ಬೆಂಗಳೂರು: ರಾಜ್ಯದಲ್ಲಿ ಕಾಟನ್ ಕ್ಯಾಂಡಿ ಬ್ಯಾನ್ ಮಾಡಿ ಸರ್ಕಾರದ ಆದೇಶ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಪಾಯಕಾರಿಯಾದ ಕಾಟನ್ ಕ್ಯಾಂಡಿ ಮಾರಾಟ ಮಾಡುವಂತಿಲ್ಲ ಕಾಟನ್ ಕ್ಯಾಂಡಿ ಮಾರಾಟ, ಬಳಕೆ ಮಾಡಿದ್ರ ಕಠಿಣ ಕಾನೂನು ಕ್ರಮ ಗೋಬಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಳಸ್ತಿದ್ದಾರೆ.
ಕಲರ್ ಕಾಟನ್ ಕ್ಯಾಂಡಿಯಲ್ಲಿ ಅಹಾಯಕಾರಿ ಗುಣಗಳಿವೆ ಎರಡು ಕೆಮಿಕಲ್ ಇರೋದು ಪತ್ತೆಯಾಗಿರೋದು ಬಯಲಾಗಿದೆ ಕೆಂಪು ಬಣ್ಣ, ಗುಲಾಬಿ ಬಣ್ಣ ಬರಲು ರಾಸಾಯನಿಕ ಬಳಸ್ತಿದ್ದಾರೆ ಹಾಗಾಗಿ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇದ ಮಾಡ್ತಿದ್ದೇವೆ
ಕ್ಯಾನ್ಸರ್, ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆ ಕ್ರಮ ಕಲರ್ ಬಳಸದೇ ಮಾಡುವ ಕಾಟನ್ ಕ್ಯಾಂಡಿಗೆ ಅವಕಾಶ ಇದೆ ಆಹಾರದಲ್ಲಿ ಕೃತಕ ಬಣ್ಣವನ್ನು ಬಳಸದಂತೆ ಸರ್ಕಾರದ ಆದೇಶ ರೊಡಮೈನ್-ಬಿ, ಟಾರ್ ಟ್ರಾಸೈನ್ ಪದಾರ್ಥ ಬಳಸುವಂತಿಲ್ಲ
ಕಲರ್ ಕಾಟನ್ ಕ್ಯಾಂಡಿ ಮಾರಾಟ ಮಾಡಿದ್ರೆ 7 ವರ್ಷ ಜೈಲು ಆಹಾರದಲ್ಲಿ ರಾಸಾಯನಿಕ ಬಣ್ಣ ಬಳಸಿದ್ರೆ 7 ವರ್ಷ ಜೈಲು ಶಿಕ್ಷೆ ಆಹಾರ ಗುಣಮಟ್ಟ & ಸುರಕ್ಷತಾ ಕಾಯ್ದೆ 2006ರಡಿ ಜೈಲು ಶಿಕ್ಷೆಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.






