ಶಿವಮೊಗ್ಗ: ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕಸ ಹೊಡಿ ಎಂದರೆ ಕಸ ಹೊಡೆಯುತ್ತೇನೆ. ರಾಜೀನಾಮೆ ಕೊಡು ಎಂದರೂ ಕೊಡ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಲೋಕಸಭೆಗೆ ಸುಧಾಕರ್ ಅವರು ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ದೈವಬಲ ಹಾಗೂ ಜನಬಲ ನನ್ನ ಕಡೆ ಇದೆ.
ಲೋಕಸಭೆಯಲ್ಲಿ ನಾವು ಹೆಚ್ಚು ಸ್ಥಾನ ಪಡೆಯುತ್ತೇವೆ. ಮುಂದಿನ ಚುನಾವಣೆಯಲ್ಲಿ ಸೋಲು ಅಥವಾ ಗೆಲುವು ಎಂದು ನಾನು ಕೆಲಸ ಮಾಡ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕಸ ಹೊಡಿ ಎಂದರೆ ಕಸ ಹೊಡೆಯುತ್ತೇನೆ. ರಾಜೀನಾಮೆ ಕೊಡು ಎಂದರೂ ಕೊಡ್ತೇನೆ. ನಾನು ಯಾವುದೇ ನಿಗಮ ಮಂಡಳಿಯ ಆಕಾಂಕ್ಷಿಯಲ್ಲ. ಪಕ್ಷ ಲೋಕಸಭೆಗೆ ನಿಲ್ಲು ಎಂದರೆ ನಾಳೆಯೇ ನಿಲ್ಲುತ್ತೇನೆ ಎಂದಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ !
Date: