ ಇರಿಸಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ INS ಚೆನ್ನೈ ಪರಿಸ್ಥಿತಿಯನ್ನು ನಿಭಾಯಿಸಲು ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...