ಹಾಸನ: ಇನ್ನು ಕೆಲವೇ ದಿನದಲ್ಲಿ ಮತ್ತೆ ಕರೆಂಟ್ ಬಿಲ್ ಜಾಸ್ತಿ ಆಗುತ್ತದೆ ಎಂದು ಮಾಜಿ ಸಚಿವ ಹೆಚ್ʼಡಿ ರೇವಣ್ಣ ಹೇಳಿದ್ದಾರೆ. ಜಿಲ್ಲೆಯ ಆಲೂರು ಪಟ್ಟಣದಲ್ಲಿ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೆಇಬಿ ಸಾಲದಲ್ಲಿದೆ. ನಮ್ಮ ಕಾಲದಲ್ಲಿ ಎಂದೂ ಕರೆಂಟ್ ಬಿಲ್ ಹೆಚ್ಚಿಸಿರಲಿಲ್ಲ. ಈ ಸರ್ಕಾರ ಬಂದ ಮೇಲೆ ಬಿಲ್ ಹೆಚ್ಚಿಸಿದರು.
ಇನ್ನು ಕೆಲವೇ ದಿನದಲ್ಲಿ ಮತ್ತೆ ಕರೆಂಟ್ ಬಿಲ್ ಜಾಸ್ತಿ ಆಗುತ್ತದೆ. ಆ ಮೂಲಕ ಕೆಇಬಿ ಖಾಸಗಿ ಕರಣ ಆಗುತ್ತೆ. ಈ ಸರ್ಕಾರ ಚುನಾವಣೆ ಪೂರ್ವದಲ್ಲಿ ಆರನೇ ಗ್ಯಾರಂಟಿ ಹೇಳಿದ್ದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಕೊಬ್ಬರಿಗೆ ಬೆಂಬಲ ಬೆಲೆ ನೀಡಿಲ್ಲ. ಪ್ರಧಾನಿಯವರು ದೇವೇಗೌಡರನ್ನು ಯಾವ ರೀತಿ ಗೌರವಿಸುತ್ತಾರೆ. ಕಾಂಗ್ರೆಸ್ನವರು ಬೇಕಾದಾಗ ಉಪಯೋಗಿಸಿ ದೂರ ತಳ್ಳುತ್ತಾರೆ. ಕುಮಾರಸ್ವಾಮಿ ಅವರ ಸರ್ಕಾರ ತೆಗೆದಿದ್ದು ಯಾರು? ಯಾವ ಯಾವ ಲೋಕಸಭಾ ಸದಸ್ಯರು ಏನು ಮಾಡಿದಾರೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.