ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕುಂದನ ಗ್ರಾಮ ಪಂಚಾಯತಿ ಪಿಡಿಓ ಪದ್ಮನಾಭ್ ಮನೆ, ಫಾರ್ಮ್ ಹೌಸ್ ಮೇಲೆ ದಾಳಿಯಾಗಿದೆ. ಮಲ್ಲೇಶ್ವರಂನಲ್ಲಿರುವ ಸಪ್ತಗಿರಿ ಲೇಔಟ್ 4 ಅಂತಸ್ತಿನ ಮನೆ ಮೇಲೆ ರೇಡ್ ಮಾಡಿದ್ದಾರೆ.
ಅನುಪನಹಳ್ಳಿಯಲ್ಲಿ ಐದು ಎಕರೆ ಸಾಗುವಳಿ ಭೂಮಿ ಮತ್ತು ಫರ್ಮ್ ಹೌಸ್ಗೆ ಎಂಟ್ರಿ ನೀಡಿ ಶೋಧಕಾರ್ಯ ನಡೆಸ್ತಿದ್ದಾರೆ. ಜೊತೆಗೆ ತುಮಕುರಿನಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ದಾಬಸ್ ಪೇಟೆಯ ಇಂಡಸ್ಟ್ರೀಲ್ ಏರಿಯಾದಲ್ಲಿ ಗೋಡಾನ್ ಇರೋದು ಪತ್ತೆಯಾಗಿದೆ.