ಭಾರತ ಕ್ರಿಕೆಟ್ ತಂಡದ ಅಗ್ರೆಸೀವ್ ಆಟಗಾರ, ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೋಹ್ಲಿ ತನ್ನ ಅತ್ಯದ್ಭುತ ಬ್ಯಾಟಿಂಗ್ ಶೈಲಿಯಲ್ಲಿಯೇ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಕೋಹ್ಲಿಗೆ ಫ್ಯಾನ್ಸ್ ಇದಾರೆ.. ಇನ್ನೂ ಕೆಲವರಂತೂ ಕೊಹ್ಲಿಯ ಪ್ರತಿಯೊಂದು ವಿಧದಲ್ಲೂ ಮಾದರಿಯಾಗಿ ನಡೆದುಕೊಳ್ತಾ ಇದಾರೆ.. ಕೊಹ್ಲಿ ಫಿಟ್ನೆಸ್ ಇರ್ಬೋದು, ಏರ್‍ಸ್ಟೈಲ್ ಇರ್ಬೋದು.. ಎಲ್ಲ ವಿಧದಲ್ಲೂ ಕೊಹ್ಲಿಯನ್ನ ಮಾದರಿಯನ್ನಾಗಿ ಮಾಡಿಕೊಂಡಿದ್ದಾರೆ. ಫಿಟ್ನೆಸ್ ಬಗ್ಗೆ ಅತೀವ ಕಾಳಜಿ ಹೊಂದಿರುವ ಕೊಹ್ಲಿ ಪ್ರೋಟಿನ್ ಯುಕ್ತ ಸಮೃದ್ದ ಡಯಟ್ ಕೂಡ ಮಾಡ್ತಾ ಇದಾರೆ. ಅಷ್ಟೇ ಅಲ್ಲ ಟೀಂ ಇಂಡಿಯಾದ ಸಹ ಆಟಗಾರರಿಗೆ ಕೊಹ್ಲಿಯ ಹಾಗೆ ಪ್ರೋಟಿನ್ ಯುಕ್ತ ಸಮೃದ್ದ ಡಯಟ್ ಮಾಡ್ಬೇಕು ಅಂತ ಬಿಸಿಸಿಐ ಸಲಹೆ ನೀಡಿದೆ. ಇಂತಹ ಡಯಟ್ ಮಾಡೋ ಕೋಹ್ಲಿ ಆರೋಗ್ಯಕ್ಕೆ ವಿರೋಧವಾದ ಪೆಪ್ಸಿ ಆ್ಯಡ್‍ನಲ್ಲಿ ಕಾಣಿಸಿಕೊಳ್ಳೋದು ಎಲ್ಲರಿಗೂ ಪ್ರಶ್ನೆಯಾಗಿ ಉಳಿದಿದೆ.
ಪೆಪ್ಸಿ ಸೇವಿಸೋದ್ರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ ಇವು ದೇಹದ ತೂಕವನ್ನು ಹೆಚ್ಚಿಸುವುದಲ್ಲದೇ ಹಲ್ಲುಗಳು ಕೂಡ ಹುಳುಕು ಬೀಳುತ್ತೆ ಎಂಬುದು ಈಗಾಗಲೇ ಅಧ್ಯಯನದಿಂದ ಧೃಢವಾಗಿದೆ. ಹೀಗಿರುವಾಗ ಆರೋಗ್ಯಕರವಾದ ಡಯಟ್ ಮಾಡುವ ಹಾಗೆ ಮತ್ತೊಬ್ಬರಿಗೆ ಮಾದರಿಯಾಗಿರುವ ಕೊಹ್ಲಿ, ಇಂತಹ ಒಂದು ತಂಪು ಪಾನಿಯ ಜಾಹಿರಾತಿನಲ್ಲಿ ಕಾಣಿಸಿಕೊಂಡಿರೋದು ಎಲ್ಲರಲ್ಲೂ ದ್ವಂದ್ವತೆ ಉಂಟು ಮಾಡಿದೆ. ಫೇಸ್‍ಬುಕ್‍ನಲ್ಲಿ ಸುಮಾರು 3 ಕೋಟಿಗೂ ಅಧಿಕ ಅಭಿಮಾನಿಗಳಿದ್ದು, ಇನ್ಟಾಗ್ರಾಮ್‍ನಲ್ಲಿ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಕೋಹ್ಲಿ, ಅನಾರೋಗ್ಯ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿರೋದು ಎಷ್ಟರ ಮಟ್ಟಿಗೆ ಸಮರ್ಥನೀಯ ಎಂಬ ಪ್ರಶ್ನೆ ಕೋಟ್ಯಾಂತರ ಅಭಿಮಾನಿಗಳದ್ದು.
Like us on Facebook The New India Times
POPULAR STORIES :
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?