ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೇ ನೀಡಿದ್ದಾರೆ. ‘ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬ್ಯುಸಿನೆಸ್ʼಗೂ ಆಗಿರಬಹುದು, ಬಿಜೆಪಿಯವರಿಗೆ ಕೇವಲ ಹಿಂದೂ, ಮುಸ್ಲಿಮರು ಮಾತ್ರ ಕಾಣುತ್ತಿದ್ದಾರೆ. ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ.
ಆದರೆ, ರಾಮೇಶ್ವರಂ ಕೆಫೆ ಸ್ಫೋಟ ಕೇಸ್ನಲ್ಲಿ ಬಿಜೆಪಿ ಕೈವಾಡ ಎಂದು ಹೇಳಲ್ಲ. ಈ ಹಿಂದೆ ಇಂತಹದ್ದೇ ಘಟನೆಗಳಾದಾಗ ಬಿಜೆಪಿಯ ಕೈವಾಡ ಇತ್ತು. ಇದು ತನಿಖೆಯಲ್ಲಿ ಸಾಬೀತು ಕೂಡ ಆಗಿದೆ ಎಂದು ಹೊಸ ಬಾಂಬ್ ಹಾಕಿದ್ದಾರೆ. ಇನ್ನು ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರುತ್ತದೆ ಎಂದಿದ್ದಾರೆ.
ಇನ್ನೂ ಜಾತಿ ಗಣತಿ ವಿಚಾರ, ‘ಈ ವರದಿಯನ್ನ ತೆಗದುಕೊಳ್ಳಬೇಡಿ ಎಂದು ನಾವು ಹೇಳಿಲ್ಲ, ಸಿಎಂ ಅವರಿಗೆ ಮನೆ ಮನೆಗೆ ಹೋಗಿ ವರದಿ ಮಾಡಿಲ್ಲ, ಈ ರೀತಿ ಆಗಿರುವಂತ ಲೋಪದೋಷಗಳನ್ನು ಸರಿ ಪಡಿಸುವಂತೆ ಸ್ವಾಮೀಜಿಗಳು ಹಾಗೂ ನಮ್ಮ ಸಮುದಾಯದ ಮುಖಂಡರು ಮನವಿ ಕೊಟ್ಟಿದ್ದರು. ಈ ಕುರಿತಾಗಿ ಮುಖ್ಯಮಂತ್ರಿಗಳು ‘ವರದಿ ಬರಲಿ, ವ್ಯತ್ಯಾಸಗಳು ಇದ್ದರೆ ಸರಿಪಡಿಸೋಣ ಎಂದು ಹೇಳಿದ್ದಾರೆ. ಅದಕ್ಕೆ ವರದಿಯಲ್ಲಿನ ಲೋಪದೋಷಗಳು ಇದ್ರೆ ಸರಿಪಡಿಸುತ್ತಾರೆ ಎಂಬ ವಿಶ್ವಾಸ ನಮಗೆಲ್ಲ ಇದೆ ಎಂದು ಹೇಳಿದರು.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬ್ಯುಸಿನೆಸ್ʼಗೂ ಆಗಿರಬಹುದು !
Date: