ಬೆಂಗಳೂರು: ಕಾಂಗ್ರೆಸ್ ಅವರು ವಿರೋಧಿಗಳ ಧ್ವನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಸಹೋದರನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ. ಕಾಂಗ್ರೆಸ್ ಅವರು ವಿರೋಧಿಗಳ ಧ್ವನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಕರಸೇವಕರ ಮೇಲೆ ದೌರ್ಜನ್ಯ. ಇದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಇವತ್ತು ಅಯೋಧ್ಯೆ ಉದ್ಘಾಟನೆ ಬಗ್ಗೆ ದೇಶದಲ್ಲಿ ಚರ್ಚೆ ಆಗ್ತಿದೆ. ನಮ್ಮ ರಾಜ್ಯದಲ್ಲಿ ಹಲವು ಸಮಸ್ಯೆ ಎದುರಿಸುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಸರ್ಕಾರಕ್ಕೆ ಇದ್ಯಾವುದರ ಕಾಳಜಿ ಇಲ್ಲ. ಇಂತಹ ವಿಷಯ ಮುನ್ನಲೆಗೆ ತಂದು ವಿಷಯ ಡೈವರ್ಟ್ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀಕಾಂತ್ ಪೂಜಾರಿ ಪ್ರಕರಣ ದೊಡ್ಡದು ಮಾಡಿದ್ದಾರೆ. ಎಲ್ಲಾ ಕೇಸ್ ಖುಲಾಸೆ ಆಗಿದೆ. ಮಾಧ್ಯಮಗಳೇ ಇದನ್ನ ತೋರಿಸಿವೆ ಎಂದು ತಿಳಿಸಿದರು.
ಕಾಂಗ್ರೆಸ್ ವಿರೋಧಿಗಳ ಧ್ವನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದೆ !
Date: