ಅದ್ಯಾವ ನೈತಿಕತೆಯಿಂದ ಅವರು ರಾಜೀನಾಮೆ ಕೇಳುತ್ತಾರೆ?

Date:

ಹುಬ್ಬಳ್ಳಿ: ವಿಧಾನ ಸೌಧದ ಒಳಗಡೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡಬೇಕು ಎನ್ನುತ್ತಿರುವ ಬಿಜೆಪಿ ನಾಯಕರ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದರು. ಅದ್ಯಾವ ನೈತಿಕತೆಯಿಂದ ಅವರು ರಾಜೀನಾಮೆ ಕೇಳುತ್ತಾರೆ? ದೇಶಭಕ್ತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರು ಮಂಡ್ಯದಲ್ಲಿ ತಮ್ಮ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಪ್ರಕರಣವನ್ನು ಯಾಕೆ ಮುಚ್ಚಿಹಾಕಿದರು? ನಾವಾದರೋ ವಿಧಾನ ಸೌಧದಲ್ಲಿ ಕೂಗಿದ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡಿಸುತ್ತಿದ್ದೇವೆ.
ದೇಶದ ಬಗ್ಗೆ ನಮಗಿರುವ ಬದ್ಧತೆ ಅವರಿಗಿದೆಯಾ? ನಮ್ಮಲ್ಲಿರುವ ರಾಷ್ಟ್ರಭಕ್ತಿ ಅವರಲ್ಲಿದೆಯಾ? ಎಂದು ಶಿವಕುಮಾರ್ ಪ್ರಶ್ನಿಸಿದರು. ಮಂಡ್ಯದ ಪ್ರಕರಣಕ್ಕೆ ಎಫ್ ಎಸ್ ಎಲ್ ವೆರಿಫಿಕೇಶನ್ ಬೇಕಿಲ್ಲ. ಯಾಕೆಂದರೆ, ಒಬ್ಬ ಕಾರ್ಯಕರ್ತ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ ಬಳಿಕ ಅವನ ಹಿಂದೆ ನಿಂತಿದ್ದ ಮತ್ತೊಬ್ಬ ಕಾರ್ಯಕರ್ತ ಅವನ ಬಾಯಿ ಮುಚ್ಚುತ್ತಾನೆ ಎಂದು ಹೇಳಿದ ಶಿವಕುಮಾರ್ ಆ ಪ್ರಕರಣವನ್ನು ಆಗಿನ ಬಿಜೆಪಿ ಸರ್ಕಾರ ರಾತ್ರೋರಾತ್ರಿ ಮುಚ್ಚಿಹಾಕಿದ್ಯಾಕೆ ಎಂದು ಕೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಏತ ನೀರಾವರಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಿವಕುಮಾರ್ ಇಂದು ನೆರವೇರಿಸಲಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...