ಮೂರು ತಿಂಗಳ ಕಾಲ ಅನ್‍ಲಿಮಿಟೆಡ್ ಇಂಟರ್‍ನೆಟ್ ಹಾಗೂ ವಾಯ್ಸ್ ಕಾಲ್‍ಗಳ ಮೂಲಕ ಭಾರತೀಯ ಟೆಲಿಕಾಂ ಗ್ರಾಹಕರ ಗಮನ ಸೆಳೆದಿದ್ದ ರಿಲಯಾನ್ಸ್ ನ ಜಿಯೋ 4 ಜಿಗೆ ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸೆಡ್ಡು ಹೊಡೆಯಲು ಮುಂದಾಗಿದೆ.
ಜಿಯೋಗಿಂತಲೂ ಅಗ್ಗದ ಬೆಲೆಯ ನೆಟ್ ಪ್ಯಾಕೇಜ್ ಹಾಗೂ ವಾಯ್ಸ್ ಕಾಲ್‍ನ್ನು ಬಿಎಸ್‍ಎನ್‍ಎಲ್ ಗ್ರಾಹಕರಿಗೆ ನೀಡಲು ಮುಂದಾಗಿದೆ. ಜಿಯೋದಲ್ಲಿರೋ ಹಾಗೇ ಬಿಎಸ್‍ಎನ್‍ಎಲ್ ಸಂಸ್ಥೆಯೂ ಕೂಡ ಇದೀಗ ಉಚಿತ ಕೊಡುಗೆಗಳನ್ನು ನೀಡಲು ಮುಂದಾಗಿದ್ದು, ಜಿಯೋನ ಕೊಡುಗೆಗಳು ಕೇವಲ 4ಜಿಗೆ ಮಾತ್ರ ಅನ್ವಯವಾಗಿದ್ದರೆ, ಬಿಎಸ್‍ಎನ್‍ಎಲ್‍ನಲ್ಲಿ 2ಜಿ ಮತ್ತು 3ಜಿ ಬಳಕೆದಾರರಿಗೂ ಅನ್ವಯವಾಗುತ್ತದೆ ಎಂದು ಹೇಳಿವೆ. ಆದರೆ ಈ ಸೌಲಭ್ಯವನ್ನು ಪಡೆಯಬೇಕಾದಲ್ಲಿ ಮೊಬೈಲ್ ಬಳಕೆದಾರರು ತಮ್ಮ ಮನೆಗಳಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯ ಹೊಂದಿರಬೇಕು ಅಷ್ಟೇ..
ಹೆಚ್ಚಿನ ಬಳಕೆದಾರರು ಮನೆಯಲ್ಲೇ ಹೆಚ್ಚಿನ ಸಮಯ ಕಳೆಯೋ ದೃಷ್ಠಿಯಿಂದ ಔಟ್ ಗೋಯಿಂಗ್ ಕಾಲ್‍ಗಳನ್ನು ಲ್ಯಾಂಡ್‍ಲೈನ್ ನೆಟ್‍ವರ್ಕ್‍ನಲ್ಲೇ ನಿರ್ವಹಿಸುವ ರೀತಿಯಲ್ಲಿ ಯೋಜನೆ ರೂಪಿಸಿಕೊಂಡಿದ್ದಾರೆ.
ಅದೇ ರೀತಿಯಾಗಿ ಬ್ರಾಡ್ ಬ್ಯಾಂಡ್ ಸೇವೆ ಹೊಂದಿರುವ ಗ್ರಾಹಕರು ಮನೆ ಒಳ ಭಾಗ ಮಾತ್ರವಲ್ಲದೇ ಹೊರ ಭಾಗದಲ್ಲೂ ಹೋಗಿ ಮಾತನಾಡಬಹುದು. ಅದಕ್ಕೆ ಗ್ರಾಹಕರು ಮೊಬೈಲ್ ನೆಟ್‍ಪ್ಯಾಕ್ ಹಾಕಿಕೊಂಡರೆ ಸಾಕು. ಟಾಕ್ ಟೈಮ್ ರೀಚಾರ್ಜ್ ಮಾಡುವ ಅಗತ್ಯತೆ ಇರೋದಿಲ್ಲ ಎನ್ನಲಾಗ್ತಾ ಇದೆ.
ಬಿಎಸ್‍ಎನ್‍ಎಲ್‍ನ ಈ ದರ ಕಡಿತದಿಂದಾಗಿ ಏರ್‍ಟೆಲ್, ವೊಡಾಫೋನ್, ಐಡಿಯಾ ಕಂಪನಿಗಳ ಮೇಲೆ ಪರಿಣಾಮ ಬೀರಲಿದ್ದು, ಈ ಕಂಪನಿಯಲ್ಲೂ ದರ ಇಳಿಕೆ ಮಾಡುವ ಒತ್ತಡ ಹೆಚ್ಚಿಸುವ ನಿರೀಕ್ಷೆ ಹೆಚ್ಚಿದೆ.
Like us on Facebook The New India Times
POPULAR STORIES :
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?