ಬಾಯ್ ಫ್ರೆಂಡ್ ಜೊತೆ ಸೇರಿ ಮಕ್ಕಳಿಗೆ ನಿತ್ಯ ಕಿರುಕುಳ: ಪ್ರಕರಣ ದಾಖಲು

Date:

ಬೆಂಗಳೂರು:- ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ಸ್ವಂತ ಮಕ್ಕಳಿಗೆ ಚಿತ್ರ ಹಿಂಸೆ ನೀಡಿದ ಆರೋಪ ತಾಯಿ ಮೇಲೆ ಕೇಳಿ ಬಂದಿರುವ ಘಟನೆ ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಪಾಪಿ ತಾಯಿ, ತನ್ನ ಮಕ್ಕಳಿಗೆ ಕಚ್ಚಿ, ಫ್ರಿಡ್ಜ್ ನಿಂದ ತಣ್ಣೀರು ಸುರಿದಿದ್ದಾರೆ. ಬಳಿಕ ಬಾಯ್ ಫ್ರೆಂಡ್ ಸಲೀಂ ಮಕ್ಕಳ ಕೈ ಮೇಲೆ ಸಿಗರೇಟ್ ನಿಂದ ಸುಟ್ಟು ನಂತರ ಹ್ಯಾಶ್ ಹೊಡೆದಿದ್ದಾನೆ.
ಇಮ್ರಾನ್ ಖಾನ್ ನನ್ನ ಆಯೇಷಾ ಮದುವೆಯಾಗಿದ್ದ. ನಂತರ ಈ ದಂಪತಿ ಡಿವೋರ್ಸ್ ಪಡೆದಿದ್ದ. ಹೀಗಾಗಿ ತಾಯಿ ಅಯೇಷಾ ಜೊತೆ ಮಕ್ಕಳಿದ್ದವು. ತಂದೆಯ ಮೇಲಿನ ಸಿಟ್ಟಿಗೆ ಬಾಯ್ ಫ್ರೆಂಡ್ ಜೊತೆ ಸೇರಿ ಮಕ್ಕಳಿಗೆ ಚಿತ್ರಹಿಂಸೆ ಕೊಡುತ್ತಿದ್ದರು.


ಕೆಆರ್ ಎಸ್ ಬಳಿಯ ಲಾಡ್ಜ್ ನಲ್ಲಿ ಹೋಗಿ ಮಕ್ಕಳನ್ನ ನೆಲಕ್ಕೆ ಬಿಸಾಡಿರೋ ಆರೋಪ ಕೇಳಿ ಬಂದಿದ್ದು, ತಾಯಿ ಅಯೇಷಾ, ಸಲೀಂ, ಜಬೀರ್ ಮೇಲೆ ದೂರು ದಾಖಲಾಗಿದೆ. ಚಿತ್ರ ಹಿಂಸೆ ಬಗ್ಗೆ ಹೇಳಿದ್ರೆ ತಂದೆಯನ್ನ ಹಾಗೂ ತಮ್ಮನನ್ನ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಹೆದರಿ ಸಾಕಷ್ಟು ದಿನ ತಂದೆಯ ಬಳಿಯೂ ಹಿಂಸೆ ಬಗ್ಗೆ ಮಕ್ಕಳು ಹೇಳಿರಲಿಲ್ಲ. ಇದೀಗ ಮಕ್ಕಳು ನೀಡಿದ ದೂರಿನ ಮೇಲೆ ಜೆಜೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...