ಬೆಂಗಳೂರು: ವಸತಿ ಶಾಲೆಗಳಲ್ಲಿ ಸದ್ಯ ರಾಜ್ಯ ಪಠ್ಯಕ್ರಮ ಇದೆ. ಪ್ರತಿ ಜಿಲ್ಲೆಗೆ ಒಂದು ವಸತಿ ಶಾಲೆಯಲ್ಲಿ CBSE ಪಠ್ಯ ಅಳವಡಿಕೆಗೆ ಕ್ರಮವಹಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಅನಿಲ್ ಕುಮಾರ್ ಪ್ರಶ್ನೆ ಕೇಳಿದರು. ವಸತಿ ಶಾಲೆಗಳಲ್ಲಿ CBSE ಪಠ್ಯಕ್ರಮ ಅಳವಡಿಕೆ ಮಾಡಬೇಕು. ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿಗಳನ್ನ ಪ್ರಾರಂಭ ಮಾಡಬೇಕು. ವಸತಿ ಇಲಾಖೆಯಲ್ಲಿ ಖಾಲಿ ಇರೋ ಶಿಕ್ಷಕರ ಹುದ್ದೆ ನೇಮಕ ಮಾಡಬೇಕು.
ವಸತಿ ಶಾಲಾ ಶಿಕ್ಷಕರ ಸಂಬಳ ಪ್ರತಿ ತಿಂಗಳು ಬೇಗ ಬಿಡುಗಡೆ ಮಾಡಿ. ಶಿಕ್ಷಣ ಇಲಾಖೆ ಶಿಕ್ಷಕರ ವೇತನ ತಿಂಗಳ ಮೊದಲ ದಿನ ಬಿಡುಗಡೆ ಆಗುತ್ತದೆ. ಅದರಂತೆ ವಸತಿ ಶಾಲೆಗಳಲ್ಲಿ ಜಾರಿ ಮಾಡಿ. ವಸತಿ ಶಾಲೆ ಮಕ್ಕಳಿಗೆ ಬೆಡ್, ಶೂ, ಸೋಪ್ ಬಾಕ್ಸ್ ಕೊಟ್ಟಿಲ್ಲ ಎಂದು ಆರೋಪ ಮಾಡಿದರು.
ಇದಕ್ಕೆ ಸಚಿವ ಮಹದೇವಪ್ಪ ಉತ್ತರ ನೀಡಿ, ವಸತಿ ಶಾಲೆಗಳಲ್ಲಿ ಸದ್ಯ ರಾಜ್ಯ ಪಠ್ಯಕ್ರಮ ಇದೆ. ಪ್ರತಿ ಜಿಲ್ಲೆಗೆ ಒಂದು ವಸತಿ ಶಾಲೆಯಲ್ಲಿ CBSE ಪಠ್ಯ ಅಳವಡಿಕೆಗೆ ಕ್ರಮವಹಿಸಲಾಗುತ್ತಿದೆ. ಪ್ರಸ್ತುತ 84 ಶಾಲೆಗಳ ಪಿಯುಸಿ ತರಗತಿ ಇವೆ. ಉಳಿದ ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ ಪ್ರಾರಂಭಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆ ಇನ್ನು ಅನುಮತಿ ಕೊಟ್ಟಿಲ್ಲ. ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪ್ರತಿ ಜಿಲ್ಲೆಯ ವಸತಿ ಶಾಲೆಯಲ್ಲಿ CBSE ಪಠ್ಯ ಅಳವಡಿಕೆ !
Date: