ದೊಡ್ಡಬಳ್ಳಾಪುರ:- ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಗಾತ್ರದ ಲಾರಿ ಪಲ್ಟಿ ಹೊಡೆದ ವಿದ್ಯುತ್ ಕಂಬಗಳು ಹಾಗೂ ದೇವಾಲಯ ಹಾನಿಗೊಳಗಾದ ಘಟನೆ ಜರುಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ. ಎತ್ತಿನಹೊಳೆ ಕಾಮಗಾರಿಗೆ ಬೃಹತ್ ಗಾತ್ರದ ಪೈಪ್ ಗಳನ್ನು ಲಾರಿ ಸಾಗಿಸುತ್ತಿತ್ತು.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪೈಪ್ ಸಮೇತ ಲಾರಿ ಪಲ್ಟಿ ಹೊಡೆದಿದೆ. ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಕಾರಣಕ್ಕೆ ನಿಯಂತ್ರಣ ತಪ್ಪಿದ ಲಾರಿ ಪಲ್ಟಿ ಹೊಡೆದಿದೆ. ಹಣಬೆ ಗ್ರಾಮ ಪಂಚಾಯತಿ ಪಿಡಿಒ ರಂಗದಾಮಯ್ಯ ಗೆ ದೂರು ನೀಡಿದರು, ಬೇಜವಾಬ್ದಾರಿತನ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಇನ್ನೂ ಪರವಾನಿಗೆ ಪಡೆಯದೇ ಪೈಪ್ ಗಳ ದಾಸ್ತಾನು ಮತ್ತು ಸಾಗಾಣಿಕೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬೃಹತ್ ಗಾತ್ರದ ಲಾರಿ !
Date: